Asianet Suvarna News Asianet Suvarna News

ಉಡುಪಿ: ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೋರ್ವ ಕಾರಿನೊಳಗೆ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಂಡ್ಕೂರು ಗ್ರಾಮದಲ್ಲಿ ನಡೆದ ಘಟನೆ. 

46 Year Old Man Committed Suicide in Udupi grg
Author
First Published Jan 26, 2023, 11:17 AM IST

ಉಡುಪಿ(ಜ.26):  ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೊಬ್ಬ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಂಡ್ಕೂರು ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಕೃಷ್ಣ ಸಫಲಿಗ(46) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. 

ಆತ್ಮಹತ್ಯೆಗೆ ಶರಣಾದ ಕೃಷ್ಣ ಸಫಲಿಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಂತ ಹೇಳಲಾಗುತ್ತಿದೆ. 

ಸೈನ್ಸ್ ಓದಲು ಇಷ್ಟವಿಲ್ಲದ್ದಕ್ಕೆ ರಾಯಚೂರು ಮೂಲದ ವಿದ್ಯಾರ್ಥಿನಿ ನೇಣಿಗೆ ಶರಣು!

ಜಮೀನು ತಕರಾರು ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಕೃಷ್ಣ ಸಫಲಿಗ ಆತಂಕಕ್ಕೀಡಾಗಿದ್ದನಂತೆ. ಜಮೀನಿನ ಕುರಿತಾಗಿ ಅಣ್ಣನ‌ ಜೊತೆಗೂ ಜಗಳ ಮಾಡಿಕೊಂಡಿದ್ದನು. ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios