Crime ಅಪ್ರಾಪ್ತೆ ಮೇಲೆ ನಾಲ್ವರ ಗ್ಯಾಂಗ್ ರೇಪ್, ಚಿತ್ರೀಕರಿಸಿ ವಿಡಿಯೋ ಹರಿಬಿಟ್ಟ ದುರುಳರು!

  • 17ರ ಹುಡುಗಿ ಮೇಲೆ ಸಾಮೂಹಿತ ಅತ್ಯಾಚಾರ
  • ಅಪ್ರಾಪ್ತೆ ಹೊತ್ತೊಯ್ದ ಕಾಮುಕರಿಂದ ಕೃತ್ಯ
  • ಚಿತ್ರೀಕರಿಸಿ ವಿಡಿಯೋ ಹರಿಬಿಟ್ಟ ಕಾಮುಕರು
shameful incident Girl gang raped by 4 men and recorded criminal act on Mobile phone case filed in Uttar Pradesh ckm

ಉತ್ತರ ಪ್ರದೇಶ(ಮೇ.28): ಕಠಿಣ ಕಾನೂನು, ಪೊಲೀಸ್ ಸರ್ಪಗಾವಲು, ಸರ್ಕಾರ, ಆಡಳಿತ ಎಲ್ಲವೂ ಇದ್ದರೂ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಘನಘೋರ. ಜೌನ್‌ಪುರ್ ಜಿಲ್ಲೆಯಲ್ಲಿ 17ರ ಬಾಲಕಿಯನ್ನು ಹೊತ್ತೊಯ್ದು ನಾಲ್ವರು ಸಾಮಾಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಪ್ರಾಪ್ತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುತಿಸಿದ್ದಾರೆ. ಇದೀಗ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ.

ರಿವಾಲ್ವರ್‌ ತೋರಿಸಿ ಯುವತಿ ಮೇಲೆ ಮನೆ ಮಾಲೀಕನಿಂದ ರೇಪ್‌

17ರ ಅಪ್ರಾಪ್ತೆ ಸಂಜೆ ವೇಳೆ ಪಕ್ಕದ ಮನೆಗೆ ತೆರಳಿದ್ದಾಳೆ. ಹಿಂತಿರುಗಿ ಬರುವ ವೇಳೆ ನಾಲ್ವರು ಹುಡುಗಿಯನ್ನು ಹೊತ್ತೊಯ್ದಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ವಿಡಿಯೋವನ್ನು ಚಿತ್ರಿಕರಿಸಿದ್ದಾರೆ. ಬಳಿಕ ಈ ವಿಚಾರ ಬಾಯ್ಬಿಟ್ಟಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಘಟನೆಯಿಂದ ಭಯಗೊಂಡ ಅಪ್ರಾಪ್ತೆ ಮನೆಯಲ್ಲಿ ಈ ಕುರಿತು ಯಾವುದೇ ಮಾತನ್ನು ಹೇಳದೆ ಖಿನ್ನತೆ ಜಾರಿದ್ದಾಳೆ. ಇತ್ತ ಕಾಮುಕರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಗಮನಿಸಿದ ಕುಟುಂಬಸ್ಥರು ಈ ಕುರಿತು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. 

ಗುರುಗ್ರಾಮ್: 13 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ಕಾವಲು ನಿಂತ ಸ್ನೇಹಿತ

ಅಪ್ರಾಪ್ತೆ ಮೇಲೆ ಅತ್ಯಾಚಾರ: ಬಂಧನ
ಅಪ್ರಾಪ್ತೆಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸರು ಆರೋಪಿಯೋರ್ವನನ್ನು ಮಂಗಳವಾರ ಬಂಧಿಸಿದ್ದಾರೆ.

ಇಲ್ಲಿಯ ಕಮಲಾಪುರ ನಿವಾಸಿ ಮಹಾದೇವಪ್ಪ ಚನ್ನಪ್ಪ ಸಪೂರಿ (25) ಬಂಧಿತ ಆರೋಪಿ. ಕಳೆದ ಮೇ 13ರಂದು ಮಾಳಾಪೂರ ಬಡಾವಣೆಯ ಮನೆಯ ಮುಂದೆ ಆಟವಾಡುತ್ತಿದ್ದ ಏಳು ವರ್ಷದ ಬಾಲಕಿಯನ್ನು ಸಿನಿಮಾ ತೋರಿಸುವುದಾಗಿ ಪುಸಲಾಯಿಸಿ ತನ್ನ ಬೈಕ್‌ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಅಲ್ಲದೇ ಯಾರ ಮುಂದೆಯೂ ಬಾಯಿ ಬಿಟ್ಟರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದನು. ಮರುದಿನ ಬಾಲಕಿ ಆರೋಗ್ಯದಲ್ಲಿ ತೊಂದರೆಯಾದಾಗ ಮನೆಯವರಿಗೆ ವಿಷಯ ಗೊತ್ತಾಗಿದ್ದು, ಉಪನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
 
ಬಾಲಕಿ ಮೇಲೆ ಶಿಕ್ಷಕನಿಂದ ಅತ್ಯಾಚಾರ: ಆರೋಪ
ಶಿಕ್ಷಕನೊಬ್ಬ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಂಡ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆ.ಆರ್‌.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಬಿ.ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ್‌ ಎಂಬುವರ ವಿರುದ್ಧ ಜಯಕೃಷ್ಣ ಎಂಬುವರು ದೂರು ನೀಡಿದ್ದಾರೆ. ಮಾ.31ರಂದು ಶಾಲೆಯ ವಿದ್ಯಾರ್ಥಿನಿಯ ಕೈ ಮತ್ತು ಕಾಲಿಗೆ ಹಗ್ಗದಿಂದ ಬಿಗಿದು ಶೌಚಾಲಯದಲ್ಲಿ ಕಟ್ಟಿಹಾಕಿದ್ದಾರೆ. ನಂತರ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರವೆಸಗಿದ್ದಾರೆ. ಬಳಿಕ ಬಾಲಕಿಯ ಗೆಳತಿಯರು ಹಗ್ಗ ಬಿಚ್ಚಿ ರಕ್ಷಣೆ ನೀಡಿದ್ದಾರೆ. ಬಾಲಕಿ ಮತ್ತು ಸ್ನೇಹಿತೆಯರು ಪೋಷಕರಿಗೆ ವಿಷಯ ಮುಟ್ಟಿಸಿದ್ದು, ಅದರಂತೆ ಬಾಲಕಿಗೆ ಕಿರುಕುಳ ನೀಡಿ, ಅತ್ಯಾಚಾರವೆಸಗಿರುವ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios