Asianet Suvarna News Asianet Suvarna News

ಡಿಸಿಪಿ ಕಚೇರಿ ಮುಂಭಾಗವೇ ನಡೆಯಿತು ಯುವತಿ ಮೇಲೆ ದೌರ್ಜನ್ಯ; ಬಟ್ಟೆ ಹಿಡಿದು ಎಳೆದಾಡಿ ಕಾಮುಕ ಎಸ್ಕೇಪ್!

ಸಿಲಿಕಾನ್ ಸಿಟಿ ಬೆಂಗಳೂರಿನ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಮುಂಭಾಗವೇ ಕಾಮುಕರು ಯುವತಿಯನ್ನು ಅಡ್ಡಗಟ್ಟಿ ಬಟ್ಟೆ ಹಿಡಿದು ಎಳೆದಾಡಿ ಕಿರುಕುಳ ನೀಡಿರುವ ಘಟನೆ ನ.6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Sexual harassment of young woman in front of DCP office in south end circle at jayanagar bengaluru rav
Author
First Published Nov 13, 2023, 1:49 PM IST

ಬೆಂಗಳೂರು (ನ.13): ಸಿಲಿಕಾನ್ ಸಿಟಿ ಬೆಂಗಳೂರಿನ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಮುಂಭಾಗವೇ ಕಾಮುಕರು ಯುವತಿಯನ್ನು ಅಡ್ಡಗಟ್ಟಿ ಬಟ್ಟೆ ಹಿಡಿದು ಎಳೆದಾಡಿ ಕಿರುಕುಳ ನೀಡಿರುವ ಘಟನೆ ನ.6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತ ಯುವತಿ ರಾತ್ರಿ 10.40ರ ಸುಮಾರಿಗೆ ಕೆಲಸ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿ. ಈ  ವೇಳೆ ಬೈಕ್‌ನಲ್ಲಿ ಯುವತಿಯ ಹಿಂದೆ ಫಾಲೋ ಮಾಡಿಕೊಂಡು ಬಂದಿರುವ ಕಾಮುಕ. ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಮುಂಭಾಗದಲ್ಲಿ ತೆರಳುತ್ತಿದ್ದ ಯುವತಿ. ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಅಶ್ಲೀಲ ನಿಂದನೆ ಮಾಡಿ ಬಳಿಕ ಬೈಕ್ ಯೂಟರ್ನ್ ತೆಗೆದುಕೊಂಡು ಎಸ್ಕೇಪ್ ಆಗಿರುವ ಕಿಡಿಗೇಡಿ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಯುವತಿ. ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಕಿಡಿಗೇಡಿ ಯುವಕನಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.

 

ಕಾಳೇನ ಅಗ್ರಹಾರದ ಬಳಿ ಸರಣಿ ಅಪಘಾತ; ಹಿಂಬದಿ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ! 

Follow Us:
Download App:
  • android
  • ios