Asianet Suvarna News Asianet Suvarna News

ಕಾಳೇನ ಅಗ್ರಹಾರದ ಬಳಿ ಸರಣಿ ಅಪಘಾತ; ಹಿಂಬದಿ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ!

ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನ ಕಾಳೇನ ಅಗ್ರಹಾರದ ಬಳಿ ನಡೆದಿದೆ. ಅಭಿಷೇಕ್ ಅಗರವಾಲ್ ಕಾರು ಚಾಲಕ. ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಚಾಲಕ.

Serial accident in Kalena Agrahara; Serious injury to motorist at benglauru rav
Author
First Published Nov 13, 2023, 11:43 AM IST

ಬನ್ನೇರುಘಟ್ಟ : (ನ.13) ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನ ಕಾಳೇನ ಅಗ್ರಹಾರದ ಬಳಿ ನಡೆದಿದೆ.

ಅಭಿಷೇಕ್ ಅಗರವಾಲ್ ಕಾರು ಚಾಲಕ. ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಚಾಲಕ. ಡಿಕ್ಕಿಯ ರಭಸಕ್ಕೆ ಮೇಲೆ‌ ಹಾರಿ‌ ಕೆಳಗೆ ಬಿದ್ದ ಬೈಕ್ ಸವಾರ ಕಿರಣ್. ಮತ್ತೊಂದು ಬೈಕ್ ಡಿಕ್ಕಿಯಾಗಿ ಜಸ್ಮಿತ ಹಾಗು ಬಸಂತ್ ಕುಮಾರ್ ಸಹ ಗಾಯ. ಸರಣಿ ಅಪಘಾತದಲ್ಲಿ  ಜಸ್ಮಿತಾ ಎಂಬ ಮಹಿಳೆಗೂ ಗಂಭೀರಗಾಯಗಳಾಗಿವೆ.

ಅಪಘಾತದ ಭಯಾನಕ ದೃಶ್ಯ  ಹಿಂಬದಿ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಕ್ಯಾಮರಾದಲ್ಲಿ ಸೆರೆ. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲು

ಬೆಂಗಳೂರು: ಸರಣಿ ಅಪಘತಕ್ಕೆ ತಾಯಿ-ಮಗು ಬಲಿ, ನಾಲ್ವರಿಗೆ ಗಾಯ

ಬೈಕ್‌ಗೆ KSRTC ಬಸ್ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

ಚನ್ನಪಟ್ಟಣ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್  ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮನಕೆರೆ ಏರಿ ಮೇಲೆ ನಡೆದಿದೆ.

ಸಿದ್ದಪ್ಪ (65), ಅರುಣ (23) ಮೃತ ದುರ್ದೈವಿಗಳು.
ಕೆರೆಗೆ ತಡೆಗೋಡೆ ಇದ್ದ ಕಾರಣ ಬಸ್‌ನಲ್ಲಿದ್ದ ಪ್ರಯಾಣಿಕರು ಪಾರು. ವೇಗದ ಚಾಲನೆಯಿಂದ ಸಂಭವಿಸಿರುವ ಅಪಘಾಥ. ಸದ್ಯ ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ದೇಹಗಳು ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Follow Us:
Download App:
  • android
  • ios