NGO ನಡೆಸ್ತಿದ್ದ ಮಹಿಳೆಯಿಂದ ಬಾಲಕಿ ಮೇಲೆ ಲೈಂಗಿಕ ಶೋಷಣೆ, ಅರೆಸ್ಟ್!

* ದೆಹಲಿಯಲ್ಲಿ ಎನ್‌ಜಿಒ ನಡೆಸುತ್ತಿದ್ದ ಮಹಿಳೆ ಅರೆಸ್ಟ್

 * ಲೈಂಗಿಕ ಶೋಷಣೆ ನಡೆಸಿರುವ ಆರೋಪದಡಿ ಬಂಧಿಸಿದ ಪೊಲೀಸರು

* ಅಶ್ಲೀಲ ಫೋಟೋ ಹಾಗೂ ವಿಡಿಯೋ ಮಾಡಿ ಅದನ್ನು ವೈರಲ್ ಮಾಡುವಂತೆ ಬೆದರಿಕೆ ಹಾಕ್ತಿದ್ದ ಮಹಿಳೆ

Sexuak harassment on Minor Girl Police arrests Lady who is running NGO pod

ನವದೆಹಲಿ(ಜೂ.13): ದೆಹಲಿಯಲ್ಲಿ ಎನ್‌ಜಿಒ ನಡೆಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ಶೋಷಣೆ ನಡೆಸಿರುವ ಆರೋಪ ಕೇಳಿ ಬಂದಿದೆ. ಹದಿನಾರು ವರ್ಷದ ಅಪ್ರಾಪ್ತ ಬಾಲಕಿ ಮಹಿಳೆ ವಿರುದ್ಧ ಇಂತಹುದ್ದೊಂದು ಆರೋಪ ಮಾಡಿದ್ದಾಳೆ. ವಿಚಾರಣೆ ಆರಂಭಿಸಿರುವ ಪೊಲೀಸರು ಮಹಿಳೆಯನ್ನು ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ. ಮಹಿಳೆಯನ್ನು ದೆಹಲಿಯ ಡಬಡೀ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಿಳೆ ವಿರುದ್ಧ ಮತ್ತೊಬ್ಬ ಯುವತಿಯೂ ದೂರು ನೀಡಿದ್ದು, ಪೊಲೀಸರು ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.

ಇನ್ನು ಆರೋಪಿ ಮಹಿಳೆ ಅಂಜಲಿ ಗೆಹ್ಲೋಟ್‌ ಎನ್‌ಜಿಒ ನಡೆಸುತ್ತಿದ್ದಾರೆ. ಈ ಮಹಿಳೆ ಹದಿನಾರುಇ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆನ್ನಲಾಗಿದ್ದು, ಬಾಲಕಿ ತನ್ನ ಮನೆಯವರಿಗೆ ಈ ವಿಚಾರ ತಿಳಿಸಿದ್ದಾಳೆ. ಅಂಜಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋ ಮಾಡಿ ಅದನ್ನು ವೈರಲ್ ಮಾಡುವಂತೆ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರೆಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಇನ್ನು ಮಹಿಳೆಗೆ ಬಹಳ ದೂರ ದೂರದ ಸಂಪರ್ಕವಿತ್ತೆನ್ನಲಾಗಿದೆ. ಅತ್ಯಂತ ಗಣ್ಯ ಹಾಗೂ ಪ್ರಭಾವಿ ವ್ಯಕ್ತಿಗಳ ಸಂಪರ್ಕವೂ ಇತ್ತೆನ್ನಲಾಘಿದೆ. ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 506ರಡಿ ದೂರು ದಾಖಲಿಸಿದ್ದಾರೆ. ಇಪ್ಪತ್ತು ವರ್ಷದ ಓರ್ವ ಯುವತಿಯೂ ತನ್ನೊಂದಿಗೆ ಈ ಮಹಿಳೆ ನಡೆಸಿದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Latest Videos
Follow Us:
Download App:
  • android
  • ios