Asianet Suvarna News Asianet Suvarna News

ಸೆಕ್ಸ್‌ ರಾಕೆಟ್‌ನಲ್ಲಿ ಸಿಕ್ಕಾಕೊಂಡ ಯುವತಿಯಿಂದ ಶಾಕಿಂಗ್ ಮಾಹಿತಿ ಬಹಿರಂಗ, ಪ್ರಮುಖ ಬಿಜೆಪಿ ನಾಯಕ ಅರೆಸ್ಟ್‌!

* ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು

* ದಂಧೆಯಲ್ಲಿ ಪಾಲ್ಗೊಂಡಿದ್ದ ಮೂವರು ಅರೆಸ್ಟ್‌

* ಬಂಧಿತ ಯುವತಿಯಿಂದ ಶೇಆಕಿಂಗ್ ಮಾಹಿತಿ, ಬಿಜೆಪಿ ನಾಯಕನಿಗೆ ಕಂಟಕ

Sex racket busted at UP Nai mandi Three arrested BJP leader name in the case pod
Author
Bengaluru, First Published May 18, 2022, 5:16 PM IST

ಲಕ್ನೋ(ಮೇ.18): ಬಿಜೆಪಿ ನಾಯಕನಿಬ್ಬನ ವಿರುದ್ಧ ವೇಶ್ಯಾವಾಟಿಕೆ ಆರೋಪ ಕೇಳಿ ಬಂದಿದೆ. ಈ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ವೇಶ್ಯಾವಾಟಿಕೆ ಆರೋಪದ ಮೇಲೆ ಬಿಜೆಪಿ ನಾಯಕನನ್ನು ನಯೀ ಮಂಡಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಸೆಕ್ಸ್ ರ್ಯಾಕೆಟ್‌ನಲ್ಲಿ ಸಿಕ್ಕಾಕೊಂಡ ಯುವತಿ ಬಾಯ್ಬಿಟ್ಟ ಆಘಾತಕಾರಿ ಮಾಹಿತಿ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ. 

ಸೆಕ್ಸ್ ರಾಕೆಟ್‌ನಲ್ಲಿ ಬಿಜೆಪಿ ನಾಯಕನ ಹೆಸರು

ಆರೋಪಿ ಬಿಜೆಪಿ ಮುಖಂಡ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ಸಿಕ್ಕಿಬಿದ್ದ ಯುವತಿ ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ನಾಯಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಲ್ಲಿಂದ ಜೈಲಿಗೆ ಕಳುಹಿಸಿದ್ದಾರೆ. ನಯೀ ಮಂಡಿ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್ ಹರ್ಷರಣ್ ಶರ್ಮಾ, ಎಸ್‌ಎಸ್‌ಐ ಎಂಎಸ್ ಬಿಶ್ತ್ ಅವರು ಪೊಲೀಸ್ ತಂಡದೊಂದಿಗೆ ಬಿಜೆಪಿ ಮುಖಂಡ ಜಿತೇಂದ್ರ ಚೌಧರಿ ಅವರನ್ನು ಸಂಧಾವಳಿ ಪುಲಿಯಾ ಬಳಿಯಿಂದ ಬಂಧಿಸಿದ್ದಾರೆ. ಪೊಲೀಸರು ಸ್ಥಳದಿಂದ ಯುವತಿ ಮತ್ತು ಇಬ್ಬರು ಯುವಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಎರಡು ದಿನಗಳ ನಂತರ ಕಟ್ಟಡ ಮಾಲೀಕನನ್ನು ಹಿಡಿದು ಜೈಲಿಗೆ ಕಳುಹಿಸಲಾಯಿತು. ಈ ಸೆಕ್ಸ್ ರ್ಯಾಕೆಟ್‌ ಹಿಂದೆ ಬಿಜೆಪಿ ನಾಯಕನ ಕೈವಾಡ ಇದೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.

Davanagere Crime: ಹೆತ್ತವ್ವಳ ಮಡಿಲು ಸೇರಿದ ಕಂದಮ್ಮ: ಮಗು ಕಳ್ಳಿ ಅರೆಸ್ಟ್‌

ಬಿಜೆಪಿ ಮುಖಂಡನ ಬಂಧನ

ಬಿಜೆಪಿ ಮುಖಂಡನನ್ನು ವೇಶ್ಯಾವಾಟಿಕೆಗಾಗಿ ಬಂಧಿಸಲಾಗಿದೆ ಎಂದು ನಯೀ ಮಂಡಿ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ ಗಾಂಧಿ ಕಾಲೋನಿಯ ರಸ್ತೆ ಸಂಖ್ಯೆ 16ರ ಮನೆಯೊಂದರ ಮೇಲೆ ದಾಳಿ ನಡೆಸಿ ಸೆಕ್ಸ್‌ ರ್ಯಾಕೆಟ್‌ ಮೇಲೆ ದಾಳಿ ನಡೆಸಿದ್ದೆವು. ಇದನ್ನು ಗೋಯಲ್ ಕೋಚಿಂಗ್ ಸೆಂಟರ್‌ನ ಹೆಸರು ಬಳಸಿ ನಡೆಸಲಾಗುತ್ತಿತ್ತು. ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ, ಜಿತೇಂದ್ರ ಚೌಧರಿ ಸಂಘಟನೆಯಲ್ಲಿ ಪದಾಧಿಕಾರಿಯಾಗಿರಲಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರೂಪೇಂದ್ರ ಸೈನಿ ಹೇಳುತ್ತಾರೆ. ಕಾರ್ಯಕರ್ತರಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಯಾವುದೇ ಪಕ್ಷದ ಮುಖಂಡರು, ಪದಾಧಿಕಾರಿಗಳು ಅಥವಾ ಕಾರ್ಯಕರ್ತರು ತಪ್ಪು ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನುಡಿದಿದ್ದಾರೆ. 

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಟಾಯ್ಲೆಟ್‌ನಲ್ಲಿ ದಂಧೆ!

ಹೊರ ರಾಜ್ಯದ ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೆಶ್ಯಾವಾಟಿಕೆ ನಡೆಸುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಲಾಡ್ಜ್ ಮೇಲೆ ಮೈಸೂರು ಒಡನಾಡಿ ಸೇವಾ ಸಂಸ್ಥೆ ಪೊಲೀಸರ ಸಹಕಾರದೊಂದಿಗೆ ದಾಳಿ ನಡಿಸಿ ಮೂವರು ಪುರುಷರು, ಓರ್ವ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

Sex Racket: ಇಲ್ಲೂ ಅದೇ ಕತೆ.. ಹೊರಗೆ ಸ್ಪಾ.. ಒಳಗೆ ವೇಶ್ಯಾವಾಟಿಕೆ ಅಡ್ಡೆ!

ಮೈಸೂರು ಒಡನಾಡಿ ಸಂಸ್ಥೆ ಖಚಿತ ಮಾಹಿತಿ ಪಡೆದು ಚಿತ್ರದುರ್ಗ ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಮಧ್ಯಾಹ್ನ ಪ್ರಜ್ವಲ್ ಲಾಡ್ಜ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಲಾಡ್ಜ್ ಮ್ಯಾನೇಜರ್ ಹಗ್ಗದ ಸಹಾಯದಿಂದ ಜಿಗಿದು ಓಡಿ ಹೋಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಲಾಡ್ಜ್ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಲಾಡ್ಜ್ನ ಟಾಯ್ಲೆಟ್ ರೂಮಿನಲ್ಲಿ ಹೊರ ನೋಟಕ್ಕೆ ಗೋಡೆಯಂತೆ ಕಾಣಿಸುವ, ಗೋಡೆಯ ಒಳಗೆ ಅಡಗುತಾಣ ನಿರ್ಮಿಸಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ.

ಯೋಜಿತ ರೀತಿಯಲ್ಲಿ ಈ ದಂಧೆ ನಡೆಯುತ್ತಿದ್ದು, ಲಾಡ್ಜ್ ಹೊರಗಡೆ ಒಬ್ಬ ಹಾಗೂ ಮೊದಲ ಮಹಡಿಯ ರಿಸಪ್ಷನಿಸ್ಟ್ ಜಾಗದಲ್ಲಿ ಮೂವರನ್ನು ಕಣ್ಗಾವಲಿಗೆ ಇಟ್ಟುಕೊಳ್ಳಲಾಗಿತ್ತು. ಪೊಲೀಸರು ಬರುವುದು ಗೊತ್ತಾದ ಕೂಡಲೇ ರಿಸಪ್ಷನಿಸ್ಟ್ ಕಾಲ ಕೆಳಗೆ ಇದ್ದ ಸ್ವಿಚ್ ಒತ್ತಿದ ತಕ್ಷಣ ಅದು ಮೂರನೇ ಮಹಡಿಯಲ್ಲಿ ದೇವರ ನಾಮದೊಂದಿಗೆ ರಿಂಗ್ ಆಗುತ್ತೆ. ಕೂಡಲೇ ಯುವತಿಯರು ಟಾಯ್ಲೆಟ್ ರೂಮ್ ಒಳಗೆ ಹೋಗಿ ಟೈಲ್ಸ್ ಮೂಲಕ ಮಾಡಲ್ಪಟ್ಟ ಬಾಗಿಲನ್ನು ತೆಗೆದು ಅವಿತುಕೊಳ್ಳುತ್ತಿದ್ದದ್ದು ಗೊತ್ತಾಗಿದೆ. ಎಲ್ಲ ಪರಿಶೀಲನೆ ನಡೆಸಿದ ಬಳಿಕ ನಾಲ್ವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಕಾರ್ಯಾಚರಣೆಯಲ್ಲಿ ಮೈಸೂರು ಒಡನಾಡಿ ಸೇವಾ ಸಂಸ್ಥೆಯ ರಕ್ಷಣಾ ತಂಡದಲ್ಲಿ ಪ್ರದೀಪ್, ಸುಜನ, ಶಶಾಂಕ್, ಸುಮಾ ಹಾಗೂ ಮಹಾಲಕ್ಷ್ಮಿ ಇದ್ದರು. 

ಗ್ರಾಮೀಣ ಭಾಗದಲ್ಲಿ ವೇಶ್ಯವಾಟಿಕೆ ನಡೆಸೋದಕ್ಕೆ‌ ಕಾರಣ ರೈತರೇ ಇವರ ಟಾರ್ಗೆಟ್ 

ಉಸಿರಾಡುವುದಕ್ಕೂ ಅವಕಾಶವಿಲ್ಲದ ಅಡಗುದಾಣ ನಿರ್ಮಿಸಿಕೊಂಡು ವೆಶ್ಯಾವಾಟಿಕೆ ಮಾಡಲಾಗುತ್ತಿದೆ. ಇಂತಹ ಕೃತ್ಯಗಳನ್ನು ನಗರ ಪ್ರದೇಶಗಳ ಕೆಲವು ಲಾಡ್ಜ್ಗಳಲ್ಲಿ ಕಂಡುಬAದಿವೆ. ಆದರೆ ಇದು ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿರುವುದು ನಿಜಕ್ಕೂ ಆತಂಕಕಾರಿ. ಇಲ್ಲಿಯ ರೈತರನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ. ಇದರಿಂದ ಸಮಾಜ ಆರ್ಥಿಕ, ಸಾಂಸ್ಕೃತಿ ಹಾಗೂ ಸಾಮಾಜಿಕವಾಗಿ ದುಸ್ಥಿತಿ ತಲುಪಲಿದೆ. ಇದನ್ನು ಸಾಧ್ಯವಾದಷ್ಟು ತಡೆ ಹಿಡಿಯಬೇಕು ಎಂಬ ಉದ್ದೇಶದಿಂದ ಖಚಿತ ಮಾಹಿತಿ ಪಡೆದು, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದೇವೆ. ಲಾಡ್ಜ್ಗಳಲ್ಲಿ ಅಡಗು ತಾಣಗಳನ್ನು ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಅಂತಹ ಲಾಡ್ಜ್ಗಳನ್ನು ಗುರುತಿಸಿ ಶಾಶ್ವತವಾಗಿ ಮುಚ್ಚಬೇಕು ಎಂದು ಮಾನವ ಹಕ್ಕುಗಳ ಆಯೋಗ ಆದೇಶ ಮಾಡಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಂತಹ ಲಾಡ್ಜ್ ಮಗಳನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಒಡನಾಡಿ ಸಂಸ್ಥೆ ನಿರ್ದೇಶಕರಾದ ಸ್ಟಾನ್ಲಿ ಒತ್ತಾಯಿಸಿದರು.

Follow Us:
Download App:
  • android
  • ios