ಸೆಕ್ಸ್ ಸಿಡಿ ಪ್ರಕರಣ/ ರಮೇಶ್ ಜಾರಕಿಹೊಳಿ ಮೊಬೈಲ್ ಜಪ್ತಿ ಮಾಡಿದ ಎಸ್‌ಐಟಿ/ ರಮೇಶ್ ಜಾರಕಿಹೊಳಿ ಯುವತಿ ಜೊತೆಗೆ ವಿಡಿಯೋ ಕಾಲ್ ಮಾಡಿದ್ದ ಆರೋಪ/ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ಮಾಡಿರುವ ಎಸ್ಐಟಿ/
ಬೆಂಗಳೂರು(ಮಾ. 24) ಸಿಡಿ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಮಹತ್ವದ ಹೆಜ್ಜೆ ಇಟ್ಟಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊಬೈಲ್ ಜಪ್ತಿ ಮಾಡಿರುವ ಎಸ್‌ಐಟಿ ಮಾಹಿತಿ ಕಲೆಹಾಕಿದೆ.
ರಮೇಶ್ ಜಾರಕಿಹೊಳಿ ಯುವತಿ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ ಎನ್ನಲಾಗಿತ್ತು ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ಮಾಡಿರುವ ಎಸ್‌ಐಟಿಗೆ ಕೆಲ ಅಂಶಗಳು ಸ್ಪಷ್ಟವಾಗಿವೆ.
'ಮಂಚ ಏರಿದ ಸಚಿವರು ಸ್ಟೇ ತಂದಿದ್ದಾರೆ'
ಎಸ್ಐಟಿಯ ಕೆಲ ಪ್ರಶ್ನೆಗಳಿಗೆ ಜಾರಕಿಹೊಳಿ ಸರಿಯಾದ ಉತ್ತರ ಕೊಟ್ಟಿರಲಿಲ್ಲ ಎಂಬುದು ಮೂಲಗಳ ಮಾಹಿತಿ ಹಲವು ಆಯಾಮಗಳಲ್ಲಿ ಪ್ರಕರಣ ಕುರಿತು ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಇದೀಗ ತನಿಖೆ ಭಾಗವಾಗಿ ರಮೇಶ್ ಜಾರಕಿಹೊಳಿ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಮೇಲೆ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಪ್ರಕರಣವನ್ನು ಸರ್ಕಾರ ಎಸ್‌ಐಟಿಗೆ ನೀಡಿತ್ತು. ಇನ್ನೊಂದು ಕಡೆ ಯುವತಿಯ ಮನೆಯವರಿಂದ ಮಗಳು ಅಪಹರಣವಾಗಿದ್ದಾಳೆ ಎಂದು ದೂರು ದಾಖಲಾಗಿತ್ತು.
