ಹೊಟ್ಟೆನೋವಿಗೆ ಸಿಗದ ಮುಕ್ತಿ, ಮದುವೆಯಾದ 33 ದಿನಕ್ಕೆ ಸಾವಿಗೆ ಶರಣಾದ ನವವಿವಾಹಿತೆ!

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ನವವಿವಾಹಿತೆಯೊಬ್ಬರು ಹೊಟ್ಟೆ ನೋವಿನಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಕೇವಲ ಒಂದು ತಿಂಗಳು ಮೂರು ದಿನಗಳಾಗಿದ್ದ 21 ವರ್ಷದ ಬಿಂದು ಎಂಬಾಕೆಯೇ ಮೃತಳು.

severe abdominal pain Newly married woman dies at chikkamagaluru rav

ರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಡಿ.27): ಹೊಟ್ಟೆ ನೋವು ತಾಳಲಾರದೆ ಮನೆಯಲ್ಲೇ ನೇಣುಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಆತ್ಮಹತ್ಯೆ ಶರಣಾಗಿರುವ ಮೃತಳನ್ನ 21 ವರ್ಷದ ಬಿಂದು ಎಂದು ಗುರುತಿಸಲಾಗಿದೆ. ಮೃತ ಬಿಂದು ಕಳೆದ ನವೆಂಬರ್ 24ರಂದು ಮದುವೆಯಾಗಿದ್ದಳು. ಮದುವೆಯಾಗಿ ಕೇವಲ ಒಂದು ತಿಂಗಳು ಮೂರು ದಿನವಾಗಿದೆ ಅಷ್ಟೆ. ಮೂಲತಃ ತರೀಕೆರೆ ತಾಲೂಕಿನ ಗುಳ್ಳದಮನೆ ನಿವಾಸಿ ಬಿಂದುಳನ್ನ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಂತೇನಹಳ್ಳಿ ಮೂಲಕ ಪ್ರಸನ್ನಕುಮಾರ್ ಎಂಬುವರಿಗೆ ಮದುವೆ ಮಾಡಲಾಗಿತ್ತು. ಮೃತ ಬಿಂದು ಮದುವೆಯನ್ನೂ ಖುಷಿಯಿಂದಲೇ ಆಗಿದ್ದಳು. ಕಳೆದ ಮೂರು ದಿನದ ಹಿಂದೆ ಗಂಡನ ಜೊತೆ ತವರು ಮನೆಗೆ ಬಂದಿದ್ದಳು. ಮೂರು ದಿನದಿಂದ ದೇವಸ್ಥಾನಗಳಿಗೆ ಹೋಗುತ್ತಿದ್ದ ದಂಪತಿಗಳು ಮನೆಯಲ್ಲಿನ ಪೂಜೆಯಲ್ಲೂ ಪಾಲ್ಗೊಂಡಿದ್ದರು. 

ವೈದ್ಯರು ಓವರ್‌ಡೋಸ್ ಇಂಜೆಕ್ಷನ್ ನೀಡಿದ ಆರೋಪ; ಹೊಟ್ಟೆನೋವು ಅಂತಾ ಬಂದು ಜೀವ ಬಿಟ್ಟ ಮಹಿಳೆ!

ಇಂದು ತೀವ್ರ ಹೊಟ್ಟೆನೋವು ತಾಳಲಾರದೆ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಬಿಂದುವಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಹೊಟ್ಟೆನೋವು ಇತ್ತು. ಅದು ಪಿರಿಯಡ್ಸ್ ಟೈಮಿನಲ್ಲಿ ತೀವ್ರ ಹೆಚ್ಚಾಗುತ್ತಿತ್ತು. ಈ ಬಗ್ಗೆ ಕುಟುಂಬಸ್ಥರು ಆಸ್ಪತ್ರೆಗೂ ತೋರಿಸಿದ್ದರು. ಆದರೆ, ನೋವು ಕಡಿಮೆಯಾಗಿರಲಿಲ್ಲ. ಇಂದು ಕೂಡ ಹೊಟ್ಟೆನೋವು ಹೆಚ್ಚಿದ್ದ ಕಾರಣ ತಾಳಲಾರದೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಿಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತರೀಕೆರೆ ತಹಶೀಲ್ದಾರ್ ಭೇಟಿ ನೀಡಿ ಶವಪರೀಕ್ಷೆ ನಡೆಸಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios