Asianet Suvarna News Asianet Suvarna News

Bengaluru: ಸಿನಿಮಾ ನೋಡಿ ಬುಲೆಟ್ ಬೈಕ್‌ಗಳನ್ನು ಕದಿಯುತ್ತಿದ್ದ ಏಳು ಮಂದಿ ಬಂಧನ

ಸಿನಿಮಾಗಳಿಂದ ಪ್ರಭಾವಿತರಾಗಿ ಐಷಾರಾಮಿ ಲೈಫ್ ಲೀಡ್ ಮಾಡಲು ನಗರದಲ್ಲಿ ದುಬಾರಿ ಬೆಲೆಯ ಎನ್ ಫೀಲ್ಡ್ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಏಳು ಮಂದಿ ಅಂತರಾಜ್ಯ ಖದೀಮರನ್ನು ಬಂಧಿಸುವಲ್ಲಿ ಬನಶಂಕರಿ ಪೊಲೀಸರು ಯಶಸ್ವಿಯಾಗಿದ್ದಾರೆ. 

Seven Arrested for Bullet Bikes Theft Cases in Bengaluru gvd
Author
Bangalore, First Published Apr 4, 2022, 11:51 PM IST | Last Updated Apr 4, 2022, 11:51 PM IST

ಬೆಂಗಳೂರು (ಏ.04): ಅವರು ಚೆನ್ನಾಗಿ ಓದಿಕೊಂಡ ವಿದ್ಯಾವಂತರು. ಇಂಜಿನಿಯರಿಂಗ್ (Engineering) ಹಾಗೂ ಎಂಬಿಎ (MBA) ಪದವಿದರು. ಕೆಲಸಕ್ಕಾಗಿ ಸತತ ಪರಿಶ್ರಮ ಪಟ್ಟಿದ್ದರೆ ಒಂದೊಳ್ಳೆ ಕಂಪೆನಿಯಲ್ಲಿ ಕೆಲಸ‌‌ ಗಿಟ್ಟಿಸಿಕೊಂಡು ಕೈ-ತುಂಬಾ ಹಣ ಸಂಪಾದಿಸುತ್ತಿದ್ದರು. ಆದರೆ ಕಷ್ಟಪಡದೆ ಸುಲಭವಾಗಿ ಹಣ ಗಳಿಸುವ ಉಮೇದಿಗೆ ಬಿದ್ದ ಆ ಏಳು ವಿದ್ಯಾವಂತರು ಕಳ್ಳತನ‌ ಪ್ರಕರಣದಲ್ಲಿ (Theft Cases) ಕಂಬಿ ಹಿಂದೆ ಸರಿದಿದ್ದಾರೆ. ಸಿನಿಮಾಗಳಿಂದ ಪ್ರಭಾವಿತರಾಗಿ ಐಷಾರಾಮಿ ಲೈಫ್ ಲೀಡ್ ಮಾಡಲು ನಗರದಲ್ಲಿ ದುಬಾರಿ ಬೆಲೆಯ ಎನ್ ಫೀಲ್ಡ್ ಬೈಕ್‌ಗಳನ್ನು (Bullet Bikes) ಕಳ್ಳತನ ಮಾಡುತ್ತಿದ್ದ ಏಳು ಮಂದಿ ಅಂತರಾಜ್ಯ ಖದೀಮರನ್ನು ಬಂಧಿಸುವಲ್ಲಿ ಬನಶಂಕರಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ. 

ಆಂಧ್ರದ ಚಿತ್ತೂರು ಮೂಲದ ಆರೋಪಿಗಳಾದ ವಿಜಯ್, ಹೇಮಂತ್, ಗುಣಶೇಖರ್ ರೆಡ್ಡಿ, ಭಾನುಮೂರ್ತಿ, ಪುರುಷೋತ್ತಮ್, ಕಾರ್ತಿಕ್ ಹಾಗೂ ಕಿರಣ್‌ ಎಂಬುವರನ್ನು ಬಂಧಿಸಿ 68 ಲಕ್ಷ ಮೌಲ್ಯದ 30 ಬೈಕ್‌ಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳೆಲ್ಲರೂ ಒಂದೇ ಏರಿಯಾದವರಾಗಿದ್ದು, ಎಂಜಿನಿಯರ್, ಎಂಬಿಎ ಸೇರಿದಂತೆ ಉನ್ನತ ಶಿಕ್ಷಣ ಪಡೆದಿದ್ದರು‌. ಲಾಕ್ ಡೌನ್ ವೇಳೆ ತಾವು ಅಂದುಕೊಂಡ ಕೆಲಸ ಸಿಗದಿದ್ದರಿಂದ ಹತಾಶೆಗೊಳಗಾಗಿದ್ದರು. ಅಲ್ಲದೆ ಸಿನಿಮಾ ಹುಚ್ಚು ಬೆಳೆಸಿಕೊಂಡಿದ್ದ ಆರೋಪಿಗಳು ಸಿನಿಶೈಲಿಯಲ್ಲಿ ಕಡಿಮೆ ಅವಧಿಯಲ್ಲಿ ಬೇಗನೆ ಶ್ರೀಮಂತರಾಗುವ ಕನಸು ಕಂಡಿದ್ದರು‌. ಇದಕ್ಕಾಗಿ ಪ್ಲ್ಯಾನ್ ಮಾಡಿಕೊಂಡ‌ ಖದೀಮರು ಬೈಕ್ ಕಳ್ಳತನ ಮಾಡಲು ನಿರ್ಧರಿಸಿದ್ದರು. 

Udupi ಚಿನ್ನ ಕದ್ದ 24ಗಂಟೆಯೊಳಗೆ ಕಂಬಿಯೊಳಗೆ ಕಪಿಸೂರ್ಯ!

ಯುಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಚೋರರು: ಕಳ್ಳತನ ಮಾಡುವುದನ್ನು ತೀರ್ಮಾನಿಸಿಕೊಂಡಿದ್ದ ಖದೀಮರು ಬೈಕ್ ಕಳ್ಳತನ ಹೇಗೆ ಮಾಡುವುದರ ಬಗ್ಗೆ ಯುಟ್ಯೂಬ್‌ನಲ್ಲಿ ನೋಡಿ ಕಲಿತುಕೊಂಡು ಫೀಲ್ಡ್‌ಗಿಳಿದಿದ್ದ ಆರೋಪಿಗಳು ಪಬ್ಲಿಕ್‌ ಪ್ಲೇಸ್‌ನಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಿ ಆಂಧ್ರದಲ್ಲಿ‌‌ ಕಡಿಮೆ ಬೆಲೆಗೆ ಮಾರಾಟ ಮಾಡುತಿದ್ದರು. ಬಂದ ಹಣದಲ್ಲಿ ಸಮನಾಗಿ ಹಂಚಿಕೊಂಡು ಮೋಜು ಜೀವನ ನಡೆಸುತಿದ್ದರು. ಇತ್ತೀಚೆಗೆ ಬನಶಂಕರಿ‌‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ‌ ಪ್ರಕರಣ ದಾಖಲಿಸಿಕೊಂಡಿದ್ದ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಹಾಗೂ‌ ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ವಿಚಾರಣೆ ವೇಳೆ ಕಳೆದ‌‌‌ ಮೂರು ವರ್ಷಗಳಿಂದ ಸಂಘಟಿತರಾಗಿ ಬೈಕ್‌ ಕಳವು ಮಾಡುತ್ತಿರುವ ಬಗ್ಗೆ ಗೊತ್ತಾಗಿದೆ. ಬಂಧಿತರ ವಿರುದ್ಧ ಕೆಆರ್ ಪುರಂ, ಬನಶಂಕರಿ, ಸಿ.ಕೆ.ಅಚ್ಚುಕಟ್ಟು, ಜಯನಗರ, ಬಾಣಸವಾಡಿ, ಮಾರತ್ ಹಳ್ಳಿ, ಬೇಗೂರು, ಹೊಸಕೋಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 27 ಪ್ರಕರಣ ದಾಖಲಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ಬನಶಂಕರಿ ಪೊಲೀಸರು ತೀವ್ರಗೊಳಿಸಿದ್ದಾರೆ.

Latest Videos
Follow Us:
Download App:
  • android
  • ios