ಧಾರವಾಡ(ಜ. 14) ಧಾರವಾಡ ತಾಲೂಕಿನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸರಣಿ ಅಪಘಾತ ಅವಘಡಗಳನ್ನು ಸೃಷ್ಟಿಸಿದೆ.

ಕಾರು-ಬೈಕ್-ಟಾಟಾ ಏಸ್ ನಡುವೆ ಡಿಕ್ಕಿಯಾಗಿದ್ದು ಓರ್ವ  ಸಾವನ್ನಪ್ಪಿದ್ದಾರೆ. ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಟಾಟಾ ಏಸ್ ಚಾಲಕ ನರೇಂದ್ರ ಗ್ರಾಮದ ನಿವಾಸಿ ಲಕ್ಷ್ಮಣಗೌಡ (35) ದಾರುಣ ಸಾವಿಗೀಡಾಗಿದ್ದಾರೆ.

ಧಾರವಾಡ-ಬೆಳಗಾವಿ ರಸ್ತೆಯ ಪೆಪ್ಸಿ ಕಾರ್ಖಾನೆ ಬಳಿ ದುರ್ಘಟನೆ ಸಂಭವಿಸಿದೆ. ಬೆಳಗಾವಿ ಕಡೆಯಿಂದ ಬರುತ್ತಿದ್ದ ಕಾರು  ಡಿವೈಡರ್ ಗೆ ಮೊದಲು ಡಿಕ್ಕಿಯಾಗಿದೆ. ಬಳಿಕ ಎದುರಿಗೆ ಬರುತ್ತಿದ್ದ ಟಾಟಾ ಏಸ್ ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಪಲ್ಟಿಯಾಗಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿದೆ.