Bengaluru Police Commissioner: ಕನ್ನಡಿಗ ಕಮಿಷನರ್..ಪಂತ್ ಜಾಗಕ್ಕೆ ಸಿಎಂ ತವರಿನ ಅಧಿಕಾರಿ!
* ವರ್ಷಾಂತ್ಯಕ್ಕೆ ಪೊಲೀಸ್ ಇಲಾಖೆಯಲ್ಲಿ ಂಏಜರ್ ಸರ್ಜರಿ
* ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಕನ್ನಡಿಗ ದಯಾನಂದ್
* ಪದೋನ್ನತಿ ವಿಚಾರದಲ್ಲಿ ಸಿಎಂ ಮೇಲೆ ಮುನಿಸು
* ಕಮಲ್ ಪಂತ್ ಸ್ಥಾನಕ್ಕೆ ದಯಾನಂದ್?
ಬೆಂಗಳೂರು(ಡಿ. 31) ವರ್ಷದ ಕೊನೆ ದಿನ ಪೊಲೀಸ್ (Karnataka Police) ಇಲಾಖೆಯಲ್ಲಿ ಭಾರೀ ಬದಲಾವಣೆಯಾಗಲಿದೆ ಎನ್ನುವುದು ಬಹುತೇಕ ಪ್ಕಕಾ ಆಗಿದೆ. ಆಡಳಿತಯಂತ್ರದಲ್ಲಿ ಬದಲಾವಣೆ ತರಲು ಸಿಎಂ ತೀರ್ಮಾನ ಮಾಡಿದ್ದಾರೆ.
ಕನ್ನಡಿದ ಐಪಿಎಸ್ ಅಧಿಕಾರಿಗೆ ಒಲಿದ ಬೆಂಗಳೂರು ಪೊಲೀಸ್ ಕಮಿಷನರ್ (Police commissioner) ಹುದ್ದೆ ಒಲಿಯುವುದು ಪಕ್ಕಾ ಆಗಿದೆ. ಬಿ.ದಯಾನಂದ್ (B Dayanand) ಹೆಸರು ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ಬಹುತೇಕ ಫೈನಲ್ ಆಗಿದ್ದು ಅಧಿಕೃತ ಆದೇಶ ಹೊರ ಬೀಳುವುದಷ್ಟೇ ಬಾಕಿ ಇದೆ.
ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು ಮೂಲದ ಬಿ.ದಯಾನಂದ್ ಸದ್ಯ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಮಿಷನರ್ ಹುದ್ದೆಗೆ ಎಡಿಜಿಪಿ ದರ್ಜೆ ಅಧಿಕಾರಿಗಳಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಉಮೇಶ್ ಕುಮಾರ್, ಅಲೋಕ್ ಕುಮಾರ್ , ಬಿ ದಯಾನಂದ್ ನಡುವೆ ಪೈಪೋಟಿ ಇದೆ. ರೋಕ್ಷವಾಗಿ ಸಿಎಂ ಬೊಮ್ಮಾಯಿ ಮೇಲೆಯೂ ಅಧಿಕಾರಿಗಳು ಒತ್ತಡ ತಂದಿದ್ದಾರೆ. ಸಂಘಪರಿವಾರದ ಮೂಲಕ ಸಿಎಂ ಮೇಲೆ ಒತ್ತಡ ಹಾಕಿಸಿದ್ದಾರೆ ಎನ್ನುವ ವದಂತಿಯೂ ಜೋರಾಹಿ ಹಬ್ಬಿದೆ.
Bollywood Drugs: ಹೀಗೂ ಆಗುತ್ತದೆ...ನಕಲಿ NCB ಅಧಿಕಾರಿಗಳ ಕಾಟಕ್ಕೆ ಪ್ರಾಣ ತೆತ್ತ ನಟಿ!
ಹಿರಿಯ ಅಧಿಕಾರಿಗಳಾದ ಅಮೃತ್ ಪೌಲ್ ,ಪ್ರತಾಪ್ ರೆಡ್ಡಿ, ಹರಿಶೇಖರನ್ ಕೂಡ ರೇಸ್ ನಲ್ಲಿ ಇದ್ದಾರೆ. ಪೊಲೀಸ್ ಕಮಿಷನರ್ ಆಗಿರುವ ಕಮಲ್ ಪಂತ್ ವರ್ಗಾವಣೆಯಾಗುವುದು ಪಕ್ಕಾ ಆಗಿದ್ದು ಆ ಸ್ಥಾನಕ್ಕೆ ಕನ್ನಡಿಗರೇ ನೇಮಕವಾಗಲಿದ್ದಾರೆ ಎನ್ನಲಾಗಿದೆ.
ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಬಿಗ್ ಶಾಕ್: ಪದೊನ್ನತಿಗೆ ಅರ್ಹತೆ ಪಡೆದಿರುವ 25 ಐಪಿಎಸ್ ಅಧಿಕಾರಿಗಳಿದ್ದು ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಐಜಿಯಿಂದ ಎಡಿಜಿಗೆ ಮೂವರು,ಡಿಐಜಿ ಇಂದ ಐಜಿ ಗೆ ನಾಲ್ವರು, ಎಸ್ ಎಸ್ಪಿ ಯಿಂದ ಡಿಐಜಿಗೆ ನಾಲ್ವರು , ಉಳಿದಂತೆ ಐಪಿಎಸ್ ನಿಂದ ಎಸ್ಎಸ್ ಪಿ ಗೆ ಪದೊನ್ನತಿ ಹೊಂದಬೇಕಿತ್ತು. ಪದೋನ್ನತಿ ತಡೆ ಹಿಡಿದಿರುವ ಹಿನ್ನೆಲೆ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತವಾಗುತ್ತಿದೆ. ಸಿ ಎಂ ನಿರ್ಧಾರದಿಂದ ಐಪಿಎಸ್ ವಲಯದಲ್ಲಿ ತೀವ್ರ ಅಸಮಾಧಾನ ಎದ್ದಿದೆ ಎನ್ನುವ ಮಾತಿದೆ.
ಬಹಿರಂಗ ಸಂಭ್ರಮಾಚರಣೆ ಇಲ್ಲ: ಕರ್ನಾಟಕದಲ್ಲಿ (Karnataka) ಓಮಿಕ್ರೋನ್ ಅಬ್ಬರ ಶುರುವಾಗಿದೆ. ಮೂರನೇ ಅಲೆಗೆ ಓಮಿಕ್ರೋನ್ ಕಾರಣವಾಗುತ್ತದೆಯಾ ಎಂಬ ಆತಂಕ ಆವರಿಸಿದೆ. ಕರ್ನಾಟಕ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಟಫ್ ರೂಲ್ಸ್ ಜಾರಿ ಮಾಡಿದ್ದು ಬಹಿರಂಗ ಸಂಭ್ರಮಾಚರಣೆ ಇಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಜನರು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ನಿಯಮಾವಳಿ ಪಾಲನೆ ಮಾಡಬೇಕು ಎಂದು ಪೊಲೀಸ್ ಕಮಿಷನರ್ ಪಂತ್ ಮನವಿ ಮಾಡಿಕೊಂಡಿದ್ದರು. ಅನಗತ್ಯ ಓಟಾಟ ನಡೆಸಿದರೆ ಕಾನೂನು ಕ್ರಮ ಅನುಸರಿಸಬೇಕಾಗುತ್ತದೆ. ಹೊಸ ವರ್ಷಾಚರಣೆ ವೇಳೆ ಬಹಿರಂಗ ಸಂಭ್ರಮಾಚರಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಡ್ರಗ್ಸ್ ವಿರುದ್ಧ ನಿರಂತರ ಕಾರ್ಯಾಚರಣೆ: ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರ್ ರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಮಾಡಲಾಗಿತ್ತು. ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಅಂದರ್ ನ್ನು ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಬಂಧಿಸಿತ್ತು.
ಕೋಣನಕುಂಟೆ ಕೆ.ಎಸ್.ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ ಮಾದಕ ವಸ್ತು ದಂಧೆಕೋರರ ಮೇಲೆ ದಾಳಿ ಮಾಡಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳ ಬಂಧನ ಮಾಡಲಾಗಿದೆ. ನ್ಯೂ ಇಯರ್ ಹಿನ್ನಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.