ಮನೆಯ ಮಾಲೀಕನ 10 ವರ್ಷದ ಮಗುವಿನ ಜೊತೆ ಅಸ್ವಾಭಾವಿಕ ಸೆಕ್ಸ್ ನಡೆಸಿದ 60 ವರ್ಷದ ವ್ಯಕ್ತಿ ಮೊಹಮದ್ ಇದ್ರಿಸ್‌ನನನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಬಂಧಿಸಲಾಗಿದೆ. ಇದ್ರಿಸ್‌ನ ಮಗ ನೀಡಿದ ದೂರಿನ ಆಧಾರದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ನಾಗ್ಪುರ (ಜು.15): ತನ್ನ ಮಾಲೀಕನ 10 ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಸೆಕ್ಸ್ ಹಾಗೂ ರೇಪ್ ಮಾಡಿದ ಆರೋಪದ ಮೇಲೆ 65 ವರ್ಷದ ವ್ಯಕ್ತಿಯನ್ನು ನಾಗ್ಪುರದ ಪೋಲೀಸರು ಬಂಧಿಸಿದ್ದಾರೆ. ಜುಲೈ 12 ರಂದು ನಡೆದ ಘಟನೆ ಇದಾಗಿದ್ದು, ಬಂಧಿತ ವ್ಯಕ್ತಿಯನ್ನು ಮೊಮಹದ್ ಇದ್ರೀಸ್ ಎಂದು ಗುರುತಿಸಲಾಗಿದೆ. ಈತನ ಕೃತ್ಯವನ್ನು ಗಮನಿಸಿದ ಮಗನೇ ಪೊಲೀಸರಿಗೆ ಮಾಹಿತಿ ಒಪ್ಪಿಸಿದ್ದಲ್ಲದೆ ತಂದೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ಖಾಸಗಿ ಜಿನ್ನಿಂಗ್ ಘಟಕದಲ್ಲಿ (ಹತ್ತಿ ಬಿಡಿಸುವ ಘಟಕ) ಕೆಲಸ ಮಾಡುತ್ತಿದ್ದ ಇದ್ರಿಸ್, 10 ವರ್ಷದ ಮಗುವಿಗೆ ಚಾಕೋಲೇಟ್ ಕೊಡಿಸುವ ಆಮಿಷ ಒಡ್ಡಿದ್ದ ಎಂದು ತಿಳಿದುಬಂದಿದೆ. ಬಳಿಕ ಆಕೆಯನ್ನು ಬಲವಂತವಾಗಿ ಟೆರಸ್‌ಗೆ ಕರೆದುಕೊಂಡು ಹೋಗಿದ್ದ ಇದ್ರಿಸ್, ಅಲ್ಲಿ ಆಕೆಯ ಜೊತೆ ಅಸ್ವಾಭಾವಿಕ ಸೆಕ್ಸ್ ಹಾಗೂ ರೇಪ್ ಮಾಡುವಾಗ ಸ್ವಂತ ಮಗನ ಕೈಯಲ್ಲಿಯೇ ಸಿಕ್ಕಿಬಿದ್ದಿದ್ದ.
ಇದ್ರಿಸ್ ತನ್ನ ಮಗ ಮತ್ತು ಸೊಸೆಯೊಂದಿಗೆ ಕಳೆದ ಐದು ವರ್ಷಗಳಿಂದ ಮಾಲೀಕರ ನಿವಾಸದಲ್ಲಿ ಬಾಡಿಗೆದಾರನಾಗಿ ಉಳಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆಯ ಕೃತ್ಯವನ್ನು ಮೊದಲಿಗೆ ನೋಡಿದ್ದ ಮಗ, 10 ವರ್ಷದ ಮಗುವನ್ನು ರಕ್ಷಿಸಿದ್ದು ಮಾತ್ರವಲ್ಲೆ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾನೆ.
ಪಕ್ಕದ್ಮನೆ ಹುಡುಗನಿಂದ ಲವ್, ಸೆಕ್ಸ್ ಔರ್ ದೋಖಾ..: ಮೋಸ ಹೋದ ಹುಡುಗಿಯಿಂದ ದೂರು
ಬಳಿಕ ಮೊಹದಮ್ ಇದ್ರಿಸ್ ತಪ್ಪಿಸಿಕೊಲ್ಳುವ ಪ್ರಯತ್ನ ಕೂಡ ಮಾಡಿದ್ದ. ಆದರ, ಮಗ ತನ್ನ ತಂದೆಯನ್ನು ಬಂಧಿಸುವಲ್ಲಿಯೂ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಯಶೋಧರ ನಗರ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಜ್ಞಾನೇಶ್ವರ ಭೇದೋದ್ಕರ್ ತಿಳಿಸಿದ್ದಾರೆ.
Bengaluru: ಹಾರ್ನ್ ಹಾಕಿದ್ದಕ್ಕೆ ಕಾರಿನ ಗಾಜು ಒಡೆದ ಬೈಕರ್ಸ್, ಒಂದೇ ಟ್ವೀಟ್, ಮೂವರು ಅರೆಸ್ಟ್!
