Bengaluru: ಹಾರ್ನ್ ಹಾಕಿದ್ದಕ್ಕೆ ಕಾರಿನ ಗಾಜು ಒಡೆದ ಬೈಕರ್ಸ್, ಒಂದೇ ಟ್ವೀಟ್, ಮೂವರು ಅರೆಸ್ಟ್!
ಹಾರ್ನ್ ಹಾಕಿ ಸೈಡ್ ಕೇಳಿದ ಕಾರು ಸವಾರನ ಮೇಲೆ ದ್ವಿಚಕ್ರವಾಹನ ಸವಾರ ಯುವಕರ ಗುಂಪು ಕಾರಿನ ಗಾಜು ಒಡೆದು ವಾಹನವನ್ನು ಧ್ವಂಸಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಚಾಲಕ ಟ್ವೀಟ್ ಮಾಡಿ ಅಳಲು ತೋಡಿಕೊಂಡಿದ್ದು, ತಕ್ಷಣ ಪೊಲೀಸರು ಮೂರನ್ನು ಬಂಧಿಸಿದ್ದಾರೆ.
ಬೆಂಗಳೂರು (ಜು.14): ಇಬ್ಬರು ಬೈಕರ್‌ಗಳು ಕಾರಿನ ಮುಂದೆ ಸವಾರಿ ಮಾಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ವೀಡಿಯೊ ಮತ್ತಷ್ಟು ಚಲಿಸುತ್ತಿದ್ದಂತೆ, ಇಬ್ಬರು ಬೈಕ್ ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಕಾರಿನ ಚಾಲಕನನ್ನು ನಿಂದಿಸುತ್ತಾರೆ. ನಂತರ, ಇಬ್ಬರು ಯುವಕರು ಅವರೊಂದಿಗೆ ಸೇರಿಕೊಂಡು, ನಾಲ್ವರು ಕಾರನ್ನು ಧ್ವಂಸ ಮಾಡಲು ಹೊರಡುತ್ತಾರೆ.
ಈ ಘಟನೆ ನಡೆದಿರುವುದು ವೈಟ್‌ಫೀಲ್ಡ್ ವಿಭಾಗದ ಗುಂಜೂರು, ವರ್ತೂರಿನಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹಾರ್ನ್ ಹಾಕಿ ಸೈಡ್ ಕೇಳಿದ ಕಾರು ಸವಾರನ ಮೇಲೆ ದ್ವಿಚಕ್ರವಾಹನ ಸವಾರರ ಗುಂಪು ಆಕ್ರೋಶಭರಿತರಾಗಿ ನಂತರ ಸುಮಾರು ನಾಲ್ವರು ಬೈಕ್‌ನಲ್ಲಿ ಬಂದ ಯುವಕರು ಕಾರಿನ ಗಾಜು ಒಡೆದು ವಾಹನವನ್ನು ಧ್ವಂಸಗೊಳಿಸಿದ್ದಾರೆ.
ಬೆಂಗಳೂರಿನಾದ್ಯಂತ ಮೆಟ್ರೋ ಬಳಿ ಮೀಟರ್ ಚಾಲಿತ ಆ್ಯಪ್ ಆಧಾರಿತ ಆಟೋ ಸೌಲಭ್ಯ
ದಾಳಿಯ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯಾಹ್ನ 2.30ರ ಸುಮಾರಿಗೆ ಗುಂಜೂರು ಮುಖ್ಯರಸ್ತೆಯಲ್ಲಿ ಝಿಗ್‌ಜಾಗ್ ರೀತಿಯಲ್ಲಿ ಬೈಕ್ ಗಳನ್ನು ಯುವಕರು ಓಡಿಸುತ್ತಿದ್ದರು. ಈ ವೇಳೆ ಹಾರ್ನ್ ಹಾಕಿ ಕಾರು ಮುಂದಕ್ಕೆ ಚಲಿಸಲು ದಾರಿ ಬಿಡುವಂತೆ ಕಾರಿನ ಚಾಲಕ ಮನವಿ ಮಾಡಿದ್ದಾರೆ. ಇದು ಬೈಕ್‌ನಲ್ಲಿ ಝಿಗ್‌ಜಾಗ್ ರೀತಿಯಲ್ಲಿ ಚಲಿಸುತ್ತಿದ್ದ ಯುವಕರ ಗುಂಪಿಗೆ ಸಿಟ್ಟು ತರಿಸಿ ಹಾರ್ನ್ ಶಬ್ದದಿಂದ ಕೋಪಗೊಂಡು ಒಂದೆರಡು ಯುವಕರು ತಮ್ಮ ಬೈಕ್‌ಗಳನ್ನು ಕಾರಿನ ಮುಂದೆ ತಡೆದು ಚಾಲಕನನ್ನು ನಿಂದಿಸಿ ದಾಳಿಗೆ ಮುಂದಾಗಿದ್ದಾರೆ.
ಒಂದು ಹಂತದಲ್ಲಿ ಬೈಕ್ ಸವಾರನೊಬ್ಬ ಕಾರಿಗೆ ಢಿಕ್ಕಿ ಹೊಡೆದಿದ್ದು, ಪರಿಸ್ಥಿತಿ ಕೈ ತಪ್ಪುತ್ತಿರುವುದನ್ನು ಗಮನಿಸಿದ ಕಾರು ಚಾಲಕ ಸ್ಥಳದಿಂದ ತೆರಳಿದ್ದಾನೆ. ಆದರೂ ಬೈಕ್ ಸವಾರರು ಆತನನ್ನು ಹಿಂಬಾಲಿಸಿ ಅಪಾರ್ಟ್‌ಮೆಂಟ್ ಬಳಿ ಮತ್ತೆ ವಾಹನ ತಡೆದು ವಾಹನದ ಗಾಜುಗಳನ್ನು ಒಡೆದು ಹಾಕಿದ್ದಾರೆ.
Bengaluru double murder case: ಎಂಡಿ, ಸಿಇಒ ಕೊಲೆಗೆ ಮಾಜಿ ಮಾಲಿಕನಿಂದಲೇ ಸುಪಾರಿ!
ಈ ಸಂಪೂರ್ಣ ಕೃತ್ಯ ಸಮೀಪದ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಗರ ಪೊಲೀಸರಿಗೆ ಟ್ಯಾಗ್ ಮಾಡಿ, ಬೆಂಗಳೂರಿನ ಬೀದಿಯಲ್ಲಿ ಗೂಂಡಾಗಳು. ಇದದರ ಬಗ್ಗೆ ಇನ್ನೂ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಎಂದು ಬೈಕ್ ಸವಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾರು ಚಾಲಕ ಮನವಿ ಮಾಡಿದ್ದಾರೆ.
ಕೂಡಲೇ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ವರ್ತೂರು ಪಿಎಸ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ನಮ್ಮ ಕಣ್ಗಾವಲಿನಲ್ಲಿ ಇಂತಹ ಅಶಿಸ್ತಿನ ನಡವಳಿಕೆ ಅಥವಾ ಗೂಂಡಾಗಿರಿಗೆ ಅವಕಾಶವಿರುವುದಿಲ್ಲ ಮತ್ತು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದು, ಈ ಸಂಬಂಧ ಮೂವರನ್ನು ಇಂದು ಬಂಧಿಸಿದ್ದಾರೆ.
ಮಾತ್ರವಲ್ಲ ಈ ಬಗ್ಗೆ ಪೊಲೀಸರು ಇಂತಹ ಸಹಿಷ್ಣುತೆಯನ್ನು ಸಹಿಸುವುದಿಲ್ಲ. ಆರೋಪಿಗಳನ್ನು ಬಂಧಿಸಲಾಗಿದೆ. ಭವಿಷ್ಯದಲ್ಲಿ, ತಕ್ಷಣ ಮತ್ತು ತ್ವರಿತವಾಗಿ ಇಂತಹ ಘಟನೆ ಕಂಡು ಬಂದರೆ ದಯವಿಟ್ಟು #Namma112 ಅನ್ನು ಡಯಲ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.