ಬ್ರ್ಯಾಂಡೆಡ್ ಕಂಪನಿ ಹೆಸರಲ್ಲಿ ನಕಲಿ ಬಟ್ಟೆ ಮಾರಾಟ; ಲಕ್ಷಾಂತರ ರೂ. ಬಟ್ಟೆ ಪೊಲೀಸರ ವಶಕ್ಕೆ
ಪ್ರತಿಷ್ಠಿತ ಬ್ರಾಂಡೆಡ್ ಕಂಪನಿಗಳ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಅಪಾರ್ಟ್‌ಮೆಂಟ್ ಒಂದರ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಕಲಿ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ನ.5) ಪ್ರತಿಷ್ಠಿತ ಬ್ರಾಂಡೆಡ್ ಕಂಪನಿಗಳ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಅಪಾರ್ಟ್‌ಮೆಂಟ್ ಒಂದರ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಕಲಿ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್ಮಾನಿ, ಬರ್ಬರಿ ಸೇರಿದಂತೆ ಹಲವು ಬ್ರಾಂಡ್ ಗಳ ಹೆಸರು ಲೋಗೊ ಬಳಸಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಆರೋಪಿಗಳು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದರುವ ವಿವಿ ಪುರಂ ಪೊಲೀಸರು.
ಐಶ್ವರ್ಯ @50: ನಕಲಿ ಉಂಗುರ ಕೊಟ್ಟು ಪ್ರಪೋಸ್ ಮಾಡಿದ್ದ ಅಭಿಷೇಕ್- ಇಂಟರೆಸ್ಟಿಂಗ್ ವಿಷ್ಯ ವೈರಲ್
ಬ್ರಾಂಡ್ ಬಟ್ಟೆಗಳನ್ನು ಹೋಲುವಂತೆ ನಕಲಿ ಸೃಷ್ಟಿಸಿ ಮಾರಾಟ ಮಾಡುವ ದಂಧೆ ಮಾಡುತ್ತಿದ್ದ ಆರೋಪಿ ಮೋಹಿತ್. ಮಾರುಕಟ್ಟೆಯಲ್ಲಿರುವ ಬ್ರಾಂಡ್ ಕಂಪನಿಗಳ ಬಟ್ಟೆಗಳನ್ನೇ ಹೋಲುವಂತೆ ನಕಲಿ ಶರ್ಟ್ ಪ್ಯಾಂಟ್ ತಯಾರಿಸಿ ಮಾರಾಟ. ಈ ಬಗ್ಗೆ ಹಲವು ಬ್ರಾಂಡ್ ಕಂಪನಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದವು. ಈ ಹಿನ್ನೆಲೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಲಕ್ಷಾಂತರ ರೂ ಮೌಲ್ಯದ ನಕಲಿ ಬಟ್ಟೆಗಳು ಪತ್ತೆಯಾಗಿವೆ. ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾದ ಪೊಲೀಸರು.
ಹುಲಿ ಉಗುರಿನ ಪೆಂಡೆಂಟ್ ಪ್ರಕರಣ: ಹಕ್ಕಿಪಿಕ್ಕಿ ಸಮದಾಯಕ್ಕೆ ಸಂಕಷ್ಟ!
ನಕಲಿ ಹಾವಳಿ:
ಬೆಂಗಳೂರಿನಂತ ಮಹಾನಗರದಲ್ಲಿ ನಕಲಿ ಮಾಡುವ ಹಾವಳಿ ಹೆಚ್ಚಾಗಿದೆ. ವಿಶ್ವ ದರ್ಜೆಯ ಬ್ರಾಂಡ್‌ಗಳನ್ನು ರಚಿಸಲು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಆರ್ & ಡಿ ಚಟುವಟಿಕೆಗಳಲ್ಲಿ ಸಾಕಷ್ಟು ಖರ್ಚು ಮಾಡುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ನಕಲಿಗಳ ಹಾವಳಿಯಿಂದ ನಷ್ಟ ಅನುಭವಿಸುವಂತಾಗಿದೆ.ಇದು ಸರ್ಕಾರಕ್ಕೆ, ನಿಜವಾದ ವಸ್ತು ತಯಾರಕರಿಗೆ ಮತ್ತು ಗ್ರಾಹಕರಿಗೆ ಮೋಸ ಜೊತೆಗೆ ನಿಜವಾದ ಬ್ರಾಂಡ್ ಗುರುತಿಸುವುದು ಸವಾಲಾಗಿ ಪರಿಣಮಿಸಿದೆ.