ಹುಲಿ ಉಗುರಿನ ಪೆಂಡೆಂಟ್ ಪ್ರಕರಣ: ಹಕ್ಕಿಪಿಕ್ಕಿ ಸಮದಾಯಕ್ಕೆ ಸಂಕಷ್ಟ!

ಹುಲಿ‌ ಉಗುರಿನ ಪೆಂಡೆಂಟ್ ಪ್ರಕರಣ ಹಲವರ ನಿದ್ರೆಗೆಡಿಸಿದೆ. ಆದ್ರೆ ನಕಲಿ  ಹುಲಿ ಉಗರು ಪೆಂಡೆಂಟ್  ತಯಾರಿಸಿ ಅದರ ಮೇಲೆ ಜೀವನ ಸಾಗಿಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

Tiger Claw Pendant Case Trouble for Tribals Community At Davanagere gvd

ರಿಪೋರ್ಟರ್: ವರದರಾಜ್, ದಾವಣಗೆರೆ

ದಾವಣಗೆರೆ (ಅ.30): ಹುಲಿ‌ ಉಗುರಿನ ಪೆಂಡೆಂಟ್ ಪ್ರಕರಣ ಹಲವರ ನಿದ್ರೆಗೆಡಿಸಿದೆ. ಆದ್ರೆ ನಕಲಿ  ಹುಲಿ ಉಗರು ಪೆಂಡೆಂಟ್  ತಯಾರಿಸಿ ಅದರ ಮೇಲೆ ಜೀವನ ಸಾಗಿಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ  ವಾಸವಿರುವ ಹಕ್ಕಿ ಪಿಕ್ಕಿ ಸಮುದಾಯದ ಬಿಸಿನೆಸ್‌ಗೆ ಪೊಲೀಸ್ ತನಿಖೆ, ಅರಣ್ಯ ಇಲಾಖೆ ಕಾನೂನು  ಹೊಡೆತ ಕೊಟ್ಟಿದೆ. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ. 

ರಾಜ್ಯದಲ್ಲಿ ಹುಲಿ ಉಗುರು ಪೆಂಡೆಂಟ್ ಸಿಕ್ಕಿ ಸಿಕ್ಕವರನ್ನು ಪರಚುತ್ತಿದೆ.  ಶೋಕಿಗೆ , ಲಕ್ ಎಂದು ಹುಲಿ ಉಗುರು ಪೆಂಡೆಂಟ್ ಧರಿಸಿದವರು  ಪೇಚಿಗೆ ಸಿಲುಕಿದ್ದಾರೆ. ಆದ್ರೆ ಕಳೆದ ಎರಡು ವಾರಗಳಿಂದ  ನಕಲಿ ಹುಲಿ ಉಗುರು ಪೆಂಡೆಂಟ್ ತಯಾರಿಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದ ಬಿಸಿನಸ್ ಗೆ ಹೊಡೆತ ಕೊಟ್ಟಿದೆ.. ದಾವಣಗೆರೆ ಜಿಲ್ಲೆಯ ಗೋಪ್ ನಾಳ್, ಅಸ್ತಾಪುರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಅಲೆಮಾರಿ ಸಮುದಾಯದ ಬಿಸಿನೆಸ್ ಮೇಲೆ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಭಾರಿ ಪರಿಣಾಮ ಬೀರಿದೆ. 

ಕಾಂಗ್ರೆಸ್ ಪಕ್ಷ ಮನೆಯೊಂದು ನಾಲ್ಕು ಬಾಗಿಲು ಆಗಿದೆ: ಸಂಸದ ಮುನಿಸ್ವಾಮಿ

ದಾವಣಗೆರೆ ಜಿಲ್ಲೆಯಲ್ಲಿರುವ ಗೋಪ್ ನಾಳ್ ನಲ್ಲಿ ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದ ಕಸುಬುಗಳಲ್ಲಿ ಕೃತಕ ಹುಲಿ ಉಗುರು ಪೆಂಡೆಂಟ್ ತಯಾರಿಕೆಯು ಒಂದು. ದನದ ಕೊಂಬು ಗಳಿಂದ , ಕಾಲಿನ ಗೊರಚೆಗಳಿಂದ ನಕಲಿ ಪೆಂಡೆಂಟ್ ಗಳನ್ನು ತಯಾರಿಸುತ್ತಾರೆ. ಕೊಂಬಿಗೆ  ಆಕರ್ಷಕ ರೂಪ ಕೊಟ್ಟು ಒಂದು ಪೆಂಡೆಂಟ್ ನ್ನು 300 - 500 ರೂಪಾಯಿಗೆ ಮಾರಾಟ ಮಾಡುತ್ತಾರೆ. ಜಾತ್ರೆ ಹಬ್ಬ ಸಮಾರಂಭಗಳಲ್ಲಿ ಮಾರುಕಟ್ಟೆಗಳನ್ನು ಈ ಕೃತಕ ಹುಲಿ ಉಗುರುಗಳನ್ನು ಮಾರಾಟ ಮಾಡುತ್ತಾರೆ.  ಅದೃಷ್ಟದ ಸಂಕೇತವೆಂತಲೋ.. ಭಯ ಹೋಗಲಾಡಿಸಿಲು ಹೀಗೆ ಯಾವುದೋ ಕಾರಣದಿಂದ ಖರೀದಿಸಿದವರು ಚಿನ್ನ ಬೆಳ್ಳಿ ಲೋಹಗಳಲ್ಲಿ ಪೋಣಿಸಿಕೊಂಡು ಕೊರಳಲ್ಲಿ ಹಾಕಿಕೊಳ್ಳುತ್ತಾರೆ.


 
ಹುಲಿ ಉಗುರಿನ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿದ ನಂತರ ಹಕ್ಕಿಪಿಕ್ಕಿ ಸಮುದಾಯದ ನಾಲ್ಕೈದು ಜನರನ್ನು ಕರೆದುಕೊಂಡು ಪೊಲೀಸರು ಅರಣ್ಯ ಇಲಾಖೆ ತನಿಖೆ ಮಾಡಿದೆ. ಹುಲಿ ಉಗುರು ಪೆಂಡೆಂಟ್ ನಕಲಿ ಕೃತಕ ಎಂದು ಗೊತ್ತಾದ ಮೇಲೆ ಕೆಲವರನ್ನು ಬಿಟ್ಟುಕಳಿಸಿದೆ. ಇದೀಗ ಪೊಲೀಸ್ ಠಾಣೆಗಳಲ್ಲಿ ದೂರು ಆದ ನಂತರ ನಕಲಿ ಪೆಂಡೆಂಟ್ ಗಳನ್ನು ಯಾರು ಖರೀದಿಸುತ್ತಿಲ್ಲ. ರಿಸರ್ವ್ ಫಾರೆಸ್ಟ್  ಸಮೀಪದ  ಅರಣ್ಯ ಇಲಾಖೆ ಸಿಬ್ಬಂದಿ ವಿನಾಃಕಾರಣ ಹಕ್ಕಿಪಿಕ್ಕಿ ಸಮುದಾಯದ  ಯುವಕರಿಗೆ ಕಿರಿಕಿರಿ ನೀಡುತ್ತಿದ್ದಾರೆ. 

ಸಾಮಾಜಿಕ ಸಮಾನತೆಗೆ ಜಾತಿ, ಜನಗಣತಿ ಅಗತ್ಯ: ಬಿ.ಕೆ.ಹರಿಪ್ರಸಾದ್

ಕೃತಕ ಹುಲಿ ಉಗುರು ತಯಾರಿಸುವುದನ್ನು ಕುಲಕಸುಬಾಗಿ ಮಾಡಿಕೊಂಡಿರುವ ಹಕ್ಕಿಪಿಕ್ಕಿ ಸಮುದಾಯಕ್ಕೆ ಇದೀಗ ಒಂದು ತೆರನಾದ ಭಯ ಆವರಿಸಿದೆ. ನಕಲಿ ಹುಲಿ ಉಗುರು, ರುದ್ರಾಕ್ಷಿ, ಮಾಸಾಜ್ ಎಣ್ಣೆ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಜನಾಂಗದ ಬಿಸಿನಸ್ ಗೆ ಭಾರಿ ಹೊಡೆತ ಬಿದ್ದಿದೆ. ಈ ವೃತ್ತಿ ಬಿಟ್ಟು ಬೇರೆ ಯಾವುದೇ ಕೆಲಸ ಗೊತ್ತಿಲ್ಲದ ಸಮುದಾಯಕ್ಕೆ  ಈಗ ಸಂಕಷ್ಟ ಎದುರಾಗಿದ್ದು ವ್ಯಾಪಾರ ವಹಿವಾಟು ನಡೆಸಲು ಸರ್ಕಾರ  ಅನುವು ಮಾಡಿಕೊಡುವಂತೆ ಬೇಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios