Raichur: ಗಾಂಜಾ ಮಿಶ್ರಿತ ಚಾಕಲೇಟ್ ವಶ: ಇಬ್ಬರ ಬಂಧನ
ಪೋಷಕರೇ ಎಚ್ಚರ.. ಎಚ್ಚರ.. ನಿಮ್ಮ ಮಕ್ಕಳು ತಿನ್ನುವ ಚಾಕೊಲೇಟ್ ಕಡೆ ಗಮನ ಇರಲಿ. ನೀವೂ ಸ್ವಲ್ಪ ಯಾಮಾರಿದ್ರೆ ನಿಮ್ಮ ಮಕ್ಕಳು ಗಾಂಜಾ ಚಾಕೊಲೇಟ್ ತಿನ್ನಬಹುದು. ಹೌದು! ರಾಯಚೂರಿನ ಮನೆಯಲ್ಲಿ ಚಾಕೊಲೇಟ್ ಗಾಂಜಾ ಮಾರಾಟವಾಗುತ್ತಿವೆ.
ರಾಯಚೂರು (ಆ.02): ಪೋಷಕರೇ ಎಚ್ಚರ.. ಎಚ್ಚರ.. ನಿಮ್ಮ ಮಕ್ಕಳು ತಿನ್ನುವ ಚಾಕೊಲೇಟ್ ಕಡೆ ಗಮನ ಇರಲಿ. ನೀವೂ ಸ್ವಲ್ಪ ಯಾಮಾರಿದ್ರೆ ನಿಮ್ಮ ಮಕ್ಕಳು ಗಾಂಜಾ ಚಾಕೊಲೇಟ್ ತಿನ್ನಬಹುದು. ಹೌದು! ರಾಯಚೂರಿನ ಮನೆಯಲ್ಲಿ ಚಾಕೊಲೇಟ್ ಗಾಂಜಾ ಮಾರಾಟವಾಗುತ್ತಿವೆ. ಅದು ಕೂಡಾ 30, 50, 100ರೂ. ಗೆ ಸಿಗಲಿವೆ. 6 ಗ್ರಾಂ. ತೂಕದ ಗಾಂಜಾವನ್ನು ಚಾಕೊಲೇಟ್‌ನಂತೆ ತಯಾರಿಸಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ತಯಾರಿಸಿದ ಗಾಂಜಾ ಚಾಕೊಲೇಟ್ ರಾಯಚೂರಿನ ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ಹಲವು ದಿನಗಳಿಂದ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಶ್ರೀಪಾನಾ ಮುನಾಕಾ, ಶ್ರೀ ಆನಂದ ಮುನಾಕಾ ಚಾಕೊಲೇಟ್ ಪತ್ತೆಯಾಗಿದೆ. ಒಟ್ಟು 482 ಗಾಂಜಾ ಚಾಕೊಲೇಟ್ ಜಪ್ತಿ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಚಯ್ಯ ಸ್ವಾಮಿ, ಅಂಬರಯ್ಯ ಬಂಧಿತ ಆರೋಪಿಗಳು. ಬಂಧಿತರಿಂದ ಕಿಂಗ್‌ಪಿನ್ ಬಗ್ಗೆ ಅಬಕಾರಿ ಪೊಲೀಸರು ಮಾಹಿತಿ ಕಲೆಹಾಕಿದ್ದು, ಹುಡುಕಾಟ ನಡೆಸಿದ್ದಾರೆ. ಸದ್ಯ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದು ಆಪ್ತೆ, ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ವಿರುದ್ಧ ಎಫ್‌ಐಆರ್
ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಭರ್ಜರಿ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೊಲೀಸರು ರಾಜ್ಯ ಹಾಗೂ ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ಕೋಟ್ಯಂತರ ಮೌಲ್ಯದ ವಾಹನ, ಮಾದಕ ವಸ್ತು ಹಾಗೂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಟ್ರಾಕ್ಟರ್, ಟ್ರಾಲಿ ವಶ ಇಬ್ಬರ ಬಂಧನ: ನಗರದ ಕೆಇಬಿ ವೃತ್ತದಲ್ಲಿ ನಿಲ್ಲಿಸಿದ್ದ ಟ್ಯಾಕ್ಟರ್ ಹಾಗೂ ಟ್ರಾಲಿಯನ್ನು ಕಳ್ಳತನಮಾಡಿ ಅದರ ಸ್ವರೂಪವನ್ನು ಬದಲಿಸಿ ಬೇರೆಯವರಿಗೆ ಮಾರಾಟ ಮಾಡಿದ್ದ ಕೋಲಾರ ಮೂಲದ ಆರೋಪಿಗಳಾದ ಶಿವಾನಂದ್(28) ಹಾಗೂ ಆನಂದ್ (30) ಇಬ್ಬರನ್ನು ಬಂಧಿಸಿ, ರಾಜ್ಯದ ಹೊಸಕೋಟೆ, ಸಾತನೂರು, ಮುಳಬಾಗಿಲು, ನಂದಿ, ಚಿಂತಾಮಣಿ, ಆಂಧ್ರ ಪ್ರದೇಶದ ವಿಕೋಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಟ್ರಾಕ್ಟರ್ ಕಳವು ಪ್ರಕರಣಗಳಿಗೆ ಸಂಭಂದಪಟ್ಟಒಟ್ಟು 11 ಟ್ರಾಕ್ಟರ್ ಹಾಗೂ ಟ್ರಾಲಿಗಳನ್ನು ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತು ವಶ: ಹೊಸಕೋಟೆಯ ಆರೋಪಿ ಸುಹೇಲ್ ಅಹಮದ್(30) ಬಂಧಿಸಿ, ನಿಷೇಧಿತ ಮಾದಕ ವಸ್ತುವಾದ 5 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ 80 ಗ್ರಾಮ್, ಎರಡು ಕೇಜಿ ಗಾಂಜಾ 9 ಲಕ್ಷ ವೆಚ್ಚದ ಮೂರು ಕೆಟಿಎಂ ಬೈಕ್ ಹಾಗೂ ಒಂದು ಲಕ್ಷ ವೆಚ್ಚದ ಒಂದು ಟಿವಿಎಸ್ ಎನ್‌ಟಿಓ ಆರ್‌ಕ್ಯೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ವ್ಯಕ್ತಿ ನೈಜೀರಿಯನ್ ಪ್ರಜೆಗಳ ಜೊತೆ ಸೇರಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದು, ಮಾದಕ ವಸ್ತು ಖರೀದಿಸಲು ಬರುವ ವ್ಯಸನಿಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ ಬೈಕ್ ಕಳ್ಳತನ ಮಾಡುತಿದ್ದರು ಎಂದು ತಿಳಿದು ಬಂದಿದೆ.
ಸೌಜನ್ಯ ಕೇಸ್: ಭಕ್ತರು ಗೊಂದಲಕ್ಕೆ ಈಡಾಗದಂತೆ ಡಾ.ಹೆಗ್ಗಡೆ ಮನವಿ
ಅಕ್ರಮ ಗ್ಯಾಸ್ ರಿಪಿಲ್ಲಿಂಗ್ ದಂಧೆ ಮಾಡುತಿದ್ದ ಇಬ್ಬರ ಬಂಧನ: ತಾಲೂಕಿನ ಕುರುಬರಹಳ್ಳಿ ಗ್ರಾಮದ ಹೊರವಲಯದ ಕೋಳಿ ಫಾರಮ್‌ನಲ್ಲಿ ಅಕ್ರಮವಾಗಿ ಸರ್ಕಾರಿ ಖಾಸಗಿ ಗ್ಯಾಸ್ ಸಿಲಿಂಡರ್ ಗಳಿಗೆ ರೀಪಿಲ್ಲಿಂಗ್ ಮಾಡುತಿದ್ದ ಬಿಹಾರ ಮೂಲದ ವಿಕ್ರಮ್(25) ಹಾಗೂ ಬೆಂಗಳೂರು ಮೂಲದ ಅಜರ್ ಪಾಷ (27)ನನ್ನು ಬಂಧಿಸಿ ಆರೋಪಿಗಳಿಂದ 8 ಲಕ್ಷ ಮೌಲ್ಯದ 462 ಗ್ಯಾಸ್ ಸಿಲಿಂಡರ್, ಎರಡು ವಿದ್ಯುತ್ ಚಾಲಿತ ಮೋಟಾರ್ ಪಂಪ್, ವಿದ್ಯುತ್ ಚಾಲಿತ ತೂಕದ ಯಂತ್ರ ಹಾಗೂ ಸಿಲಿಂಡರ್ ಸಾಗಿಸುತಿದ್ದ ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆಸಿಕೊಳ್ಳಲಾಗಿದೆ.