ಮೊಹಾಲಿ(ಆ. 23)  ಒಂದು ಜಾಹೀರಾತು ಟಿವಿಯಲ್ಲಿ ಬರುತ್ತಿತ್ತು,  ಬ್ಯಾಂಕ್ ಸೆಕ್ಯೂರಿಟಿಗೆ ಅಂಥ ಇದ್ದ ಸೆಕ್ಯೂರಿಟಿ ಗಾರ್ಡ್ ಬ್ಯಾಂಕ್ ಲೂಟಿ ಮಾಡುತ್ತಿದ್ದ.. ಮೊಹಾಲಿಯಲ್ಲಿ ಅಂಥದ್ದೇ ಒಂದು ಪ್ರಕರಣ ನಡೆದಿದೆ.

ಮೊಹಾಲಿಯ ಪರ್ಚ್ ಆಕ್ಸಿಸ್ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ದರೋಡೆ ಮಾಡಿದ್ದು ಸಿಕ್ಕಿಬಿದ್ದಿದ್ದಾನೆ.  ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಸಿಬ್ಬಂದಿಗೆ ರೈಫಲ್ ತೋರಿಸಿ 10.44ಲಕ್ಷ ರೂ. ದೋಚಿದ್ದ ಚಾಲಾಕಿ ಆಸಾಮಿ ಬಲೆಗೆ ಬಿದ್ದಿದ್ದಾನೆ.

ಪ್ರೇಯಸಿಗಾಗಿ 31  ಕೋಟಿ ರೂ. ಉಡಾಯಿಸಿದ ಮ್ಯಾನೇಜರ್!
 
ಶುಕ್ರವಾರ ದರೋಡೆ ನಡೆದಿದ್ದು 24  ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ. ಡೆಪ್ಯೂಟಿ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್ ಮತ್ತು ಕ್ಯಾಶಿಯರ್ ಹೊರಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.  ತನ್ನ ಮಗನಿಗೆ ಮೈ ಹುಷಾರಿಲ್ಲ ಎಂದು ಹೇಳಿದ ಸೆಕ್ಯೂರಿಟಿ ಗಾರ್ಡ್ ಬಲ್ಜಿತ್ ಸಿಂಗ್ ಅಲ್ಲಿಂದ ಹೊರಟಿದ್ದಾನೆ.  ಈ ವೇಳೆ ಬ್ಯಾಂಕ್ ನಲ್ಲಿ ಮ್ಯಾನೇಜರ್ ಅಮನ್ ಗಜೆಂಜಾ ಮತ್ತು ಪಿವನ್ ಮಾತ್ರ ಇದ್ದರು.

ಇವರೆಲ್ಲ ತೆರಳಿದ ಸ್ವಲಪ ಹೊತ್ತಿನ ನಂತರ ಮುಸುಕುಧಾರಿ ವ್ಯಕ್ತಿಯೊಬ್ಬ ಗನ್ ಹಿಡಿದು ಬಂದಿದ್ದಾನೆ. ನಮ್ಮನ್ನು ಲಾಕ್ ಮಾಡಿ ಹಣ ತೆಗೆದುಕೊಂಡು ಹೋಗಿದ್ದು ಅಲ್ಲದೇ ತೆರಳುವಾಗ ಶಟರ್ ಲಾಕ್ ಮಾಡಿದ್ದ ಎಂದು ಮ್ಯಾನೇಜರ್ ದೂರಿನಲ್ಲಿ ಹೇಳಿದ್ದಾರೆ.

ಪೊಲೀಸರಿಗೆ  ನಂತರ ಮಾಹಿತಿ ನೀಡಿದ್ದು ಸೆಕ್ಯೂರಿಟಿ ಗಾರ್ಡ್ ವಿಚಾರಣೆ ಮಾಡುವಾಗ ಸತ್ಯ ಬಯಲಾಗಿದೆ. ಬಂಧಿತನಿಂದ ನಾಡಬಂದೂಕೊಂದನ್ನು ವಶಕ್ಕೆ ಪಡೆಯಲಾಗಿದೆ.