Asianet Suvarna News Asianet Suvarna News

ಡಿಕ್ಕಿಯ ರಭಸಕ್ಕೆ 2 ತುಂಡಾದ ಸ್ಕೂಟಿ: ಬೈಕ್‌ ಸವಾರರು ಪ್ರಾಣಾಪಾಯದಿಂದ ಪಾರು

ಬೈಕ್‌ ಮತ್ತು ಸ್ಕೂಟಿಗಳ ನಡುವೆ ಮುಖಾಮುಖಿ ಡಿಕ್ಕಿ
ಸ್ಥಳದಲ್ಲಿಯೇ ಎರಡು ತುಂಡಾಗಿ ಬಿದ್ದ ಸ್ಕೂಟಿ
ಪ್ರಾಣಾಪಾಯದಿಂದ ಪಾರಾದ ಮೂವರು ವಾಹನ ಸವಾರರು

Scooty breaks into 2 pieces in collision Bike riders escape with life sat
Author
First Published Feb 27, 2023, 7:24 PM IST | Last Updated Feb 27, 2023, 7:24 PM IST

ಚಿಕ್ಕಮಗಳೂರು  (ಫೆ.27): ಬೈಕ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಮತ್ತು ಕೊಟ್ಟಿಗೆಹಾರ ಮಧ್ಯೆ ನಡೆದಿದೆ. ಬೈಕ್‌ ಮತ್ತು ಸ್ಕೂಟಿಯ ನಡುವೆ ಉಂಟಾದ ಡಿಕ್ಕಿಯ ರಭಸಕ್ಕೆ ಸ್ಕೂಟಿಯೇ 2 ತುಂಡಾಗಿದೆ. 

ಹೌದು, ಎಂತಹದೇ ಭೀಕರ ಅಪಘಾತ ಆಗಿದ್ದರೂ ಬೈಕ್‌ ಅಥವಾ ಸ್ಕೂಟಿಗಳು ನಜ್ಜು ಗುಜ್ಜಾಗುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವು ಬಾರಿ ಬೈಕ್‌ಗಳಿಗೆ ಯಾವುದೇ ಹಾನಿ ಆಗದಿದ್ದರೂ ಬೈಕ್‌ ಸವಾರರು ಬಿದ್ದು ಪ್ರಾಣ ಕಳೆದುಕೊಮಡಿರುವ ಘಟನೆಗಳೇ ಹೆಚ್ಚಾಗಿವೆ. ಆದರೆ, ಈ ಘಟನೆಯಲ್ಲಿ ಬೈಕ್‌ ಹಾಗೂ ಸ್ಕೂಟಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಈ ವೇಳೆ ಸ್ಕೂಟಿಯ ಬುಂಭಾಗ ಹಾಗೂ ಕಾಲಿಡುವ ಜಾಗದಿಂದ ಇರುವ ಹಿಂಭಾಗ ಎರಡೂ ಬೇರೆ ಬೇರೆಯಾಗಿ ತುಂಡಾಗಿ ಬಿದ್ದಿವೆ. ಆದರೆ, ಅದೃಷ್ಟವೆಂದರೆ ಬೈಕ್‌ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಂತರ್ಜಾತಿ ವಿವಾಹ ಆಗಿದ್ದ ಯುವತಿ ನೇಣಿಗೆ ಶರಣು: ಕುಟುಂಬಸ್ಥರಿಂದ ಭಾರೀ ಕಿರುಕುಳ

ಕೈ- ಕಾಲುಗಳ ಮೂಳೆ ಮುರಿತ: ಮೂಡಿಗೆರೆ ತಾಲ್ಲೂಕಿನ ಬಣಕಲ್ ಮತ್ತು ಕೊಟ್ಟಿಗೆಹಾರ ಮಧ್ಯೆ ಪರಸ್ಪರ ವೇಗವಾಗಿ ಬರುತ್ತಿದ್ದ ಬೈಕ್ ಹಾಗೂ ಸ್ಕೂಟರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರು ಹಾಗೂ ಬೈಕ್ ಸವಾರ ಗಾಯಗೊಂಡಿದ್ದಾರೆ. ಸವಾರರಿಗೆ ಕೈಕಾಲು ಮುರಿದಿದ್ದು, ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ, ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಮುಂದುವರೆದಿದ್ದು,  ಚೇತರಿಕೆ ಕಾಣಿಸಿಕೊಳ್ಳುವ ಭರವಷೆಯನ್ನು ವೈದ್ಯರು ನೀಡಿದ್ದಾರೆ.

ಭೀಕರ ಅಪಘಾತಕ್ಕೆ ಎರಡು ತುಂಡಾದ ಸ್ಕೂಟಿ: ಬೈಕ್ ಹಾಗೂ ಸ್ಕೂಟರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿಸ್ಕೂಟಿಯಲ್ಲಿದ್ದ ಬಾಳೂರು ಸುಂದರಬೈಲಿನ ತಮ್ಮಣ್ಣಗೌಡ ರೈಟರು ಮತ್ತು ಅವರ ಪುತ್ರ ಸಂಕೇತ್ ಹಾಗೂ ಬೈಕಿನಲ್ಲಿದ್ದ ಬೆಂಗಳೂರು ಮೂಲದ ಲೋಹಿತ್ ಎಂದು ತಿಳಿದುಬಂದಿದೆ. ತಮ್ಮಣ್ಣಗೌಡ ಮತ್ತು ಸಂಕೇತ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಲೋಹಿತ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ತೀವ್ರತೆಗೆ ಸ್ಕೂಟಿ ಎರಡು ತುಂಡಾಗಿದೆ. ಇದೇ ವೇಳೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಘಟನೆಯೂ ನಡೆದಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ: ಹುಬ್ಬಳ್ಳಿ (ಫೆ.27): ರಾಜ್ಯದಲ್ಲಿ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳ ಉದ್ಘಾಟನೆ ಕಾರ್ಯಕ್ರಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ. ಆದರೆ, ಇತ್ತೀಚೆಗಷ್ಠ ದೆಹಲಿ ಹಾಗೂ ಮುಂಬೈನ ಪುಣೆಗೆ ವಿಮಾನ ಸಂಚಾಋದ ಸಂಪರ್ಕವನ್ನು ಸಾಧಿಸಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್‌ವೇ ಪಕ್ಕದಲ್ಲಿ ಬೆಂಕಿ ಹೊತ್ತಿಕೊಂಡಿದೆ.

 

ಪ್ರತಿದಿನ 1 ಕೋಟಿ ರೂ. ಕದಿಯುವುದು ಸೈಬರ್‌ ಕಳ್ಳರ ಟಾರ್ಗೆಟ್: ನಿಮ್ಮ ಹಣ ಸೇಫ್ಟಿಗೆ ಇಲ್ಲಿದೆ ಮಾರ್ಗ..!

ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್‌ ವೇ ಪಕ್ಕದಲ್ಲಿ ಬೆಳದುಕೊಂಡಿದ್ದ ಹುಲ್ಲು ಸತತ ಬಿಸಿಲಿನಿಂದ ಒಣಗಿ ಹೋಗಿದೆ. ಆದರೆ, ಈ ಹುಲ್ಲಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಈ ಬೆಂಕಿ ಜ್ವಾಲೆ ಸುತ್ತಲೂ ಬೆಳದುನಿಂತಿದ್ದ ಹುಲ್ಲಿಗೆ ಆವರಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಸಣ್ಣ ಪುಟ್ಟ ಗಿಡ ಮರಗಳು ಕೂಡ ಧಗಧಗನೆ ಹೊತ್ತಿ ಉರಿದಿವೆ. ವಿಮಾನ ನಿಲ್ದಾಣ ಸುತ್ತಲು ಆವರಿಸಿದ ದಟ್ಟ ಹೊಗೆ ಆವರಿಸಿತ್ತು. ಇದರಿಂದ ವಿಮಾನಗಳು ಲ್ಯಾಂಡಿಂಗ್‌ ಆಗಲು ಕೂಡ ತೊಂದರೆ ಉಂಟಾಗಿತ್ತು. ಕೂಡಲೇ ಅಗ್ನಿ ಶಾಮಕ‌ ಸಿಬ್ಬಂದಿಯಿಂದ ಬೆಂಕಿ‌ ನಂದಿಸಿದ್ದಾರೆ. ಇನ್ನು ವಿಮಾನ ನಿಲ್ದಾಣದ ಬಳಿ ಬಿದ್ದಿರುವ ಕಸವನ್ನು ಸುಡಲು ಬೆಂಕಿ ಹಚ್ಚಿದ್ದು, ಇದು ಹರಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios