ಶಾಲಾ ಬಾಲಕಿ ಅಪಹರಣಕ್ಕೆ ಯತ್ನ: ಧೈರ್ಯ ಮೆರೆದ ವಿದ್ಯಾರ್ಥಿಗಳು
- ಶಾಲಾ ಬಾಲಕಿ ಅಪಹರಣಕ್ಕೆ ಯತ್ನ: ಧೈರ್ಯ ಮೆರೆದ ವಿದ್ಯಾರ್ಥಿಗಳು
- ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಕಡಿದಾಳು ಮಂಜಪ್ಪ ಸರ್ಕಲ್‌ನಲ್ಲಿ ಘಟನೆ
ತೀರ್ಥಹಳ್ಳಿ (ಅ.21) : ಇಲ್ಲಿಯ ಮೇಲಿನಕುರುವಳ್ಳಿಯ ಕಡಿದಾಳು ಮಂಜಪ್ಪ ಸರ್ಕಲ್ ಬಳಿ ಗುರುವಾರ ಸಂಜೆ 4.30ರ ವೇಳೆ ಶಾಲಾ ಬಾಲಕಿಯನ್ನು ಅಪಹರಿಸುವ ಯತ್ನ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದುರ್ಘಟನೆಯೊಂದು ಸ್ವಲ್ಪದರಲ್ಲಿ ತಪ್ಪಿದೆ. ಹಾಡಹಗಲು ಅದರಲ್ಲೂ ಜನನಿಬಿಡ ಸ್ಥಳದಲ್ಲಿ ನಡೆದಿರುವ ಈ ಘಟನೆಯಿಂದ ಜನರು ಭಯಬೀಳುವಂತಾಗಿದೆ.
Bengaluru: ಫಿಲ್ಮ್ ಸ್ಟೈಲಲ್ಲಿ ಬಾಲಕನ ಅಪಹರಿಸಿ ಹಣ ಸುಲಿದ ವಿದ್ಯಾರ್ಥಿ!
ಮೇಲಿನಕುರುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ತಿಳಿಸಿದಂತೆ ಮಾರುತಿ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಚಾಕೋಲೆಟ್ ಕೊಡುವ ನೆಪದಲ್ಲಿ ಕರೆದು ಆಕೆಯ ಕೈ ಹಿಡಿದು ಎಳೆದಿದ್ದಾರೆ. ಅಷ್ಟರಲ್ಲಿ ಸಮೀಪದಲ್ಲೇ ನಡೆದುಕೊಂಡು ಹೋಗುತ್ತಿದ್ದ ಹಿರಿಯ ವಿದ್ಯಾರ್ಥಿಯೊಬ್ಬ ಬಾಲಕಿಯ ಕೈ ಹಿಡಿದುಕೊಂಡು ಬೊಬ್ಬೆ ಹೊಡೆದಿದ್ದಾನೆ. ಜೊತೆಯಲ್ಲಿದ್ದ ಮೂರನೇ ತರಗತಿಯ ಅಕುಲ್ ಬಾಲಕಿಯನ್ನು ಎಳೆಯುತ್ತಿದ್ದವನ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಮಕ್ಕಳ ಕೂಗಾಟ ಕೇಳಿ ಜನರು ಸೇರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಕಾರಿನಲ್ಲಿ ಸುಮಾರು 25ರ ವಯೋಮಾನದ, ಮುಖಕ್ಕೆ ಕಪ್ಪುಬಟ್ಟೆಕಟ್ಟಿಕೊಂಡಿದ್ದ ಐದು ಮಂದಿ ಇದ್ದರು ಎನ್ನಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದುರ್ಘಟನೆಯೊಂದು ಸ್ವಲ್ಪದರಲ್ಲಿ ತಪ್ಪಿದೆ. ಈ ಘಟನೆಯಿಂದ ಬಾಲಕಿ ಪೋಷಕರಲ್ಲಿ ಭೀತಿ ಮೂಡಿಸಿದೆ. ಆರೋಪಿಗಳಿದ್ದ ಕಾರು ಎರಡು ಮೂರು ಬಾರಿ ಸಂಚರಿಸಿದ ದೃಶ್ಯ ಮೇಲಿನಕುರುವಳ್ಳಿಯಲ್ಲಿ ಮಂಜು ಟೈಲ್ಸ್ ಮಳಿಗೆಯ ಸಿ.ಸಿ. ಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದರು.
ಒಮಿನಿ, ಗೂಡ್ಸ್ ಆಟೋ ಮಧ್ಯೆ ಡಿಕ್ಕಿ; ದಂಪತಿ ಸಾವು
ಶಿರಾಳಕೊಪ್ಪ: ಶಿರಾಳಕೊಪ್ಪ-ಶಿಕಾರಿಪುರ ಮಧ್ಯ ಭದ್ರಾಪುರದ ತಪೋನಂದನ್ ತೋಟದ ಬಳಿ ಗುರುವಾರ ಮುಂಜಾನೆ 6 ಗಂಟೆ ಸಮಯದಲ್ಲಿ ಓಮಿನಿ ಮತ್ತು ಗೂಡ್‌್ಸ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಓಮಿನಿಯಲ್ಲಿದ್ದ ನಾಲ್ವರಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನೊಬ್ಬ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪೊಲೀಸ್ ಬಸ್: ಮೂವರು ಬೈಕರ್‌ಗಳು ಸಾವು
ಮೈಲಾರಪ್ಪ (56) ಮತ್ತು ಅವರ ಹೆಂಡತಿ ಮಲ್ಲಮ್ಮ (48) ಮೃತಪಟ್ಟವರು. ಇನ್ನಿಬ್ಬರು ಗಾಯಗೊಂಡು ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓಮಿನಿ ಆನವಟ್ಟಿಯಿಂದ ಶಿವಮೊಗ್ಗ ಕಡೆ ಹೊರಟಿತ್ತು ಎಂದು ತಿಳಿದಿದೆ. ಗೂಡ್‌್ಸ ವಾಹನ ಶಿಕಾರಿಪುರದಿಂದ ಶಿರಾಳಕೊಪ್ಪದ ಕಡೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ಓಮಿನಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೂಡ್‌್ಸ ವಾಹನ ಚಾಲಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಶಿರಾಳಕೊ±್ಪÜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ತನಿಖೆ ಮುಂದುವರಿದಿದೆ.