Asianet Suvarna News Asianet Suvarna News

ನಾನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ವ್ಯಕ್ತಿ ಎಂದು ಸ್ಕೂಲ್ ಆಪರೇಟರ್ ಗೆ ಬಂತು ಬೆದರಿಕೆ ಕರೆ!

ಹರಿಯಾಣದಲ್ಲಿ ಸ್ಕೂಲ್ ಆಪರೇಟರ್ ಗೆ ಶನಿವಾರ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿರುವ ಆರೋಪ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಸದಸ್ಯ ತಾನಾಗಿದ್ದು, ಸೋಮವಾರ ಅಪಹರಣ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿ ವರದಿಯಾಗಿದೆ.

school operator in Haryana Gurugram got a threat call from an unknown person who claimed member of Lawrence Bishnoi gang san
Author
Bengaluru, First Published Jun 4, 2022, 3:44 PM IST

ಮುಂಬೈ (ಜೂನ್ 4): ಲಾರೆನ್ಸ್ ಬಿಷ್ಣೋಯಿ (Lawrence Bishnoi) ಗ್ಯಾಂಗ್ ನ ಸದಸ್ಯ (Gang Member) ಎಂದು ಹೇಳಿರುವ ವ್ಯಕ್ತಿಯಿಂದ, ಹರಿಯಾಣದ ಗುರುಗ್ರಾಮದ ಸ್ಕೂಲ್ ಆಪರೇಟರ್ (school operator in Haryana's Gurugram ) ಶನಿವಾರ ಬೆದರಿಕೆ ಕರೆ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಸ್ಕೂಲ್ ಆಪರೇಟರ್ ಈ ಕುರಿತಾಗಿ ದೂರು ನೀಡಿದ್ದು, ಗುರುಗ್ರಾಮ ಪೊಲೀಸ್ (Gurugram Police ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದಲ್ಲದೆ, ಸ್ಥಳೀಯ ಪೊಲೀಸರು ವಿಚಾರಣೆಯನ್ನು ತೀವ್ರ ಮಾಡಿದ್ದಾರೆ.

ಪಂಜಾಬ್ ನ ಖ್ಯಾತ ಗಾಯಕ ಸಿಧು ಮೂಸೆವಾಲಾ (Punjabi singer and Congress leader Sidhu Moosewala) ಹತ್ಯೆಯನ್ನು ತಮ್ಮ ಗ್ಯಾಂಗ್ ನ ಸದಸ್ಯನೊಬ್ಬ ಮಾಡಿದ್ದಾನೆ ಎನ್ನುವುದನ್ನು ಲಾರೆನ್ಸ್ ಬಿಷ್ಣೋಯಿ ಒಪ್ಪಿಕೊಂಡಿದ್ದ. ಅದರ ಬೆನ್ನಲ್ಲಿಯೇ ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಲಾರೆನ್ಸ್ ಬಿಷ್ಣೋಯಿ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ.

ಗುರುಗ್ರಾಮ್‌ನ ಫರೂಖ್‌ನಗರ ಪ್ರದೇಶದ ಜೈ ಹಿಂದ್ ಕಿ ಧಾನಿ ನಿವಾಸಿ ಜೈಪಾಲ್ ಸಿಂಗ್, ಭಂಗ್ರುಲಾದಲ್ಲಿರುವ ಗುರು ದ್ರೋಣಾಚಾರ್ಯ ಶಾಲೆಯ ನಿರ್ದೇಶಕರಾಗಿದ್ದಾರೆ. ಶುಕ್ರವಾರ ಸಂಜೆ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆಯಲ್ಲಿರುವ ವ್ಯಕ್ತಿ ತನ್ನನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದಾನೆ. "ನಾನು ಸೋಮವಾರ ನಿನ್ನನ್ನು ಅಪಹರಿಸುತ್ತೇನೆ" ಎಂದು ಅಪರಿಚಿತ ವ್ಯಕ್ತಿ ಕರೆಯಲ್ಲಿ ಹೇಳಿ ಬೆದರಿಕೆ ಹಾಕಿದ್ದಾರೆ. 

ಯಾವ ವಿಷಯಕ್ಕೆ ನನ್ನ ಅಪಹರಣ ಮಾಡುತ್ತೀರಿ, ವಿಷಯ ಏನು ಎಂದು ಜೈಪಾಲ್ ಅವರನ್ನು ಕೇಳಿದಾಗ, ಕರೆಯಲ್ಲಿದ್ದ ವ್ಯಕ್ತಿ, ‘ಸೋಮವಾರವೇ ಹೇಳುತ್ತೇನೆ’ ಎಂದು ಹೇಳಿ ಸಂಪರ್ಕ ಕಡಿತಗೊಳಿಸಿದರು. ಅದರ ನಂತರ, ಫೋನ್ ಸಂಖ್ಯೆ ತಲುಪಲು ಸಾಧ್ಯವಾಗಲಿಲ್ಲ. ಶಾಲೆಯ ನಿರ್ವಾಹಕರು ಕೂಡಲೇ ಫಾರೂಖ್‌ನಗರ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಸಂಬಂಧ ಲಾರೆನ್ಸ್‌ನನ್ನು ವಿಶೇಷ ಪೊಲೀಸ್ ಪಡೆ ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸುತ್ತಿದೆ.

ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲೂ ಸಕ್ರಿಯವಾಗಿದೆ. ರಾಜಸ್ಥಾನದ ಜೋಧಪುರ ಜೈಲಿನಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹೇಳುವ ಮೂಲಕ ಲಾರೆನ್ಸ್ ಬಿಷ್ಣೋಯಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಲಾರೆನ್ಸ್ ವಿರುದ್ಧ ಕೊಲೆ, ಅಪಹರಣ, ಸುಲಿಗೆ, ಬೆದರಿಕೆಯಂತಹ ಹತ್ತಾರು ಗಂಭೀರ ಪ್ರಕರಣಗಳು ದಾಖಲಾಗಿವೆ.

ಗಾಯಕ ಸಿದು ಹತ್ಯೆ ಮತ್ತು ಮುನ್ನಲೆಗೆ ಬಂದ ಪಂಜಾಬ್‌ ಗ್ಯಾಂಗ್‌ಸ್ಟರ್‌ಗಳ ರಕ್ತಸಿಕ್ತ ಇತಿಹಾಸ

ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆಯಲ್ಲಿ ತಮ್ಮದೇ ಗ್ಯಾಂಗ್‌ ಸದಸ್ಯರ ಕೈವಾಡವಿದೆ ಎಂದು ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ‘ನನ್ನ ಹಿರಿಯ ಸಹೋದರ ವಿಕ್ಕಿ ಮಿದ್ದುಖೇರಾನ ಗ್ಯಾಂಗ್‌, ಮೂಸೇವಾಲಾನ ಹತ್ಯೆ ಮಾಡಿದೆ. ಇದು ನನ್ನ ಕೆಲಸವಲ್ಲ. ನಾನು ಜೈಲಿನಲ್ಲಿದ್ದೆ. ಫೋನು ಕೂಡಾ ಬಳಕೆ ಮಾಡಲಿಲ್ಲ. ಹೀಗಾಗಿ, ಹತ್ಯೆಯಲ್ಲಿ ತನ್ನ ಕೈವಾಡವಿಲ್ಲ’ ಎಂದು ಬಿಷ್ಣೋಯ್‌ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸಿಧು ಮೂಸೇವಾಲಾ ಹತ್ಯೆ: ತನಿಖೆಯಲ್ಲಿ ಬಯಲಾಯ್ತು 'ಅಣ್ಣನ ಹತ್ಯೆ' ಸೇಡಿನ ವಿಚಾರ!

ಸಿಧು ಅವರ ಹತ್ಯೆಯ 4 ದಿನಗಳ ಮುಂಚಿತವಾಗಿ ಹಂತಕರು ಕಾರಿನಲ್ಲಿ ಹರಾರ‍ಯಣದ ಫತೇಹಾಬಾದ್‌ ಜಿಲ್ಲೆಯಿಂದ ಪಂಜಾಬಿನ ಮಾನ್ಸಾಗೆ ಬಂದ ಸಿಸಿಟಿವಿ ವಿಡಿಯೋ ಪತ್ತೆಯಾಗಿದೆ. ಈ ನಡುವೆ ಪಂಜಾಬ್‌ ಸಿಎಂ ಭಗವತ್‌ ಸಿಂಗ್‌ ಮಾನ್‌, ಶುಕ್ರವಾರ ಮೂಸೇವಾಲಾ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ ಸಿಧು ಹತ್ಯೆ ಕುರಿತು ಸಿಬಿಐ ತನಿಖೆಗೆ ಮನವಿ ಮಾಡಿ ಪಂಜಾಬ್‌ನ ಬಿಜೆಪಿ ನಾಯಕ ಜಗಜೀತ್‌ ಸಿಂಗ್‌ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Follow Us:
Download App:
  • android
  • ios