ಬೆಂಗಳೂರು (ಸೆ. 02) ಅನಿಕಾಳಿಂದ ಶುರುವಾದ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರ ನಟಿ ರಾಗಿಣಿ ದ್ವಿವೇದಿವರೆಗೆ ಬಂದು ನಿಂತಿದೆ. ಮೂವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಸಿಸಿಬಿ ನೋಟಿಸ್ ನೀಡಿದ್ದರೆ ಇನ್ನೊಬ್ಬ ನಟಿ ತಮ್ಮ ಮ್ಯಾನೇಜರ್ ಜತೆ ಪರಾರಿಯಾಗಿದ್ದಾರೆ.

ಬಹುಭಾಷಾ ನಟಿಗೆ ಸಿಸಿಬಿ ನೋಟಿಸ್ ನೀಡುವ ಸಿದ್ಧತೆ ಮಾಡಿಕೊಂಡಿತ್ತು. ಮೀಟೂ  ಆರೋಪವನ್ನು ಈ ನಟಿ ಹಿಂದೊಮ್ಮೆ ಮಾಡಿದ್ದರು.  ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದರು. 

ಸ್ಫೋಟಕ ಮಾಹಿತಿ ಕೊಟ್ಟ ಡ್ರಗ್ ಪೆಡ್ಲರ್

ಮಾದಕ ನಟಿ ವಿದೇಶದಲ್ಲಿಯೂ ವಾಸ ಮಾಡಿ ಬಂದಿದ್ದರು. ಇಂದ್ರಜಿತ್ ಲಂಕೇಶ್ ಹೇಳಿದ ಒಂದೊಂದೆ ಹೆಸರುಗಳು ನಿಧಾನಕ್ಕೆ ಸಿಸಿಬಿಯ ಕಡತದಿಂದ ಹೊರಬರುತ್ತಿವೆ. 

ಇನ್ನೊಂದು ಕಡೆ ಗುರುವಾರ ಬಾಂಬ್ ಸಿಡಿಸಿ ಹದಿನೈದು ಜನರ ಹೆಸರು ನೀಡಿದ್ದ ಇಂದ್ರಜಿತ್ ಲಂಕೇಶ್  ಮತ್ತೆ ಸಿಸಿಬಿ ಎದುರು ಹಾಜರಾಗಲಿದ್ದು ಇನ್ನೊಂದಿಷ್ಟು ಜನರ ಹೆಸರುಗಳನ್ನು ಹೇಳುವ ಸಾಧ್ಯತೆ ಇದೆ.