ಬೆಂಗಳೂರು(ಸೆ. 28) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೃಇರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ನಟಿಮಣಿಯರಿಗೆ ಜೈಲು ವಾಸ ಮುಂದುವರಿಯಲಿದೆ.

ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಿಂದ ಆದೇಶ ನೀಡಿದೆ.  ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿಗೆ ಜೈಲು ವಾಸದಿಂದ ಮುಕ್ತಿ ಸದ್ಯಕ್ಕಂತೂ ಇಲ್ಲ. ಡ್ರಗ್ ಡೀಲ್ ಆರೋಪ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ರಾಗಿಣಿ. ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಧೀಶ ಜಿ.ಎಂ.ಸೀನಪ್ಪ‌ ಆದೇಶ ನೀಡಿದ್ದಾರೆ.

ಓಪನ್ ಕೋರ್ಟ್ ನಲ್ಲಿ ನೋಡಲಾಗದ ಸಿಡಿಗಳು

ಇನ್ನು ಸಂಜನಾಗೆ ಜೈಲುವಾಸದಿಂದ ಮುಕ್ತಿ ಸಿಕ್ಕಿಲ್ಲ. ನ್ಯಾಯಾಂಗ ಬಂಧನ ಮುಂದುವರಿದಿದೆ. ಅನಿಕಾ ಡಿ ಎಂಬಾಕೆಯ ಬಂಧನದ ನಂತರ ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ನಿಧಾನಕ್ಕೆ ತೆರೆದುಕೊಂಡಿತು. ಒಬ್ಬರಾದ ಮೇಲೆ ಒಬ್ಬರ ಹೆಸರು ಬರತೊಡಗಿತು. 

ನಟಿ ರಾಗಿಣಿ ಮತ್ತು ಸಂಜನಾ ಮನೆಯ ಮೇಲೆಯೂ ದಾಳಿ ಮಾಡಿದ್ದ ಸಿಸಿಬಿ ಅನೇಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿತ್ತು.  ಇನ್ನೊಂದು ಕಡೆ  ಐಂದ್ರಿತಾ-ದಿಗಂತ್ ದಂಪತಿ, ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ಅನುಶ್ರೀಯವರ ವಿಚಾರಣೆಯನ್ನು ಸಿಸಿಬಿ ನಡೆಸಿದೆ.