Asianet Suvarna News Asianet Suvarna News

ರಿಯಾಗೆ ಸಿಕ್ಕ ಜಾಮೀನು ಸಂಜನಾ, ರಾಗಿಣಿಗಿಲ್ಲ,  ಹೈಕೋರ್ಟ್‌ನಲ್ಲೂ ಅರ್ಜಿ ವಜಾ

ಸಂಜನಾ-ರಾಗಿಣಿ  ಜಾಮೀನಿಲ್ಲ/ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಮೇಲೆ ಮತ್ತೆ ಅರ್ಜಿ ಹಾಕಬಹುದು/ ಹೈಕೋರ್ಟ್ ನಿಂದ ಜಾಮೀನು ಅರ್ಜಿ ವಜಾ/ ಯಾವ ಆರೋಪಿಗಳಿಗೂ ಜಾಮೀನು ಇಲ್ಲ

Sandalwood Drugs case Karnataka HC rejects bail plea of Sanjana Galrani Ragini Dwivedi mah
Author
Bengaluru, First Published Nov 3, 2020, 4:15 PM IST

ಬೆಂಗಳೂರು(ನ. 03)   ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ನಟಿಮಣಿಯರಿಗೆ  ಜಾಮೀನು ಸಿಕ್ಕಿಲ್ಲ, ರಾಗಿಣಿ, ಸಂಜನಾ ಮತ್ತು ಉಳಿದ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

"

ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ರಾಹುಲ್ , ರವಿಶಂಕರ್, ಲೂಮ್ ಪೆಪ್ಪರ್ ಸೇರಿ ಆರು ಜನರು ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿದ್ದರು.  ಆದರೆ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿದ್ದು ಮುಂದಿನ ಹಾದಿ ಮತ್ತ್ಟು ಕಠಿಣವಾಗಿದೆ.

ರಾಗಿಣಿ ನಂಟಿನ ಕಾರಣ ನಿರೀಕ್ಷಣಾ ಜಾಮೀನು ಪಡೆದ ಕೈ ನಾಯಕ

ಡ್ರಗ್ಸ್​ ಪ್ರಕರಣದಲ್ಲಿ ಜೈಲು ಸೇರಿರುವ ರಾಗಿಣಿ, ಸಂಜನಾ ಹಾಗೂ ಇನ್ನಿತರೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಈ ಹಿಂದೆ ಎನ್​​​​ಡಿಪಿಎಸ್  ನ್ಯಾಯಾಲಯ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ನಟಿಯರಿಬ್ಬರು ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಸಿಸಿಬಿ ನಟಿಮಣಿಯರಿಗೆ ಜಾಮೀನು ನೀಡದಂತೆ ಜಾಮೀನು ನೀಡದಂತೆ ಮನವಿ ಮಾಡಿತ್ತು.

"

ಈಗ ಹೈಕೋರ್ಟ್​ನಲ್ಲೂ ಜಾಮೀನು ಅರ್ಜಿ ವಜಾಗೊಂಡಿದ್ದು, ಮುಂದೆ ರಾಗಿಣಿ, ಸಂಜನಾ ಸೇರಿದಂತೆ ಇತರೆ ಆರೋಪಿಳಿಗೆ ಸುಪ್ರೀಂ ಕೋರ್ಟ್ ಒಂದೇ ದಾರಿಯಾಗಿದೆ.

ನಟಿಮಣಿಯರು ಈಗಾಗಲೇ ಒಂದೂವರೆ ತಿಂಗಳು ಕಾಲ  ಜೈಲಿನಲ್ಲಿ ಕಳೆದಿದ್ದಾರೆ.ಸಿಸಿಬಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ ಮೇಲೆ ಕೆಳ ನ್ಯಾಯಾಲಯದಲ್ಲಿ ಮತ್ತೆ ಅರ್ಜಿ ಹಾಕಬಹುದು. ಅದಕ್ಕೆ ಇನ್ನು ಕೆಲ ದಿನ ಹಿಡಿಯಲಿದ್ದು ಅಲ್ಲಿಯವರೆಗೆ ಜೈಲುವಾಸ ಖಚಿತ.


ಹಾಗಾದರೆ ಜಾಮೀನು ನಕಾರಕ್ಕೆ ಕಾರಣವಾದ ಅಂಶಗಳು ಯಾವುದು?
* ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ
*  ಆದಿತ್ಯಾ ಆಳ್ವಾ , ಶಿವಪ್ರಕಾಶ್ ಸೇರಿ ಪ್ರಮುಖ ಆರೋಪಿಗಳು ನಾಪತ್ತೆ
*  ಬೇಲ್ ಸಿಕ್ಕರೆ ಸಾಕ್ಷಿ ನಾಶ ಸಾಧ್ಯತೆ,
*  ಪ್ರಕರಣದಲ್ಲಿ ಸಾಕಷ್ಟು ಆರೋಪಿಗಳ ಬಂಧನ ಆಗಬೇಕಿದೆ
*   ಜಾಮೀನು ಸಿಕ್ರೆ ಉಳಿದ ಆರೋಪಿಗಳಿಗೆ ಸಹಾಯ ಆಗಬಹುದು

Follow Us:
Download App:
  • android
  • ios