ಬೆಂಗಳೂರು(ಅ. 20) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸದ್ದಿಲ್ಲದೆ ಮತ್ತೊಂದು ಬಂಧನವಾಗಿದೆ. ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸರ್ ಆಡಂ ಪಾಷಾರನ್ನು ಎನ್‌ಸಿಬಿ ಬಂಧನ ಮಾಡಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮೊಟ್ಟ ಮೊದಲು ಬಂಧಿತಳಾದ  ಅನಿಕಾ ಡಿ ತನಗೆ ಗೊತ್ತು ಎಂದು ಆಡಂ ಈ ಹಿಂಗೆ  ಹೇಳಿದ್ದರು. ಇದೇ ಕಾರಣಕ್ಕೆ ಡ್ರಗ್ಸ್ ಖರೀದಿ ಮಾಡಿದ್ದಾರೆ ಎಂಬ ಆರೋಪದಲ್ಲಿ ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

ರಾಗಿಣಿ-ಸಂಜನಾಗೆ ಬೇಲ್ ಕೊಡಿ; ನ್ಯಾಯಾಧೀಶರಿಗೆ ಬೆದರಿಕೆ ಪತ್ರ

ಸೋಮವಾರ ನೋಟಿಸ್ ಜಾರಿ ಮಾಡಿ ಎನ್ ಸಿಬಿ ಅಧಿಕಾರಿಗಳು ಮಂಗಳವಾರ (ಇಂದು)  ಇಂದು ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಇಂದು ವಿಚಾರಣೆ ನಡೆಸಿ ಆ್ಯಡಂ ಪಾಷಾ ಬಂಧಿಸಲಾಗಿದೆ.

ಮಾಧ್ಯಮಗಳ ಮುಂದೆ ಪಾಷಾ ತಾವೇ  ಹೇಳಿಕೆ ನೀಡಿದ್ದರು. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ವೈರಲ್ ಆದ ಪೋಟೋಗಳಲ್ಲಿಯೂ ಆಡಂ ಕಾಣಿಸಿಕೊಂಡಿದ್ದರು. ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಸಂಜನಾ, ರಾಗಿಣಿ ನಂತರ ಮತ್ತೊಬ್ಬ ಸೆಲೆಬ್ರಿಟಿಯ ಬಂಧನವಾಗಿದೆ.