ವಿಜಯಪುರ ನಗರದ ಹೊರವಲಯದ ಇಟ್ಟಂಗಿಹಾಳ ರಸ್ತೆ ಬಳಿ ನಡೆದ ಘಟನೆ| ಅಣ್ಣಪ್ಪಗೌಡ ಬಾಗಾಯತ ಎಂಬಾತನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ದಸ್ತಗೀರಸಾಬ್‌| ಈ ಸಂಬಂಧ ಆದರ್ಶನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ವಿಜಯಪುರ(ಏ.12): ಅನೈತಿಕ ಸಂಬಂಧ ಶಂಕಿಸಿ ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರ ಹೊರವಲಯದ ಇಟ್ಟಂಗಿಹಾಳ ರಸ್ತೆ ಬಳಿಯ ಜಮೀನಿನಲ್ಲಿ ಭಾನುವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಸ್ತಗೀರಸಾಬ ಮಮದಾಪುರ (45) ಕೊಲೆಯಾದ ರೌಡಿಶೀಟರ್‌. ಅಣ್ಣಪ್ಪಗೌಡ ಬಾಗಾಯತ ಕೊಲೆ ಆರೋಪಿ. ಅಣ್ಣಪ್ಪಗೌಡ ಬಾಗಾಯತ ಎಂಬಾತನ ಪತ್ನಿಯೊಂದಿಗೆ ದಸ್ತಗೀರಸಾಬ್‌ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯ ಮೇರೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. 

ತಂದೆಗೆ ಚಾಡಿ ಹೇಳ್ತಾಳೆ ಅಂತ ಮೂರು ವರ್ಷದ ಮಗಳನ್ನೇ ಕೊಂದ ಕಿರಾತಕ ತಾಯಿ..!

ಕಳೆದ ಹದಿನೈದು ದಿನಗಳ ಹಿಂದೆಯೂ ಸಹ ಕೊಲೆಗೆ ಯತ್ನ ನಡೆದಿತ್ತು. ಸದ್ಯ ಆರೋಪಿ ಅಣ್ಣಪ್ಪಗೌಡ ಬಾಗಾಯತನನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಆದರ್ಶನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.