Crime News: ಬೆಂಗಳೂರಲ್ಲಿ ಮತ್ತೆ ರೌಡಿಶೀಟರ್ ಆ್ಯಕ್ಟಿವ್: ಇನ್ಸಪೆಕ್ಟರ್, ಸಬ್ ಇನ್ಸಪೆಕ್ಟರ್ ಸಸ್ಪೆಂಡ್

Bengaluru Crime News: ಬೆಂಗಳೂರಿನಲ್ಲಿ ನಟೋರಿಯಸ್ ರೌಡಿ ಶೀಟರ್‌ಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು,   ಬ್ಯುಸಿನೆಸ್ ಮೆನ್, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಎದೆಯಲ್ಲಿ ನಡುಕ ಶುರುವಾಗಿದೆ.

Rowdy Sheeters Active in In Bengaluru Sub Inspector Suspended For Negligence Of Duty mnj

ಮಂಜುನಾಥ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಂಗಳೂರು 

ಬೆಂಗಳೂರು (ಜು. 08): ಬೆಂಗಳೂರಿನಲ್ಲಿ ನಟೋರಿಯಸ್ ರೌಡಿ ಶೀಟರ್‌ಗಳ (Rowdy Sheeter) ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ರೌಡಿಶೀಟರ್‌ಗಳ ಅಟ್ಟಹಾಸದಿಂದ  ಬ್ಯುಸಿನೆಸ್ ಮೆನ್, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಎದೆಯಲ್ಲಿ ನಡುಕ ಶುರುವಾಗಿದೆ. ಒಂದು ಕಡೆ  ರೌಡಿಶೀಟರ್‌ಗಳು ಜೈಲಿನಿಂದ ಬಿಡುಗಡೆಯಾಗುತ್ತಿದ್ದರೇ,  ಮತ್ತೊಂದು ಕಡೆ ಜೈಲಿನಲ್ಲೇ ಕುಳಿತು ಕೆಲವು ನಟೋರಿಯಸ್ ರೌಡಿಶೀಟರ್ಗಳು ಬೆದರಿಕೆ ಹಾಕುತ್ತಿದ್ದಾರೆ. ಇವರ ಕಾಟಕ್ಕೆ ದೊಡ್ಡ ದೊಡ್ಡ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಉದ್ಯಮಿಗಳು ಬೇಸತ್ತು ಹೋಗಿದ್ದಾರೆ 

ಅಷ್ಟಕ್ಕೂ ಧಾರವಾಡ (Dharwad) ಜೈಲಿನಲ್ಲೇ ಕುಳಿತು ಬಾಂಬೆ ಸಲೀಂ ಬೆಂಗಳೂರಿನ ಉದ್ಯಮಿ ಮುಯಿಝ್‌ಗೆ ಬೆದರಿಕೆ ಹಾಕಿದ್ದಾನೆ. ಸಹಚರರಾದ ಅಲಿ ಹಾಗೂ ರೌಡಿಶೀಟರ್ ಅಬ್ದಲ್ ಜಾಫರ್ ಮುಯಿಝ್ ಮನೆಗೆ ತೆರಳಿ ಬಾಂಬೆ ಸಲೀಂ ಲೈನಿನಲ್ಲಿದ್ದಾರೆ ಎಂದಿದ್ದಾರೆ. ಮೊಬೈಲ್ ಪಡೆದ ಮುಯೀಝ್ ಬಾಂಬೆ ಸಲೀಂ ಬಳಿ ಮಾತನಾಡುತ್ತಿದ್ದಂತೆ ಎಂಟು ಲಕ್ಷ ಹಣ ಕೊಡು ಇಲ್ಲವಾದರೆ ಬಿಳಿ ಬಟ್ಟೆ ಕಳುಹಿಸುತ್ತೇನೆ ಎಂದಿದ್ದಾನೆ. 

ಇಷ್ಟಕ್ಕೆ ಸುಮ್ಮನಾಗದ ಬಾಂಬೆ ಸಲೀಂ ತನ್ನ ಸಹಚರರನ್ನ ಬಿಟ್ಟು ಬೆದರಿಕೆ ಕೂಡಾ ಹಾಕಿಸಿದ್ದಾನೆ. ಇದರಿಂದ ನೊಂದ ಮುಯಿಝ್ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಆದರೆ ಯಾವುದೇ ಕ್ರಮವಾಗದ ಹಿನ್ನೆಲೆ ಸಿಸಿಬಿ ಮೆಟ್ಟಿಲೇರಿದ್ದರು.  ಪ್ರಕರಣವನ್ನ ಕೈಗೆತ್ತಿಕೊಂಡ ಎಸಿಪಿ ಧರ್ಮೇಂದ್ರ, ಇನ್ಸಪಕ್ಟರ್ ತನ್ವೀರ್ ಅಂಡ್ ಟೀಂ ಬಾಂಬೆ ಸಲೀಂ, ಅಬ್ದುಲ್ ಜಾಫರ್, ಶೂಟರ್ ಖದೀಂ,ಇಮ್ರಾನ್, ಬಾಂಬೆ ರಿಯಾಜ್, ಖಾದಿರ್, ಅಲಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ತಲಾಖ್‌ ಕೊಡದ ಮಡದಿ ತಲೆಗೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿದ ಪತಿ

ಇನ್ನೂ ಬಾಂಬೆಸಲೀಂ ಧಾರವಾಡ ಜೈಲಿನಿಂದ ಕರೆತಂದಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯದಡಿ ಕಲಾಸಿಪಾಳ್ಯ ಇನ್ಸಪೆಕ್ಟರ್ ಚೇತನ್ ಕುಮಾರ್ ಹಾಗೂ ಸಬ್ ಇನ್ಸಪೆಕ್ಟರ್ ಪ್ರಸನ್ನನ್ನು ಅಮಾನತ್ತುಗೊಳಿಸಿ ಆದೇಶಿದ್ದಾರೆ. 

Latest Videos
Follow Us:
Download App:
  • android
  • ios