ಗುಂಡ್ಲುಪೇಟೆ: ರೌಡಿ ಶೀಟರ್ ಸಿದ್ದರಾಜು ಆಲಿಯಾಸ್ ಕನಕ ಗಡಿಪಾರು..!
ಗುಂಡ್ಲುಪೇಟೆ ತಾಲೂಕಿನ ಹೊಣಪುರಪುರ ಗ್ರಾಮದ ನಿವಾಸಿ ಹಾಗೂ ರೌಡಿ ಶೀಟರ್ ಸಿದ್ದರಾಜು ಆಲಿಯಾಸ್ ಕನಕನನ್ನು ಬೀದರ್ ಜಿಲ್ಲೆಗೆ ಗಡಿ ಪಾರು ಮಾಡಿ ಆದೇಶಿಸಿದ ಉಪ ವಿಭಾಗಾಧಿಕಾರಿ ಶಿವಮೂರ್ತಿ.ಎಂ
ಗುಂಡ್ಲುಪೇಟೆ(ಏ.10): ತಾಲೂಕಿನ ಹೊಣಪುರಪುರ ಗ್ರಾಮದ ನಿವಾಸಿ ಹಾಗೂ ರೌಡಿ ಶೀಟರ್ ಸಿದ್ದರಾಜು ಆಲಿಯಾಸ್ ಕನಕನನ್ನು ಬೀದರ್ ಜಿಲ್ಲೆಗೆ ಗಡಿ ಪಾರು ಮಾಡಿ ಉಪ ವಿಭಾಗಾಧಿಕಾರಿ ಶಿವಮೂರ್ತಿ ಎಂ ಆದೇಶಿಸಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ಕಲಂ ೫೫ ರ ರೀತ್ಯಾ ಚಾಮರಾಜನಗರ ಜಿಲ್ಲೆಯಿಂದ ಗಡಿಪಾರು ಮಾಡುವ ಅಧಿಕಾರವನ್ನು ಪ್ರತ್ಯಾಯಿಸಿರುವ ಸಂಬಂಧ ಪ್ರದತ್ತವಾದ ಅಧಿಕಾರದ ಮೇರೆಗೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಣಕನಪುರ ಗ್ರಾಮದ ಸಿದ್ದರಾಜು ಆಲಿಯಾಸ್ ಕನಕ ಇತನನ್ನು ಕೊಳ್ಳೇಗಾಲ ಉಪ ವಿಭಾಗದ ಸರಹದ್ದಿನಿಂದ ಏ.೮ ರಿಂದ(ಇಂದಿನಿಂದ) ಜೂ.೬ ರ ವರೆಗೆ ಬೀದರ್ ಜಿಲ್ಲೆಗೆ ಗಡಿಪಾರು ಮಾಡಿ ಆದೇಶವನ್ನು ಏ.೮ ರ ಸೋಮವಾರ ಹೊರಡಿಸಲಾಗಿದೆ.
ಈ ಆದೇಶವನ್ನು ತಕ್ಷಣ ಅನುಷ್ಠಾನಕ್ಕೆ ತರಲು ಹಾಗೂ ಸದರಿ ಆದೇಶ ಉಲ್ಲಂಘಿಸಿದರೆ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ರ ಕಲಂ ೬೧ ರ ಪ್ರಕಾರ ಕ್ರಮ ಜರುಗಿಸಲು ಬೇಗೂರು ಆರಕ್ಷಕ ಉಪ ನಿರೀಕ್ಷಕರಿಗೆ ನಿರ್ದೇಶಿಸಿದ್ದು ಸದರಿ ಅಪಾಧಿತರನ್ನು ಬೀದರ್ ಜಿಲ್ಲೆಗೆ ಸ್ಥಳಾಂತರಿಸಲು ಸೂಚಿಸಿದೆ ಹಾಗೂ ಸದರಿ ಗಡಿಪಾರು ಆದೇಶದ ಅವಧಿಯಲ್ಲಿ ಆಪಾದಿತನನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕಾದಲ್ಲಿ ನ್ಯಾಯಾಲಯ ಅನುಮತಿ ಪಡೆಯತಕ್ಕದ್ದು ಎಂದು ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಕಲಬುರಗಿ: ವೀಸಾ ಕೊಡಿಸುವುದಾಗಿ ಹೇಳಿ 1.80 ಲಕ್ಷ ಪಡೆದು ಮೋಸ
ರೌಡಿ ಶೀಟರ್ ಪೇರೇಡ್ ಏಕಿಲ್ಲ!:
ರೌಡಿ ಶೀಟರ್ ಗಳಲ್ಲಿ ಒಂದಿಬ್ಬರು ಅರ್ಭಟ ಪೊಲೀಸರಿಗೆ ಗೊತ್ತಿದ್ದರೂ ಗಡಿಪಾರಿಗೆ ಶಿಪಾರಸ್ಸು ಮಾಡಿಲ್ಲ. ಕನಿಷ್ಠ ಪೊಲೀಸ್ ಠಾಣೆಯಲ್ಲಿ ಪೇರೇಡ್ ಕೂಡ ಮಾಡಿಸಿಲ್ಲ! ರೌಡಿ ಶೀಟರ್ ಗಳನ್ನು ಸಾರ್ವಜನಿಕರ ಎದುರು ಪೇರೇಡ್ ಮಾಡಿದರೆ ಜನರ ಎದುರು ಮಾನ, ಮಾರ್ಯಾದೆ ಹೋಗುತ್ತದೆ ಎಂದು ಅರ್ಭಟ ಮಾಡುವುದು ತಪ್ಪಲಿದೆ ಆ ಕೆಲಸವನ್ನು ಗುಂಡ್ಲುಪೇಟೆ ಪೊಲೀಸರು ಮಾಡುತ್ತಿಲ್ಲ.