Vijayapura: ಭೀಮಾತೀರದಿಂದ ಜಿಲ್ಲಾ ಕೇಂದ್ರಕ್ಕೆ ಗನ್ ದಂಧೆ, ಖತರ್ನಾಕ್ ರೌಡಿಶೀಟರ್ ಬಂಧನ!

ವಿಜಯಪುರ ಉಪವಿಭಾಗದ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ಪರಿಣಾಮ ಮತ್ತೊಂದು ಕಂಟ್ರಿಮೆಡ್ ಪಿಸ್ತೂಲು ಪತ್ತೆಯಾಗಿದೆ. ಅಕ್ರಮವಾಗಿ ಕಂಟ್ರಿಮೆಡ್ ಪಿಸ್ತೂಲು ಹೊಂದಿದ್ದ ಆಸಾಮಿಗಳನ್ನ ಪೊಲೀಸರು ಅಂದರ್ ಮಾಡಿದ್ದಾರೆ. ಜಿಲ್ಲೆಯಲ್ಲಿ‌ ಮತ್ತೊಮ್ಮೆ ಪಿಸ್ತೂಲು ದಂಧೆ ಸದ್ದು ಮಾಡಿದೆ.

Rowdy Sheeter  arrested by CCB police while trying to sell country made pistol in Vijayapura gow

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ನ.11) : ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲೂ ಕಂಟ್ರಿ ಪಿಸ್ತೂಲು ದಂಧೆ ಬಗೆದಷ್ಟು ಆಳ ಎನ್ನುವಂತಾಗಿದೆ. ವಿಜಯಪುರ ಉಪವಿಭಾಗದ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ಪರಿಣಾಮ ಮತ್ತೊಂದು ಕಂಟ್ರಿಮೆಡ್ ಪಿಸ್ತೂಲು ಪತ್ತೆಯಾಗಿದೆ. ಅಕ್ರಮವಾಗಿ ಕಂಟ್ರಿಮೆಡ್ ಪಿಸ್ತೂಲು ಹೊಂದಿದ್ದ ಆಸಾಮಿಗಳನ್ನ ಪೊಲೀಸರು ಅಂದರ್ ಮಾಡಿದ್ದಾರೆ. ಜಿಲ್ಲೆಯಲ್ಲಿ‌ ಮತ್ತೊಮ್ಮೆ ಪಿಸ್ತೂಲು ದಂಧೆ ಸದ್ದು ಮಾಡಿದೆ. ಖತರ್ನಾಕ್ ರೌಡಿ ಶೀಟ‌ರ್‌ಒಬ್ಬ ತನ್ನ ಸ್ವಯಂ ರಕ್ಷಣೆ ನೆಪಯೊಡ್ಡಿ ಅಕ್ರಮವಾಗಿ  ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡು ಹೊಂದಿದ್ದು ಆತ ಸೇರಿ  ಮೂವರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ವಿಜಯಪುರದಲ್ಲಿ ಕೂಲಿ‌ ಕೆಲಸ ಮಾಡಿಕೊಂಡಿದ್ದ ಜಿತೇಶ ವಿಮಲಚಂದ ನಾಹರ, ಕಾಶಿಮಕೇರಿ ತಾಂಡಾದ ಗೋವಿಂದ ನಾಮದೇವ ರಾಠೋಡ ಹಾಗೂ ಗ್ಯಾಂಗಬಾವಡಿ ನಿವಾಸಿ ರೌಡಿಶೀಟರ್ ಸತೀಶ ಧನರಾಜ್ ನಾಯಕ ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಹುಂಡೇಕರ್ ಪೆಟ್ರೋಲ್ ಬಂಕ್ ಬಳಿ ಪೊಲೀಸರು ಕಂಟ್ರಿ ಪಿಸ್ತೂಲ್ ಸಮೇತ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ಆರೋಪಿ ಸತೀಶ ಎಂಬವನು ತನ್ನ ಸ್ವ ರಕ್ಷಣೆಗಾಗಿ ಕಂಟ್ರಿ ಪಿಸ್ತೂಲ್ ಹೊಂದಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ. ಈ ರೌಡಿಶೀಟರ್ ಗಳು ಪೊಲೀಸರು ತಮ್ಮ ಹೆಸರು ಪ್ರಕಟಿಸಿದಾಗ ಅದನ್ನು ಸಾಮಾಜಿಕ ತಾಣದಲ್ಲಿ ಹಾಕಿಕೊಂಡು ಪೋಸ್ ನೀಡುವ ಖಯಾಲಿ ಸಹ ಹೆಚ್ಚಾಗಿರುವದು ಅದು ಪೊಲೀಸರಿಗೆ ಮಾಹಿತಿ ದೊರೆತಿದೆ.

ಕಂಟ್ರಿಮೆಡ್ ಪಿಸ್ತೂಲ್ ಮೂಲ ಪತ್ತೆಗೆ ಪೊಲೀಸರ ತನಿಖೆ! 
ಸಧ್ಯ ಬಂಧಿತ ಆರೋಪಿಗಳು ಎಲ್ಲಿಂದ ಈ ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಖರೀದಿಸುವದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳು ಸೇರಿ ಕಳ್ಳತನ, ದರೋಡೆ ಸೇರಿದಂತೆ ವಿವಿಧ ಅಪರಾಧ ಕೃತ್ಯಕ್ಕೆ ಬಳಸಲು ಹೊರ ರಾಜ್ಯಗಳಿಂದ ಇಂಥ ಕಂಟ್ರಿ ಪಿಸ್ತೂಲ್ ಗಳನ್ನು ತರುತ್ತಿರುವದು ಆತಂಕ ಮೂಡಿಸಿದೆ.

ಎಸ್ಪಿ ಆನಂದಕುಮಾರ್ ಖಡಕ್ ಎಚ್ಚರಿಕೆ!
ಸಾರ್ವಜನಿಕರು ಸಹ ಕಡಿಮೆ ಬೆಲೆಗೆ ಕಂಟ್ರಿ ಪಿಸ್ತೂಲ್ ಮಾರಾಟಕ್ಕೆ ಬಂದವರಿಂದ ಖರೀದಿಸಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಆನಂದಕುಮಾರ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಸಹ ಇದೇ ರೀತಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 

ಭೀಮಾತೀರದಿಂದ ಜಿಲ್ಲಾಕೇಂದ್ರಕ್ಕೆ ಕಂಟ್ರಿ ಪಿಸ್ತೂಲ್ ದಂಧೆ!
ಕೇವಲ ಭೀಮಾತೀರದಲ್ಲಿ ಖರೀದಿ ಹಾಗೂ ಮಾರಾಟವಾಗುತ್ತಿದ್ದ ಕಂಟ್ರಿ ಪಿಸ್ತೂಲ್ ಗಳು, ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೂ ವ್ಯಾಪಿಸುತ್ತಿದ್ದು, ಮತ್ತೆ ಬೇರೆ ಕಡೆಯಲ್ಲಿಯೂ ಭೀಮಾತೀರದ ವಾತಾವರಣ ಉದ್ಭವವಾಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಈಗಲಿಂದಲೇ ಕೈಗೊಳ್ಳುತ್ತಿದ್ದಾರೆ. 
ಅಕ್ರಮ ಕಂಟ್ರಿ ಪಿಸ್ತೂಲ್ ಪ್ರಕರಣವನ್ನು ಆದರ್ಶನಗರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು!
ವಿವಿಧ ಪ್ರಕರಣದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು, ವಾಹನಗಳನ್ನು ವಶ ಪಡಿಸಿಕೊಂಡು ಒಟ್ಟು ಅಕ್ರಮ ಕಂಟ್ರಿ ಪಿಸ್ತೂಲ್ ಪ್ರಕರಣ ಸೇರಿ 9 ಪ್ರಕರಣಗಳನ್ನು ಭೇದಿಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ರಾತ್ರಿ ಮನೆಗಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು  ಮೂವರು ಆರೋಪಿಗಳನ್ಮು ಬಂಧಿಸಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯವರಾದ  ಸಿಕಂದರ ಸೈಯದ್, ಅಮೀರಖಾನ ಪಠಾಣ ಹಾಗೂ ಅಬ್ದುಲ್ ರಹೀಮ್ ಶೇಖ ಬಂಧಿತ ಆರೋಪಿಗಳು. ಆರೋಪಿಗಳಿಂದ 409 ಗ್ರಾಂ ಬಂಗಾರ, 1145ಗ್ರಾಂ ಬೆಳ್ಳಿ, ಎರಡು ಬುಲೇರೋ, ಒಂದು ಕ್ರೂಜರ್ ವಾಹನ ಹಾಗೂ ಕಳ್ಳತನಕ್ಕೆ ಬಳಸಿದ್ದ ಒಂದು ಕಾರು ಸೇರಿ 41, 33,750ಲಕ್ಷ ರೂ. ಮೌಲ್ಯದ ವಸ್ತು ವಶ ಪಡಿಸಿಕೊಂಡಿದ್ದಾರೆ. 

ಚುನಾವಣೆ ಹೊಸ್ತಿಲಲ್ಲೇ ಗುಮ್ಮಟನಗರಿಯಲ್ಲಿ Country made pistol ಹಾವಳಿ..!

ಗಾಂಧಿಚೌಕ ಪೊಲೀಸರ ಕಾರ್ಯಾಚರಣೆ ; ಕಳ್ಳರ ಬಂಧನ!
ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ರಹೀಮ್ ನಗರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕುಮಾರ ಲೇ ಔಟ್ ನ ಸಂತೋಷ ಲಾಳಸಂಗ ಹಾಗೂ ಗಾಂಧಿನಗರದ ರೋಹಿತ ಕಾಯಗೊಂಡ ಎಂಬವರನ್ನು ಬಂಧಿಸಲಾಗಿದೆ. ಇವರಿಂದ 3, 27ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ವಶ ಪಡಿಸಿಕೊಂಡು ಮೂರು ಮನೆಗಳ್ಳತನ ಪ್ರಕರಣ ಭೇದಿಸಿದ್ದಾರೆ. 

Bengaluru: ತಡರಾತ್ರಿ ಪಿಸ್ತೂಲ್ ಹಿಡಿದು ಬೆದರಿಸಿ ಅಟ್ಟಹಾಸಗೈದ ಬಿಲ್ಡರ್..!

ಕೊಲೆ ಪ್ರಕರಣ ಭೇದಿಸಿದ ಆದರ್ಶನಗರ ಪೊಲೀಸರು! 
ಜಮೀನು ವಿಚಾರವಾಗಿ ಸಹೋದರ ಸಂಬಂಧಿಗಳ ಮಧ್ಯೆ ನಗರದ ಭೂತನಾಳ ಹೊಲದಲ್ಲಿ ನಡೆದ ಗಲಾಟೆಯಲ್ಲಿ ಸಂತೋಷ ಸದಾಶಿವ ಕಾಳೆ ಎಂಬವನ ಕೊಲೆಯಾಗಿದ್ದನು. ಈ ಪ್ರಕರಣ ಭೇದಿಸಿದ ಆದರ್ಶನಗರ ಪೊಲೀಸರು ಇಟ್ಟಂಗಿಹಾಳದ ತಂದೆ ಹಾಗೂ ಆತನ ಇಬ್ಬರು ಮಕ್ಜಳನ್ನು ಬಂಧಿಸಿದ್ದಾರೆ.‌ ತಂದೆ ದೂಳಪ್ಪ ಕಾಳೆ ಹಾಗೂ ಆತನ ಇಬ್ಬರು ಮಕ್ಕಳಾದ ವಿಠ್ಠಲ ಕಾಳೆ, ಅರ್ಜುನ ಕಾಳೆಯನ್ನು ಬಂಧಿಸಲಾಗಿದೆ.

Latest Videos
Follow Us:
Download App:
  • android
  • ios