Asianet Suvarna News Asianet Suvarna News

8 ತಿಂಗಳಿಂದ ತಲೆಮರೆಸಿಕೊಂಡಿದ್ದ ರೌಡಿಗೆ ಗುಂಡು ಹೊಡೆದು ಅರೆಸ್ಟ್‌

*  ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ
*  ಕೊನೆಗೆ ಗುಂಡಿಕ್ಕಿ ಬಂಧನ
*  ಘಟನೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ಗೆ ಪೆಟ್ಟು 
 

Rowdy sheeter Arrested After Firing in Bengaluru grg
Author
Bengaluru, First Published Oct 27, 2021, 11:29 AM IST

ಬೆಂಗಳೂರು(ಅ.27):  ಎಂಟು ತಿಂಗಳಿಂದ ತಮ್ಮ ಕೈ ಸಿಗದೆ ತಲೆಮರೆಸಿಕೊಂಡು ತಿರುಗುತ್ತಿದ್ದ ರೌಡಿಯೊಬ್ಬನಿಗೆ(Rowdy sheeter) ಗುಂಡು ಹೊಡೆದು ಅಮೃತಹಳ್ಳಿ ಠಾಣೆ ಪೊಲೀಸರು(Police) ಮಂಗಳವಾರ ಸೆರೆ ಹಿಡಿದಿದ್ದಾರೆ.

ಜಕ್ಕೂರು ಲೇಔಟ್‌ ನಿವಾಸಿ ನಿಖಿಲ್‌ ಅಲಿಯಾಸ್‌ ಸ್ಯಾಮುಯಲ್‌(25) ಬಂಧಿತ(Arrest). ಸಂಪಿಗೆಹಳ್ಳಿಯ ಕಾಳಿಪಾಳ್ಯ ಸಮೀಪ ಹಲ್ಲೆ ಪ್ರಕರಣದಲ್ಲಿ ಆರೋಪಿಯನ್ನು(Accused) ಬಂಧಿಸಲು ಅಮೃತಹಳ್ಳಿ ಠಾಣೆ ಪೊಲೀಸರು ತೆರಳಿದ್ದರು. ಆ ವೇಳೆ ಪೊಲೀಸರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ(Attack) ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡಿನ ದಾಳಿ(Firing) ನಡೆದಿದೆ. ಘಟನೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಪ್ರಕಾಶ್‌ಗೂ ಪೆಟ್ಟಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಕೊಲೆಗೆ ಮುನ್ನ ರೌಡಿ ಅಟ್ಟಾಡಿಸಿದ ವಿಡಿಯೋ ವೈರಲ್‌: ಬೆಚ್ಚಿಬಿದ್ದ ಜನತೆ

ಹೊರ ರಾಜ್ಯಗಳಲ್ಲಿ ನಿಖಿಲ್‌ ಸವಾರಿ:

ಐದಾರು ವರ್ಷಗಳಿಂದ ಈಶಾನ್ಯ ಭಾಗದಲ್ಲಿ ನಿಖಿಲ್‌ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದು, ಆತನ ಮೇಲೆ ಕೊಲೆ ಯತ್ನ ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್‌(Criminal) ಚರಿತ್ರೆ ಹಿನ್ನೆಲೆಯಲ್ಲಿ ಆತನ ಮೇಲೆ ರೌಡಿಪಟ್ಟಿ ತೆರೆಯಲಾಗಿತ್ತು. ಹಳೇ ಪ್ರಕರಣಗಳ ವಿಚಾರಣೆಗೆ(Inquiry) ಗೈರಾಗಿದ್ದ ಕಾರಣಕ್ಕೆ ನಿಖಿಲ್‌ ವಿರುದ್ಧ ನ್ಯಾಯಾಲಯವು(Court) ಬಂಧನ ವಾರೆಂಟ್‌ ಸಹ ಜಾರಿಗೊಳಿಸಿತ್ತು. ಆದರೆ ಪೊಲೀಸರಿಗೆ ಕೈ ಸಿಗದೆ ತಲೆಮರೆಸಿಕೊಂಡು ಆರೋಪಿ ಓಡಾಡುತ್ತಿದ್ದ ಎಂದು ಡಿಸಿಪಿ ವಿವರಿಸಿದ್ದಾರೆ.

ಜು.3ರಂದು ಸಂಪಿಗೆಹಳ್ಳಿ ಸಮೀಪ ಗೋವಿಂದರಾಜ್‌ ಎಂಬುವರ ಮೇಲೆ ತನ್ನ ಸಹಚರರ ಜತೆ ಸೇರಿ ನಿಖಿಲ್‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಕೃತ್ಯ ಸಂಬಂಧ ಆತನ ನಾಲ್ವರು ಸಹಚರರ ಬಂಧನವಾಗಿತ್ತು. ಆದರೆ ಬಂಧನ ಭೀತಿಯಿಂದ ನಗರ ತೊರೆದು ಹೊರರಾಜ್ಯಗಳಲ್ಲಿ ಆಶ್ರಯ ಪಡೆದಿದ್ದ ನಿಖಿಲ್‌ ಪತ್ತೆಗೆ ಪೊಲೀಸರು ಹುಡುಕಾಟ ಮುಂದುವರೆದಿತ್ತು. ಹೀಗಿರುವಾಗ ಮಂಗಳವಾರ ಸಂಜೆ ಕಾಳಿಪಾಳ್ಯ ಬಳಿ ನಿಖಿಲ್‌ ಇರುವಿಕೆಗೆ ಬಗ್ಗೆ ತನಿಖಾ ತಂಡಕ್ಕೆ ಖಚಿತ ಮಾಹಿತಿ ಸಿಕ್ಕಿದೆ. 

ಕೂಡಲೇ ಜಾಗ್ರತರಾದ ಪೊಲೀಸರು, ಆರೋಪಿ ಬಂಧನಕ್ಕೆ ತೆರಳಿದೆ. ತನ್ನನ್ನು ಬಂಧಿಸಲು ಬಂದ ಪೊಲೀಸರ ವಿರುದ್ಧ ಆತ ತಿರುಗಿ ಬಿದ್ದಿದ್ದಾನೆ. ಈ ಹಂತದಲ್ಲಿ ಪಿಎಸ್‌ಐ ಪ್ರಕಾಶ್‌ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾನೆ. ಆಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದರೂ ಕೇಳದೆ ಹೋದಾಗ ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ಗುಂಡು ಹೊಡೆದಿದ್ದಾರೆ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ(Hospital) ದಾಖಲಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
 

Follow Us:
Download App:
  • android
  • ios