ಬೆಂಗಳೂರಿನಲ್ಲಿ ಹಾಡಹಗಲೇ ಲಾಂಗ್ ತೋರಿಸಿ ದರೋಡೆ -ಸಿಸಿಟಿವಿಯಲ್ಲಿ ಸೆರೆ ಆಯ್ತು ಕೃತ್ಯ!
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಪರಾಧ ಪ್ರಕರಣಗಳಿಗೆ ಕೊನೆಯೇ ಇಲ್ಲದಂತಾಗಿದೆ. ದಿನನಿತ್ಯ ದರೋಡೆ, ಹಲ್ಲೆ, ಕೊಲೆ, ಹತ್ಯಾಚಾರ ಪ್ರಕರಣಗಳು ನಡೆಯುತ್ತಲೆ ಮಹಿಳೆಯರು ಮಕ್ಕಳ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ ಇದರಿಂದ ಬೆಂಗಳೂರಿಗೆ ಮುಕ್ತಿ ಯಾವಾಗ?
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು (ಜು.19): ಮಾಯಾನಗರಿ ಬೆಂಗ್ಳೂರಂತಹ ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ತಾಗ್ತಾನೆ ಇವೆ. ಕೊಲೆ. ಕಳ್ಳತನ, ದರೋಡೆ ಅಂತ ಕ್ರೈಮ್ ಗಳಿಗೆ ಕಡಿವಾಣ ಯಾವಾಗ್ ಬೀಳೋತ್ತೋ ಏನೋದು ಗೊತ್ತಿಲ್ಲ. ಯಾಕಂದ್ರೆ ಬೆಂಗ್ಳೂರ್ ಪೊಲೀಸ್ರನ್ನ ಕಂಡ್ರೆ ದರೋಡೆಕೋರರಿಗೆ ಭಯನೇ ಇಲ್ವೋ ಏನೋ...? ಇಷ್ಟು ದಿನ ರಾತ್ರಿ ದರೋಡೆ ಮಾಡ್ತಿದ್ದವ್ರು, ಇದೀಗ ಹಾಡಹಗಲೇ ಫೀಲ್ಡ್ಗೇ ಇಳಿದ್ಬಿಟ್ಟಿದ್ದಾರೆ.
ಈಗಾಗ್ಲೇ ಈ ಹಿಂದೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ(D J Halli Police Station)ಯಲ್ಲಿ ನಡೆದ ಗಲೆಭೆ ಇನ್ನು ಮಾಸಿಲ್ಲ. ಹೀಗಿರೋವಾಗ್ಲೇ ಈ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ದರೋಡೆ(Robbery), ಅಪರಾಧ ಪ್ರಕರಣಗಳು ಬೆಳಕಿಗೆ ಬರ್ತಾನೇ ಇವೆ. ಹಾಗಂತ ಪೊಲೀಸ್ರು ಕೈಕಟ್ಟಿ ಕುಳ್ತಿಲ್ಲ. ಸದಾ ಹೊಯ್ಸಳ ಜೀಪ್(Hoysala Vehicle) ನಲ್ಲಿ ರೌಂಡ್ ಹಾಕ್ತಾನೇ ಇರ್ತಾರೆ. ಆದ್ರೂ ಕೂಡ ನೀವ್ ಚಾಪೆ ಕೆಳ್ಗ್ ತೂರಿದ್ರೇ, ನಾವ್ ರಂಗೋಲಿ ಕೆಳ್ಗೇನೇ ತೂರ್ತಿವಿ ಅಂತ ಈ ಪುಂಡರು ಪೊಲೀಸ್ರಿಗೇ ಚಳ್ಳೇ ಹಣ್ ತಿನ್ಸಿ ಅವ್ರ್ ಬರ್ದೇ ಇರೋ ಟೈಮ್ ನೋಡ್ಕಂಡ್ ತಮ್ಮ ಖರಾಮತ್ತನ್ನ ತೋರ್ತಿದ್ದಾರೆ.
ಇದನ್ನೂ ಓದಿ: BENGALURU CRIME; ಗಂಡ ಹೆಂಡತಿ ಜಗಳದಲ್ಲಿ ಬಲಿಯಾದ ಅತ್ತೆ!
ಇದೇ ಜುಲೈ 18 ಅಂದ್ರೆ ನಿನ್ನೆ ಸೋಮವಾರ ಬೆಳಿಗ್ಗೆಯೇ ಡಿ.ಜೆ.ಹಳ್ಳಿಯ ನಂದಗೋಕುಲ ಲೇಔಟ್(NandaGokul Layout) ನಲ್ಲಿ ದರೋಡೆ ನಡೆದಿದೆ. ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಪಾನಿಪುರಿ(Paneepuri) ಹುಡ್ಗ ಟೀ ಕುಡ್ಯೋಣ ಅಂತ ಬೆಳಿಗ್ಗೆ ಟೀ ಅಂಗಡಿಗೆ ಹೋಗಿ ವಾಪಸ್ ಮನೆಗೆ ಬರ್ತಾ ಇರ್ತಾನೆ... ಈ ಟೈಮ್ಗ್ ಇಬ್ರು ಪುಂಡರು ಬೈಕ್ ನಲ್ಲಿ ಬಂದು ನಡ್ಕೊಂಡ್
ಹೋಗ್ತಿದ್ದ. ಹುಡುಗನಿಗೆ ಲಾಂಗ್ ತೋರಿಸಿ ಆತನ ಬಳಿ ಹಣ ಕೇಳಿದ್ದಾರೆ. ಆತನ ಬಳಿ ಹಣ ಇಲ್ಲ ಅಂತ ಗೊತ್ತಾಗಿ ಮೊಬೈಲ್ ಕಿತ್ಕೊಂಡು ಪರಾರಿ ಆಗಿದ್ದಾರೆ.
ಇದನ್ನೂ ಓದಿ: ಖಾಸಗಿ ವಿಡಿಯೋ ವೈರಲ್, ದೂರು ಕೊಟ್ಟವನೇ ನನ್ನ ಗಂಡ ಎಂದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ
ದರೋಡೆಕೋರರ ಈ ಕೃತ್ಯ ಸಿಸಿ ಟಿವಿ(CCTV)ಯಲ್ಲಿ ಸೆರೆಯಾಗಿದ್ದು, ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲಿನ ಸ್ಥಳೀಯರು ಹೇಳೋ ಪ್ರಕಾರ ಈ ದರೋಡೆ ಅನ್ನೋದು ಅಲ್ಲಿ ಕಾಮನ್ ಆಗ್ಬಿಟ್ಟಿದೆಯಂತೆ. ಕಳೆದ ವಾರ ಕೂಡ ಇದೇ ರೀತಿ ಅಲ್ಲಿನ ಪೆಟ್ರೋಲ್ ಬಂಕ್ ಅಲ್ಲೂ ಕೂಡ ಹೀಗೇ ನಡ್ದಿತಂತೆ. ಅವಾಗ್ ಕೂಡ ಚೇಸ್ ಮಾಡಿ ಹಿಡಿಯೋಕ್ ಹೋದಾಗ ಆಸಾಮಿಗಳು ಪರಾರಿ ಆಗ್ಬಿಟ್ಟಿದ್ರಂತೆ. ಇದೀಗ ಪೊಲೀಸ್ರು ಪುಂಡರ ಬೆನ್ನತ್ತಿದ್ದಾರೆ. ಏನೇ ಆದ್ರೂ ಪೊಲೀಸ್ರು ಎಷ್ಟೇ ಎಚ್ಚರಿಕೆಯಿಂದ ಇದ್ರು ಕೂಡ ಕೆಲವು ಪುಂಡರಿಗೆ ಮಾತ್ರ ಅವ್ರು ಆಡಿದ್ದೇ ಆಟ, ಮಾಡಿದ್ದೇ ಪುಂಡಾಟ ಆಗಿದೆ...ಒಟ್ನಲ್ಲಿ ನೀವೇನಾದ್ರು ಬೆಳ್ಳಂ ಬೆಳಿಗ್ಗೆ ಒಬ್ರೇ ಎಲ್ಲಿಗಾದ್ರು ಹೋಗೋಕ್ ಮುಂಚೆ ಸ್ವಲ್ಪ ಉಷಾರಾಗಿರಿ.