Bengaluru Crime; ಗಂಡ ಹೆಂಡತಿ ಜಗಳದಲ್ಲಿ‌ ಬಲಿಯಾದ ಅತ್ತೆ!

ಅಳಿಯನೊಬ್ಬ ಹೆಣ್ಣು ಕೊಟ್ಟ ಅತ್ತೆಯನ್ನು ಸುತ್ತಿಗೆಯಲ್ಲಿ ಹೊಡೆದು ಕೊಂದಿರುವ ಘಟನೆ ಮಾರತ ಹಳ್ಳಿಯ ಸಂಜಯನಗರದಲ್ಲಿ ನಡೆದಿದೆ. 

Bengaluru Man kills mother-in-law while fighting with his  wife gow

ಬೆಂಗಳೂರು (ಜು.19): ಅಳಿಯನೊಬ್ಬ ಹೆಣ್ಣು ಕೊಟ್ಟ ಅತ್ತೆಯನ್ನು ಸುತ್ತಿಗೆಯಲ್ಲಿ ಹೊಡೆದು ಕೊಂದಿರುವ ಘಟನೆ ಮಾರತ ಹಳ್ಳಿಯ ಸಂಜಯನಗರದಲ್ಲಿ ನಡೆದಿದೆ. ಕೊಲೆಗಾರನನ್ನು ನಾಗರಾಜ ಎಂದು ಗುರುತಿಸಲಾಗಿದೆ.  ಅಳಿಯನಿಂದಲೇ ಕೊಲೆಯಾದ ದುರ್ದೈವಿ ಅತ್ತೆಯನ್ನು ಸೌಭಾಗ್ಯ ಎಂದು ಗುರುತಿಸಲಾಗಿದೆ.  ಜುಲೈ 13 ರ ಬುಧವಾರ ಸಂಜೆ 7.30 ಕ್ಕೆ ನಡೆದಿರುವ ಘಟನೆ  ತಡವಾಗಿ ಬೆಳಕಿಗೆ ಬಂದಿದೆ.  ಕಳೆದ 6 ವರ್ಷದ ಹಿಂದೆ ನಾಗರಾಜ (35) ಸೌಭಾಗ್ಯ ಅವರ ಮಗಳು  ಭವ್ಯಶ್ರೀಯನ್ನು ಮದುವೆಯಾಗಿದ್ದ, ಈ ದಂಪತಿಗೆ 5 ವರ್ಷದ ಮಗು ಕೂಡ ಇದೆ. ಡ್ರೈವಿಂಗ್ ಕೆಲಸ ಮಾಡ್ಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದ.  ಹಾಗಾಗಿ ಆಗಾಗ ಮನೆಯಲ್ಲಿ ಗಲಾಟೆ ಆಗ್ತಾ ಇತ್ತು. ಗಂಡನ ಕಾಟ ತಾಳಲಾರದೆ ಸಂಜಯನಗರದಲ್ಲಿರುವ ತಾಯಿ ಮನೆಗೆ ಭವ್ಯಶ್ರೀ  ಬಂದಿದ್ದಳು.  ಮೂರು ವರ್ಷದಿಂದ ಬಂದು ತಾಯಿ ಮನೆಯಲ್ಲಿಯೇ  ಭವ್ಯಶ್ರೀ ವಾಸವಿದ್ದರು. ಈ ಮಧ್ಯೆ ವಿಚ್ಛೇದನಕ್ಕಾಗಿಯೂ ತಯಾರಿ ಕೂಡ ನಡೆಯುತ್ತಿತ್ತು. ಆದರೆ ಕುಡಿದ ಅಮಲಿನಲ್ಲಿದ್ದಾಗ ಮತ್ತೆ ನಾಗರಾಜನಿಗೆ ಪತ್ನಿ ಮತ್ತೆ ಬೇಕು ಅನಿಸಿದೆ  ಹೀಗಾಗಿ ಜುಲೈ 12 ರ ಮಂಗಳವಾರ ಅತ್ತೆ ಮನೆ ಬಳಿ ಬಂದು ನಾಗರಾಜ್ ಗಲಾಟೆ ಮಾಡಿದ್ದ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಗಲಾಟೆಗೆ ಮುಂದಾಗಿದ್ದಾನೆ. ಈ ವೇಳೆ ಸೌಭಾಗ್ಯ ಕುಟುಂಬಸ್ಥರು  ಬುದ್ಧಿ ಹೇಳಿ ಕಳುಹಿಸಿದ್ದರು. 

HALನ ಸಂಜಯನಗರದಲ್ಲಿ  ಸೌಭಾಗ್ಯ  ಸೊಪ್ಪು ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದರು. ಕೊಲೆಯಾದ ದಿನ ಕೂಡ ಅವರು ಸೊಪ್ಪು ವ್ಯಾಪಾರ ಮಾಡ್ತಿದ್ದರು. ಈ  ಜಾಗಕ್ಕೆ ಬಂದು ಸುತ್ತಿಗೆಯಿಂದ ಹಲ್ಲೆ ಮಾಡಿ ನಾಗರಾಜ್ ಹತ್ಯೆ ಮಾಡಿದ್ದಾನೆ. ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಸೌಭಾಗ್ಯ ಅವರನ್ನು   ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ  ಸಾವನ್ನಪ್ಪಿದ್ದಾರೆ.  ಘಟನೆ ಸಂಬಂಧ ಹೆಚ್ ಎ ಎಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು,   ಆರೋಪಿ ನಾಗರಾಜ್ ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.

Shivamogga ರೌಡಿ ಶೀಟರ್‌ ಹಂದಿ ಅಣ್ಣಿ ಹತ್ಯೆಗೈದ 8 ಮಂದಿ ರಾತ್ರೋ ರಾತ್ರಿ ಶರಣು

ಯುವತಿಗೆ ಮೆಸೇಜ್‌ ಮಾಡಿದ್ದವನ ಹೊಡೆದು ಕೊಂದಿದ್ದ ರೌಡಿಯ ಸೆರೆ: ಪ್ರೀತಿಸುವಂತೆ ಅಣ್ಣನ ಮಗಳನ್ನು ಪೀಡಿಸುತ್ತಿದ್ದ ಯುವ​ಕ​ನನ್ನು ಹತ್ಯೆ ಮಾಡಿದ್ದ ಮಾಜಿ ರೌಡಿ​ ಶೀ​ಟರ್‌ ಸೇರಿ ಇಬ್ಬ​ರನ್ನು ಬೈಯ​ಪ್ಪ​ನ​ಹಳ್ಳಿ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ಬೈಯ​ಪ್ಪ​ನ​ಹಳ್ಳಿ ನಿವಾಸಿ, ಮಾಜಿ ರೌಡಿ​ಶೀ​ಟರ್‌ ನಾಗೇಂದ್ರ (46) ಮತ್ತು ಆತನ ಸಹ​ಚರ ರಂಗ​ಸ್ವಾಮಿ (45) ಬಂಧಿ​ತರು. ಆರೋ​ಪಿ​ಗಳು ಜುಲೈ 15ರಂದು ರಾತ್ರಿ ಬನ​ಶಂಕರಿ ನಿವಾಸಿ ಪ್ರಜ್ವಲ್‌ ಎಂಬಾ​ತ​ನ​ನ್ನು ಬೈಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆ​ಸಿ​ಕೊಂಡು ದೊಣ್ಣೆ​ಯಿಂದ ಹಲ್ಲೆಗೈದು ಹತ್ಯೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ನಾಗೇಂದ್ರನ ಅಣ್ಣನ ಮಗಳು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಹಳೇ ಪೇಪರ್‌ ಆಯುವ ಕೆಲಸ ಮಾಡುವ ಪ್ರಜ್ವಲ್‌ ಈ ಯುವತಿಗೆ ದೂರದ ಸಂಬಂಧಿಯಾಗಿದ್ದಾನೆ. ಹೀಗಾಗಿ ಪ್ರಜ್ವಲ್‌ ತನ್ನನ್ನು ಪ್ರೀತಿಸುವಂತೆ ಯುವತಿಗೆ ಒತ್ತಾಯಿಸುತ್ತಿದ್ದ. ಆದರೆ, ಆ ಯುವತಿ ಪ್ರೀತಿಸಲು ನಿರಾಕರಿಸಿದ್ದಳು. ಇತ್ತೀಚೆಗೆ ಯುವತಿಯ ಸಂಬಂಧಿ ವಿಷ್ಣು ಎಂಬಾತನ ಜತೆಗೆ ಯುವತಿಯ ಮೊಬೈಲ್‌ ನಂಬರ್‌ ಪಡೆದು ಕರೆ ಮಾಡಿ, ವಾಟ್ಸಾಪ್‌ ಸಂದೇಶ ಕಳುಹಿಸಿ ಪ್ರೀತಿಸುವಂತೆ ಕಾಡುತ್ತಿದ್ದ. ಈ ವಿಷಯ ತಿಳಿದು ನಾಗೇಂದ್ರ ಹಾಗೂ ರಂಗಸ್ವಾಮಿ ಜುಲೈ 15ರ ರಾತ್ರಿ ವಿಷ್ಣು ಮೂಲಕ ಪ್ರಜ್ವಲ್‌ಗೆ ಕರೆ ಮಾಡಿಸಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ. ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಈ ವೇಳೆ ಪ್ರಜ್ವಲ್‌ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ.

Latest Videos
Follow Us:
Download App:
  • android
  • ios