ನಡೆದು ಬರುತ್ತಿದ್ದ ಜೋಡಿಯನ್ನು ಅಡ್ಡಹಾಕಿದ ದರೋಡೆಕೋರರು, ಬಳಿಕ ನಡೆದಿದ್ದೇ ಅಚ್ಚರಿ!
ನಡೆದುಕೊಂಡು ಹೋಗುತ್ತಿದ್ದ ಜೋಡಿಯನ್ನು ಇಬ್ಬರು ದರೋಡೆಕೋರರು ಸ್ಕೂಟರ್‌ನಲ್ಲಿ ಬಂದು ಅಡ್ಡಹಾಕಿದ್ದಾರೆ. ಬಳಿಕ ಇದ್ದದ್ದೆಲ್ಲಾ ದೋಚಲು ಮುಂದಾಗಿದ್ದಾರೆ. ಆದರೆ ದೋಚಲು ಬಂದ ದರೋಡೆಕೋರರು ನಡೆ ಅಚ್ಚರಿಗೆ ಕಾರಣವಾಗಿದೆ.
ನವದೆಹಲಿ(ಜೂ.26) ಇದೊಂದು ವಿಚಿತ್ರ ಘಟನೆ. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಜೋಡಿಯನ್ನು ಸ್ಕೂಟರ್‌ನಲ್ಲಿ ಬಂದ ದರೋಡೆಕೋರರು ಅಡ್ಡಹಾಕಿದ್ದಾರೆ. ಇಬ್ಬರು ದರೋಡೆಕೋರರು ಜೋಡಿ ಬಳಿ ಇರುವ ಎಲ್ಲವನ್ನೂ ದೋಚಲು ಮುಂದಾಗಿದ್ದಾರೆ. ಇಬ್ಬರನ್ನು ತಡಕಾಡಿದ್ದಾರೆ. ಆದರೆ 20 ರೂಪಾಯಿ ಬಿಟ್ಟರೆ ಬೇರೆನೂ ಸಿಕ್ಕಿಲ್ಲ. ಇದರಿಂದ ದರೋಡೆಕೋರರು ನಿರಾಶೆಗೊಂಡಿದ್ದಾರೆ. ಇಬ್ಬರು ಬಿಟ್ಟು ಸ್ಕೂಟರ್ ಹತ್ತುವಾಗ ತಾವೇ 100 ರೂಪಾಯಿಯನ್ನು ಜೋಡಿಗೆ ನೀಡಿ ತೆರಳಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಪೂರ್ವ ದೆಹಲಿಯ ಶಹದರಾದ ಮಾರುಕಟ್ಟೆ ಬಳಿ ಈ ಘಟನೆ ನಡೆದಿದೆ. ದಾರಿಯಲ್ಲಿ ಯುವಕ ಹಾಗು ಯುವತಿ ನಡೆದುಕೊಂಡು ಬಂದಿದ್ದಾರೆ. ಜನರ ಓಡಾಟ ಇರಲಿಲ್ಲ. ವಾಹನ ಸಂಚಾರವೂ ಕಡಿಮೆಯಾಗಿತ್ತು. ಇದೇ ದಾರಿಯಲ್ಲಿ ಸ್ಕೂಟರ್ ಮೂಲಕ ಇಬ್ಬರು ದರೋಡೆಕೋರರುು ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಇಬ್ಬರನ್ನು ಅಡ್ಡಹಾಕಿದ್ದಾರೆ.
ವಾಹನ ಸವಾರರೇ ಎಚ್ಚರ: ಹಗಲಲ್ಲೇ ಬಂದೂಕು ತೋರಿಸಿ ಲಕ್ಷಾಂತರ ರೂ. ದರೋಡೆ; ಸಿಸಿ ಕ್ಯಾಮೆರಾದಲ್ಲಿ ಸೆರೆ
ಸ್ಕೂಟರ್‌ನಿಂದ ಇಳಿದ ದರೋಡೆಕೋರರು ಇಬ್ಬರನ್ನು ಗದರಿಸಿದ್ದಾರೆ. ಇತ್ತ ಜೋಡಿಗಳು ಹೆದರಿದ್ದಾರೆ. ಕೂಗಿದರೆ ದಾಳಿ ಮಾಡುವುದಾಗಿ ಬೆದರಿಸಿದ್ದಾರೆ. ಇದರಿಂದ ಮರು ಮಾತನಾಡದೆ ಸುಮ್ಮನೆ ನಿಂತುಕೊಂಡಿದ್ದಾರೆ. ಇತ್ತ ದರೋಡೆಕೋರರು ಇಬ್ಬರನ್ನು ತಪಾಸಣೆ ಮಾಡಿದ್ದಾರೆ. ಇವರ ಬಳಿ 20 ರೂಪಾಯಿ ಬಿಟ್ಟರೆ ಬೇರೇನು ಇರಲಿಲ್ಲ. ಮೊಬೈಲ್ ಫೋನ್ ಕೂಡ ಇರಲಿಲ್ಲ.
ಕೆಲ ಹೊತ್ತು ತಡಕಾಡಿದರೂ ಏನೂ ಸಿಕ್ಕಿಲ್ಲ. ಹೀಗಾಗಿ ದರೋಡೆಕೋರರು ಸ್ಕೂಟರ್ ಏರಿ ತೆರಳಲು ಮುಂದಾಗಿದ್ದಾರೆ. ಈ ವೇಳೆ ದರೋಡೆಕೋರರು ತಮ್ಮಲ್ಲಿದ್ದ 100 ರೂಪಾಯಿಯನ್ನು ಜೋಡಿಗೆ ನೀಡಿದ್ದಾರೆ. ಬಳಿಕ ಸ್ಕೂಟರ್ ಏರಿ ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪ್ರೀತಿ ಹೆಸರಲ್ಲಿ ಹಣ ದೋಚಿದ ಪ್ರಿಯತಮೆ: ಪ್ರಿಯಕರನಿಗೆ 21 ಲಕ್ಷ ರೂ. ಪಂಗನಾಮ
ಇತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ದರೋಡೆಕೋರರ ಮಾಹಿತಿ, ವಾಹನ ನಂಬರ್ ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಬಳಿಕ ಕಾರ್ಯಾಚರಣೆಗೆ ಇಳಿದ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಇವರಿಂದ 30 ಮೊಬೈಲ್ ಫೋನ್ ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ಯಾಂಗ್‌ಸ್ಟರ್ ನೀರಜ್ ಭವನಾ ಯೂಟ್ಯೂಬ್ ವಿಡಿಯೋ ನೋಡಿ ಆತನ ಗ್ಯಾಂಗ್ ಸೇರಲುು ಕಳ್ಳತನ ಮಾಡಿರುವುದಾಗಿ ಪೊಲೀಸರ ಬಳಿ ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 20 ರೂಪಾಯಿ ನೋಡಿ ಅವರೇ 100 ರೂಪಾಯಿ ಕೊಟ್ಟಿದ್ದಾರೆ. ತಮಾಷೆಗೆ ಹಲವು ಬಾರಿ ಈ ರೀತಿ ಮಾತುಗಳನ್ನಾಡಿದ್ದೇವೆ. ಆದರೆ ಇದೀಗ ಇದೇ ರೀತಿ ಘಟನೆ ನಡೆದಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.