Asianet Suvarna News Asianet Suvarna News

ಪ್ರೀತಿ ಹೆಸರಲ್ಲಿ ಹಣ ದೋಚಿದ ಪ್ರಿಯತಮೆ: ಪ್ರಿಯಕರನಿಗೆ 21 ಲಕ್ಷ ರೂ. ಪಂಗನಾಮ

ಪ್ರೀತಿ ಮಾಡೋ ನೆಪದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಯುವಕನೊಂದಿಗೆ ಆಟವಾಡಿ, ನಂತರ ಕಿಡ್ನಾಪ್‌ ಮಾಡಿಸಿದ ಪ್ರಿಯತಮೆ 21 ಲಕ್ಷ ರೂ. ಹಣವನ್ನು ದೋಚಿದ್ದಾಳೆ.

Bhavna Reddy 21 lakh rupees robbery from name of love from Bengaluru techie sat
Author
First Published Jun 25, 2023, 8:27 PM IST

ಚಿಕ್ಕಬಳ್ಳಾಪುರ (ಜೂ.25): ಮೋಸ ಮಾಡಲೆಂದೆ ನೀನು ಬಂದೆಯಾ.. ಪ್ರೀತಿ ಹೆಸರು ಹೇಳಿ ಎದುರು ನಿಂತೆಯಾ.. ಎನ್ನುವಂತಾಗಿ ಸಾಪ್ಟ್‌ವೇರ್‌ ಇಂಜಿನಿಯರ್‌ ಪ್ರಿಯಕರನ ಕಥೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುವ ಯುವಕ ಪ್ರೀತಿಯ ಬಲೆಗೆ ಬಿದ್ದಿದ್ದಾನೆ. ಇನ್ನು ಯುವತಿಯೊಂದಿಗೆ ಡೇಟಿಂಗ್‌ ಮಾಡಲು ಹೋಗುತ್ತಿದ್ದಾಗ, ಅವನನ್ನು ಕಿಡ್ನಾಪ್‌ ಮಾಡಿಸಿದ ಪ್ರೇಯಸಿ ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿ ಥಳಿಸಿ 21 ಲಕ್ಷ ರೂ. ಹಣವನ್ನೂ ಕಿತ್ತುಕೊಂಡು ಕಳಿಸಿದ್ದಾರೆ. 

ಪ್ರಿಯತಮೆಯಿಂದಲೇ ಪ್ರಿಯಕರನನ್ನು ಕಿಡ್ನಾಪ್ ಮಾಡಿ ದರೋಡೆ ಮಾಡಿರುವ ಘಟನೆ ನಂದಿ ಬೆಟ್ಟದ ಗಿರಿಧಾಮದ ಬಳಿಯಿರುವ ರೆಸಾರ್ಟ್‌ನಲ್ಲಿ ನಡೆದಿದೆ. ಸಾಫ್ಟ್ ವೇರ್ ಇಂಜಿನಿಯರ್ ಯವಕನನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್‌ ಮಾಡಿ  ಹಲ್ಲೆ ಮಾಡಿ ಅವನ ಬಳಿಯಿರುವ ಎಲ್ಲ ಹಣವನ್ನು ದೋಚಿದ್ದಾಳೆ. ಇನ್ನು 3 ದಿನಗಳ ಕಾಲ ರೆಸಾರ್ಟ್ ವೊಂದರಲ್ಲಿ ಕೂಡಿ ಹಾಕಿ ಮನಸ್ಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ಜೊತೆಗೆ ಆತನಿಂದ 2 ಲ್ಯಾಪ್ ಟಾಪ್, 3 ಮೊಬೈಲ್‌ ಮೈಮೇಲಿದ್ದ 12 ಗ್ರಾಂ ಬಂಗಾರದ ಸರ ಸೇರಿದಂತೆ ಒಟ್ಟು 21 ಲಕ್ಷ ರೂಪಾಯಿ ಹಣವನ್ನು ದೋಚಿದ್ದಾರೆ. 

ಗಂಡನ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಫೇಸ್‌ಬುಕ್‌ ಲೈವ್‌ ನಲ್ಲೇ ಆತ್ಮಹತ್ಯೆ

ಸಾಫ್ಟ್‌ವೇರ್‌ಗೆ ಹಾರ್ಡ್‌ವರ್ಕ್‌ ಮಾಡಿದ ಪ್ರಿಯತಮೆ:  ದರೋಡೆ ಮತ್ತು ಹಲ್ಲೆಗೊಳಗಾದ ಯುವಕ ಸಾಫ್ಟವೇರ್ ಇಂಜಿನಿಯರ್ ವಿಜಯಸಿಂಗ್ (32) ಆಗಿದ್ದಾನೆ.  ಮೂಲತಃ ಆಂದ್ರದ ಅನಂತಪುರ ನಿವಾಸಿಯಾಗಿರುವ ವಿಜಯ್ ಸಿಂಗ್, ಬೆಂಗಳೂರಿನ ಖಾಸಗಿ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಇನ್ನು ಬೆಂಗಳೂರಿನಲ್ಲಿ ಪ್ರೀತಿ ಬಲೆಗೆ ಬಿದ್ದಿದ್ದ ಈತನ ಬಳಿ ಹಣ, ಆಸ್ತಿ ಇರುವ ಬಗ್ಗೆ ಖಚಿತ ಮಾಹಿತಿ ತಿಳಿದ ಯುವತಿ, ದೇವಹಳ್ಳಿಗೆ ಕರೆಸಿ ಅಲ್ಲಿಂದ ಕಿಡ್ನಾಪ್‌ ಮಾಡಿಸಿದ್ದಾಳೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ನಂದಿ ಗಿರಿಧಾಮದ ಬಳಿಯಿರುವ ಕ್ಯೂ.ವಿ.ಸಿ ವಿಲ್ಲಾ ರೆಸಾರ್ಟ್‌ಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ.

6 ಜನರಿಂದ ಮೂರು ದಿನ ಮನಸೋ ಇಚ್ಛೆ ಹಲ್ಲೆ: ವಿಜಯಸಿಂಗ್ ಪ್ರಿಯತಮೆ ಭಾವನಾರೆಡ್ಡಿ ಸೇರಿ 6 ಜನರು ಈತನ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲರೂ ಸೇರಿ ಕಿಡ್ನಾಪ್‌ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ. ಹಣ ಕೊಡಲೊಪ್ಪದಿದ್ದಾಗ ಮನಸೋ ಇಚ್ಛೆ ಥಳಿಸಿದ್ದಾರೆ. ಬರೋಬ್ಬರಿ 3 ದಿನ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಿಯತಮೆ ಭಾವನಾರೆಡ್ಡಿ, ಪುಲ್ಲಾರೆಡ್ಡಿ, ಸುಬ್ರಮಣಿ, ನಾಗೇಶರೆಡ್ಡಿ, ಸಿದ್ದೇಶ, ಸುಧೀರ್ ವಿರುದ್ದ ದೂರು ದಾಖಲು ಮಾಡಲಾಗಿದೆ. ಐ.ಪಿ.ಸಿ ಸೆಕ್ಷನ್ -506,341,504,143,149,384,323,324  ರಡಿ ದೂರು ದಾಖಲಿಸಿಕೊಳ್ಳಲಾಗಿದೆ. ಜೂನ್ 16ರಿಂದ 18ರ ವರೆಗೂ ಮೂರು ದಿನಗಳ ಕಾಲ ಚಿತ್ರ ಹಿಂಸೆ ಮಾಡಿದ್ದಾರೆ. ಚಿಕ್ಕಮಗಳೂರು  ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಶರಣರ ನಾಡಲ್ಲಿ ಮರ್ಯಾದಾ ಹತ್ಯೆ: ಹುಡುಗಿ ತಂದೆಯಿಂದಲೇ ಕೆಳಜಾತಿ ಯುವಕನ ಹತ್ಯೆ

ನೀರಿಗೆ ಹಾರಿ ಮೃತಪಟ್ಟ ಕೂಲಿ ಕಾರ್ಮಿಕ ದಂಪತಿ:  ಉಡುಪಿ (ಜೂ.25): ಕೂಲಿಯ ನಿಮಿತ್ತ ಕಾರ್ಕಳಕ್ಕೆ  ವಲಸೆ ಬಂದಿರುವ ಕಾರ್ಮಿಕ ದಂಪತಿ ನೀರುಗುಂಡಿಗೆ ಹಾರಿ ಸಾವನ್ನಪ್ಪಿದ್ದಾರೆ. ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ನಲ್ಲೂರು ನಿವಾಸಿಗಳಾದ ಯಶೋಧ ಮತ್ತು ಇಮ್ಯಾನುಲ್ ಮೃತ ದಂಪತಿ.  ಸಣ್ಣ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿತ್ತು. ಜಗಳದಿಂದ ಮನನೊಂದು ಪತ್ನಿ ಮನೆ ಸಮೀಪದಲ್ಲಿದ್ದ ನೀರು ತುಂಬಿದ್ದ ಗುಂಡಿಗೆ ಹಾರಿದ್ದಳು. ಪತ್ನಿಯನ್ನು ರಕ್ಷಿಸಲು ಪತಿ ಕೂಡ ನೀರಿಗೆ ಧುಮುಕಿದ್ದಾನೆ. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ದಂಪತಿಗಳು ತೋಟದ ಕೆಲಸಕ್ಕೆ ಬಂದು ಕಾರ್ಕಳದಲ್ಲಿ ನೆಲೆಸಿದ್ದರು. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಆಗಿದೆ. 

Follow Us:
Download App:
  • android
  • ios