Asianet Suvarna News Asianet Suvarna News

ಬೆಂಗಳೂರಲ್ಲಿ ಯುವತಿ ಕಾರು ಚೇಸ್ ಮಾಡಿ ಕಿರಿಕ್, ಪುಂಡರ ಭಯಾನಕ ವಿಡಿಯೋ ವೈರಲ್!

ಬೆಂಗಳೂರಿನಲ್ಲಿ ಯುವತಿ ಕಾರನ್ನು ಸ್ಕೂಟರ್‌ನಲ್ಲಿ ತ್ರಿಬಲ್ ರೈಡ್ ಮೂಲಕ ಬಂದ ಪುಂಡರು ಚೇಸ್ ಮಾಡಿ ಕಿರಿಕ್ ಮಾಡಿದ್ದಾರೆ. ಚಲಿಸುತ್ತಿರುವ ಕಾರಿನ ಗಾಜು ಒಡೆಯಲು, ಡೋರ್ ತೆರೆಯಲು ಪ್ರಯತ್ನಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಕಾರು ನಿಲ್ಲಿಸಲು ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
 

Road Rage Video 3 rowdies chase women car try to break Window glass and door in Bengaluru ckm
Author
First Published Apr 1, 2024, 8:47 PM IST

ಬೆಂಗಳೂರು(ಏ.01) ಬೆಂಗಳೂರಿನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪುಂಡರ ಕಿರಿಕ್, ರಂಪಾಟಗಳು ಘಟನೆಗಳು ವರದಿಯಾಗುತ್ತಲೇ ಇದೆ. ಇದೀಗ ಮಹಿಳೆಯೊಬ್ಬರ ಕಾರನ್ನು ಚೇಸ್ ಮಾಡಿದ ಪುಂಡರು ಕಾರು ನಿಲ್ಲಿಸಲು ಪ್ರಯತ್ನಿಸಿ ಹಲ್ಲೆಗೆ ಮುಂದಾಗಿದ್ದಾರೆ. ಸ್ಕೂಟರ್‌ನಲ್ಲಿ ತ್ರಿಬಲ್ ರೈಡಿಂಗ್ ಮೂಲಕ ಚೇಸ್ ಮಾಡಿದ ಪುಂಡರು ಚಲಸುತ್ತಿರು ಕಾರಿನ ಡೋರ್ ತೆಗೆಯಲು ಪ್ರಯ್ನಿಸಿದ್ದಾರೆ. ಕಾರಿನ ಗಾಜು ಒಡೆಯಲು ಪ್ರಯತ್ನಿಸಿದ್ದಾರೆ. ಬಳಿಕ ಕಾರು ಚೇಸ್ ಮಾಡಿ ನಿಲ್ಲಿಸಲು ಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೂವರನ್ನು ಅರೆಸ್ಟ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಮೂವರು ಸ್ಕೂಟರ್ ಮೂಲಕ ಕಾರಿನಲ್ಲಿರುವ ಪ್ರಿಯಾಮ್ ಸಿಂಗ್ ಅನ್ನೋ ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ. ಬೆಂಗಳೂರಿನ ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದೆ. ಮೂವರು ಪುಂಡರು ಪ್ರಿಯಾಮ್ ಸಿಂಗ್‌ಗೆ ಬೆದರಿಕೆ ಹಾಕುತ್ತಲೇ ಸ್ಕೂಟರ್ ಮೂಲಕ ಚೇಸ್ ಮಾಡಿದ್ದಾರೆ. ಮಹಿಳೆ ಕಾರನ್ನು ವೇಗವಾಗಿ ಚಲಾಯಿಸಿದರೂ ಚೇಸ್ ಮಾಡಿದ ಪುಂಡರು ಕಾರಿನ ಎಡಭಾಗದಿಂದ ಬಂದು ಗಾಜು ಒಡೆಯುವ ಪ್ರಯತ್ನ ಮಾಡಿದ್ದಾರೆ.

ಕಮಿಷನರ್ ವಾರ್ನಿಂಗ್‌ಗೂ ಕಿಮ್ಮತ್ತೇ ಇಲ್ವಾ?: ರಸ್ತೆ ಮಧ್ಯೆಯೇ ಗಾಡಿ ನಿಲ್ಸಿ ಪೊಲೀಸರಿಗೆ ಬೈಕ್ ಸವಾರನ ಅವಾಜ್..!

ಬೆಂಗಳೂರಿನ ಸೆಂಟ್ ಜಾನ್ಸನ್ ಆಸ್ಪತ್ರೆ ಗೇಟ್ ನಂಬರ್ 5ರ ಬಳಿ ಈ ಪುಂಡರು ಕಾರನ್ನು ಟಾರ್ಗೆಟ್ ಮಾಡಿದ್ದಾರೆ. ಪುಂಡರು ಕಾರನ್ನು ಹೊಸುರು ರಸ್ತೆ, ಕೊರಮಂಗಲ ಬಲಭಾಗದ ಜಂಕ್ಷನ್, ನಾಗಾರ್ಜುನ ರೆಸ್ಟೋರೆಂಟ್, ಕೆಹೆಚ್‌ಬಿ ಕಾಲೋನಿ, ಕೋರಮಂಗಲ 5ನೇ ಬಡಾವಣೆಯ ಮೂಲಕ ಸತತವಾಗಿ ಹಿಂಬಾಲಿಸಿಕೊಂಡು ಬಂದಿದ್ದಾರೆ. 

ಕಾರು ವೇಗ ಹೆಚ್ಚಿಸುತ್ತಿದ್ದಂತೆ ಮತ್ತೆ ಓವರ್ ಟೇಕ್ ಮಾಡಿ ಕಾರಿನ ಡೋರ್ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಇದರ ನಡುವೆ ಪ್ರಿಯಾಮ್ ಸಿಂಗ್ ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೆರವು ಕೋರುವ ಪ್ರಯತ್ನ ಮಾಡಿದ್ದಾಳೆ. ಆದರೆ ಪುಂಡರು ಕಾರನ್ನು ಚೇಸ್ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಆಗಮಿಸಿದ್ದಾರೆ. ಕಾರನ್ನು ಓವರ್ ಟೇಕ್ ಮಾಡಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ.

 

 

ಇದೇ ವೇಳೆ ಮಹಿಳೆ ದಿಡೀರ್ ಎಡಭಾಗದ ರಸ್ತೆಗೆ ಕಾರು ತಿರುಗಿಸಿ ಚಲಿಸಿದ್ದಾರೆ. ಇತ್ತ ಪುಂಡರು ಮತ್ತೆ ಫಾಲೋ ಮಾಡಿ ಕಿರಿಕ್ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಇತ್ತ ಕರ್ನಾಟಕ ಬಿಜೆಪಿ ಈ ವಿಡಿಯೋ ಹಂಚಿಕೊಂಡು ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ. ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡುತ್ತಿರುವ  ಕಾಂಗ್ರೆಸ್ ಸರ್ಕಾರ,  ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿ ಗೂಂಡಾಗಳ ಕೈಗೆ ಅಧಿಕಾರ ಕೊಟ್ಟಿದೆ ಎಂದು ಆರೋಪಿಸಿದೆ.

ರಸ್ತೆಯಲ್ಲಿ ಕಿರಿಕ್ ಮಾಡೋರ ವಿರುದ್ಧ ರೌಡಿಶೀಟ್ ಓಪನ್ ಮಾಡುವಂತೆ ಬೆಂಗಳೂರು ಕಮಿಷನರ್ ಸೂಚನೆ

ಈ ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ಈ ರೀತಿ ಕಿರಿಕ್ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದೆ. ಯಾವುದೇ ಕಾರಣಕ್ಕೂ ರೋಡ್ ರೇಜ್ ಘಟನೆಗಳನ್ನು ಸಹಿಸುವುದಿಲ್ಲ ಎಂದು ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
 

Follow Us:
Download App:
  • android
  • ios