ಕಮಿಷನರ್ ವಾರ್ನಿಂಗ್‌ಗೂ ಕಿಮ್ಮತ್ತೇ ಇಲ್ವಾ?: ರಸ್ತೆ ಮಧ್ಯೆಯೇ ಗಾಡಿ ನಿಲ್ಸಿ ಪೊಲೀಸರಿಗೆ ಬೈಕ್ ಸವಾರನ ಅವಾಜ್..!

ಹೆಚ್ ಎಎಲ್ ಫ್ಲೈ ಓವರ್ ಬಳಿ ಕಾರಿನಲ್ಲಿ ಹೋಗ್ತಿದ್ದ ವ್ಯಕ್ತಿಯನ್ನ ಅಡ್ಡ ಹಾಕಿ ಕಿರಿಕಿರಿ ಮಾಡಿದ್ದ ಪುಂಡನೊಬ್ಬ ರಸ್ತೆ ಮಧ್ಯೆಯೇ ಬೈಕ್ ಅಡ್ಡ ಹಾಕಿ ಅಚಾಜ್ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Not Yet Reduce Road Rage Cases in Bengaluru grg

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು 

ಬೆಂಗಳೂರು(ಆ.31): ರಕ್ಷಣೆ ಮಾಡೋ ಪೊಲೀಸರಂದ್ರೆ ಒಂದು ಭಯ ಇರುತ್ತೆ.. ಕಮಿಷನರ್ ಅಂದ್ರೆ ಕೇಳ್ಬೇಕ.. ಒಂದು ಸಾರಿ ಆರ್ಡರ್ ಮಾಡಿದ್ರೆ ನೂರು ಸಾರಿ ಹೇಳ್ದಂಗೆ.. ರೋಡ್ ರೇಜ್ ಮಾಡೋರಿಗೆ ಸೋಷಿಯಲ್ ಮೀಡಿಯಾ ಮೂಲಕವೇ ಓಪನ್‌ ಆಗಿ ಖಡಕ್ ವಾರ್ನಿಂಗ್ ನೀಡಿದ್ದ ನಗರ ಪೊಲೀಸ್ ಆಯುಕ್ತರು ಅವ್ರ ವಿರುದ್ಧ ರೌಡಿಶೀಟ್ ಓಪನ್ ಮಾಡೋ ಎಚ್ಚರಿಕೆ ನೀಡಿದ್ರು.. ಆದ್ರೂ ಕೆಲವರು ಬಗ್ತಿಲ್ಲ.. ದಿನಕ್ಕೆ ಸಿಟೀಲಿ ನಾಲ್ಕೈದಾದ್ರು ರೋಡ್ ರೇಜ್ ಕೇಸ್ ಗಳು ರಿಪೋರ್ಟ್ ಆಗ್ತಿವೆ.. 

ಒಬ್ಬ ಪೊಲೀಸ್ ಕಮಿಷನರ್ ವಾರ್ನ್ ಅಂದ್ರೆ ಸಣ್ಣ ಸಣ್ಣ ಪುಂಡ ಪೋಕರಿಗಳಿಂದ ಹಿಡ್ದು ದೊಡ್ಡ ದೊಡ್ಡ ರೌಡಿ, ಡಾನ್ ಗಳಿಗೂ ನಡುಕ ಹುಟ್ಟುತ್ತೆ.. ಮತ್ತೊಮ್ಮೆ ಕೃತ್ಯ ಎಸಗೋಕು ಯೋಚನೆ ಮಾಡುವಂತಿರುತ್ತೆ.. ಆದ್ರೆ ಸದ್ಯ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ವಾರ್ನಿಂನ್‌ಗೆ ಕಿಮ್ಮತ್ತೇ ಇಲ್ವಾ..! ಪೊಲೀಸರಂದ್ರೆ ಕೆಲವರಿಗೆ ಭಯ ನೇ ಬರ್ತಿಲ್ವಾ ಅನ್ನೋ ಡೌಟ್ ಬರೋಹಾಗಿದೆ. ಕಮಿಷನರ್ ಖಡಕ್ ವಾರ್ನ್ ಮಾಡಿ ತಿಂಗಳಾಗ್ತಿದ್ರು ರೋಡ್ ರೇಜ್ ಕೇಸ್ ಗಳಿಗೆ ಮಾತ್ರ ಬ್ರೇಕ್ ಹೇ ಬೀಳ್ತಿಲ್ಲ.. ನಗರದ ಮುಖ್ಯ ರಸ್ತೆಗಳಲ್ಲೇ ಕಾರು ಅಡ್ಡ ಹಾಕೋದು, ಕಾರುಗಳನ್ನ ಫಾಲೋ ಮಾಡಿ ಹಲ್ಲೆ ಮಾಡೋದು, ಗ್ಲಾಸ್ ಹೊಡೆದಾಕಿರೋ ಕೇಸ್ ಗಳು ಬ್ಯಾಕ್ ಟು ಬ್ಯಾಕ್ ರಿಪೋರ್ಟ್ ಆಗ್ತಿವೆ.. ಸೋಷಿಯಲ್ ಮೀಡಿಯಾದಲ್ಲೇ ಪೊಲೀಸರನ್ನ ಟ್ಯಾಗ್ ಮಾಡ್ತಿರೋ ಸಾರ್ವಜನಿಕರು ಸಾಲು ಸಾಲು ದೂರು ನೀಡ್ತಿದ್ದಾರೆ.

ಬೆಳಗಾವಿ: ಕಳ್ಳರೆಂದು ಭಾವಿಸಿ ಅಮಾಯಕ ಯುವಕರನ್ನು ಮನಬಂದಂತೆ ಥಳಿಸಿದ ಗ್ರಾಮಸ್ಥರು!

ನಗರದಲ್ಲಿ ದಿನೇ ದಿನೆ ರೋಡ್ ರೇಜ್ ಕೇಸ್ ಗಳು ಹೆಚ್ಚಾಗ್ತಾನೆ ಇವೆ.. ಗಾಡಿ ಟಚ್ ಆಯ್ತು ಅಂತಾ ಕಿರಿಕ್ ಮಾಡೋದು, ರಾತ್ರೋ ರಾತ್ರಿ ಕುಡಿದ ಮತ್ತಿನಲ್ಲಿ ಅಕರು ಅಡ್ಡ ಹಾಕಿ ಸುಲಿಗೆ ಮಾಡೋದು, ಕಾರು ಗ್ಲಾಸ್ ಹೊಡೆದು ಪುಂಡಾಟ ಮೆರೆಯೋವಂತಹ ಕೇಸ್ ಗಳು ವರದಿಯಾಗ್ತಿವೆ.

ಈ ಬೆನ್ನಲ್ಲೇ ಕಳೆದ ಹದಿಮೂರನೇ ತಾರೀಖು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಈ ರೀತಿ ಕೃತ್ಯ ಎಸಗೋರಿಗೆ ಖಡಕ್ ವಾರ್ನ್ ಮಾಡಿದ್ರು.. ಟ್ವಿಟ್ಟರ್ ನಲ್ಲಿ ಈ ರೀತಿ ಕೃತ್ಯ ಎಸಗೋರ ವಿರುದ್ದ ಇನ್ಮುಂದೆ ರೌಡಿಶೀಟಗ ಓಪನ್ ಮಾಡಲಾಗುತ್ತೆ ಅಂತಾ ಹೇಳಿದ್ರು.. ಟ್ವಿಟ್ಟರ್ ಮೂಲಕವೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೂ ಸೂಚನೆ ನೀಡಿದ್ರು.. ಆದ್ರೆ ಕಮಿಷನರ್ ರ ಈ ವಾರ್ನಿಂಗ್ ಗೆ ಕೆಲ ಪುಂಡ ಪೋಕರಿಗಳಿಗೆ ಭಯವೇ ಬಂದಿಲ್ಲ.. ಅವ್ರು ಟ್ವೀಟ್ ಮಾಡಿದ್ದ 24ಗಂಟೆಯಲ್ಲೇ ರೋಡ್ ರೇಜ್ ಕೇಸ್ ವರದಿಯಾಗಿತ್ತು.. ಅದಾದ್ಮೇಲೂ ದಿನಕ್ಕೆ ಮೂರ್ನಾಲ್ಕು ಕೇಸ್ ಗಳು ವರದಿಯಾಗ್ತಿವೆ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸರನ್ನ ಟ್ಯಾಗ್ ಮಾಡಿ ಜನ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಪೊಲೀಸ್ ಇಲಾಖೆ ಸೇರಿದ ಮುದ್ದಿನ ನಾಯಿ ಮರಿ, ಹೆಸರು ಸೂಚಿಸಲು ಸಾರ್ವಜನಿಕರಲ್ಲಿ ಮನವಿ!

ಇತ್ತೀಚೆಗೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಯುವ ವಿಜ್ಞಾನಿ ಕಾರು ಫಾಲೋ ಮಾಡಿದ್ದ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ರು, ಅಲ್ದೇ ಆತನ ಕಾರು ಗ್ಲಾಸ್ ಹೊಡೆದಾಕಿ ಎಸ್ಕೇಪ್ ಆಗಿದ್ರು.. ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಯುವ ವಿಜ್ಞಾನಿ ಈ ಬಗ್ಗೆ ಕಂಪ್ಲೆಂಟ್ ಕೊಟ್ರೂ ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ ಅಂತಾ ಟ್ವಿಟ್ಟರ್ ನಲ್ಲಿ ಕಿಡಿ ಕಾರಿದ್ರು.. ನಿನ್ನೆ ಕೂಡ ಹಾಡು ಹಗಲೇ ಮತ್ತೊಂದು ಕೇಸ್ ವರದಿಯಾಗಿದೆ.. ಹೆಚ್ ಎಎಲ್ ಫ್ಲೈ ಓವರ್ ಬಳಿ ಕಾರಿನಲ್ಲಿ ಹೋಗ್ತಿದ್ದ ವ್ಯಕ್ತಿಯನ್ನ ಅಡ್ಡ ಹಾಕಿ ಕಿರಿಕಿರಿ ಮಾಡಿದ್ದ ಪುಂಡನೊಬ್ಬ ರಸ್ತೆ ಮಧ್ಯೆಯೇ ಬೈಕ್ ಅಡ್ಡ ಹಾಕಿ ಅಚಾಜ್ ಹಾಕಿದ್ದಾನೆ.. ಅದನ್ನ ವಿಡಿಯೋ ಸಮೇತ ಕಾರು ಚಾಲಕ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದಾರೆ.

ಈ ರೀತಿ ಕೇಸ್ ಗಳು ನಡೀತಾನೆ ಇವೆ.. ಕೆಲ್ವೊಂದು ರೆಕಾರ್ಡ್ ಆಗಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಆಗಿ ಬೆಳಕಿಗೆ ಬರ್ತಿವೆ.. ಇನ್ನು ಕೆಲವು ಆಗ್ತಿಲ್ಲ.. ಟ್ವಿಟ್ಟರ್ ನಲ್ಲಿ ವೈರಲ್ ಆದ್ರೂ, ಕಮಿಷನರ್ ನೇರ ವಾರ್ನ್ ಮಾಡಿದ್ರೂ ನಿಲ್ತಿಲ್ಲ ಅಂದ್ರೆ ಪೊಲೀಸರ ಭಯ ಪುಂಡಾಟಿಕೆ, ರೌಡಿ ಚಟುವಟಿಕೆ ನಡೆಸೋರಲ್ಲಿ ಎಷ್ಟಿದೆ ಅಂತಾ ನಾವೇನು ಹೇಳ್ಬೇಕಾಗಿಲ್ಲ.. ಇನ್ಮೇಲಾದ್ರೂ ಪೊಲೀಸಿಂಗ್ ಬಗ್ಗೆ ಭಯ ಇರೋ ರೀತಿ ಪೊಲೀಸರು ಕೆಲಸ ಮಾಡ್ಬೇಕಿದೆ.

Latest Videos
Follow Us:
Download App:
  • android
  • ios