Asianet Suvarna News Asianet Suvarna News

ಇಟ್ಟಿಗೆ ಟ್ರ್ಯಾಕ್ಟರ್‌ಗೆ ರಾಜಹಂಸ ಬಸ್ ಡಿಕ್ಕಿ; ಮದುವೆ ಮುಗಿಸಿ ಮನೆಗೆ ತೆರಳಬೇಕಿದ್ದವರು ಆಸ್ಪತ್ರೆ!

ರಾಜಹಂಸ ಬಸ್ ಡಿಕ್ಕಿ; ಮದುವೆ ಮುಗಿಸಿ ಮನೆಗೆ ತೆರಳಬೇಕಿದ್ದವರು ಆಸ್ಪತ್ರೆಗೆ ದಾಖಲು ಚಿತ್ರದುರ್ಗ (ಫೆ.2): ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ರಾಜಹಂಸ ಬಸ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಪಲ್ಟಿ ಹೊಡೆದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ರ ಬಳಿ ನಡೆದಿದೆ.

Road accident Rajahansa bus collided with a brick tractor at chitradurga rav
Author
First Published Feb 2, 2024, 9:41 AM IST

ಚಿತ್ರದುರ್ಗ (ಫೆ.3) ಇಟ್ಟಿಗೆ ಟ್ರ್ಯಾಕ್ಟರ್‌ಗೆ ರಾಜಹಂಸ ಬಸ್ ಡಿಕ್ಕಿ; ಮದುವೆ ಮುಗಿಸಿ ಮನೆಗೆ ತೆರಳಬೇಕಿದ್ದವರು ಆಸ್ಪತ್ರೆಗೆ ದಾಖಲು ಚಿತ್ರದುರ್ಗ (ಫೆ.2): ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ರಾಜಹಂಸ ಬಸ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಪಲ್ಟಿ ಹೊಡೆದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ರ ಬಳಿ ನಡೆದಿದೆ.

ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮದುವೆ ಮುಗಿಸಿಕೊಂಡು ಕಲಬುರಗಿಯಿಂದ ಮಾಗಡಿಗೆ ತೆರಳುತ್ತಿದ್ದ ರಾಜಹಂಸ ಬಸ್. ಈ ವೇಳೆ ಎದುರಗಡೆಯಿಂದ ಬಂದಿರುವ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ಬಸ್ಸಿನ ಡಿಕ್ಕಿ ರಭಸಕ್ಕೆ ಚೆಲ್ಲಾಪಿಲ್ಲಿ ಬಿದ್ದಿರುವ ಇಟ್ಟಿಗೆಗಳು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ಅಪಘಾತಕ್ಕೆ ಪರಿಹಾರ ಕೊಡೋದು ವಿಮಾ ಕಂಪನಿಯದ್ದೇ ಹೊಣೆ: ಹೈಕೋರ್ಟ್

ವಿದ್ಯುತ್ ತಂತಿ ಸ್ಪರ್ಶ, ಹಸು ಸಾವು

ಪಾವಗಡ: ವಿದ್ಯುತ್ ತಂತಿಯ ಸ್ಪರ್ಶದಿಂದ ಸುಮಾರು 60ಸಾವಿರ ಬೆಲೆ ಬಾಳುವ ಹಸು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ನಾಗೇನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ನಾಗೇನಹಳ್ಳಿ ಗ್ರಾಮದ ವಾಸಿ ಲಿಂಗಮೂರ್ತಿ ಎಂಬ ರೈತ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದು, ಬೆಳಿಗ್ಗೆ 5.30ರಲ್ಲಿ ಕಂಬದಿಂದ ಹಾಯಿಸಿದ ತಂತಿಯಿಂದ ವಿದ್ಯುತ್‌ ಸ್ಪರ್ಶಿಸಿ 60ಸಾವಿರ ಮೌಲ್ಯದ ಹಸು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ವಿಷಯ ತಿಳಿಯುತ್ತಿದಂತೆ ತಾಲೂಕು ಪಶು ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕ ಹೊಸಕೆರಪ್ಪ ವರದಿ ಪಡೆದಿದ್ದು ಘಟನೆ ಕುರಿತು ಪದೇ ಪದೇ ಕಾಲ್‌ ಮಾಡಿದರೂ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ, ಬೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಜಗಳ, ಕೊಲೆಯಲ್ಲಿ ಅಂತ್ಯ!

Follow Us:
Download App:
  • android
  • ios