ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಯ್ಯಪ್ಪ ನಗರದ ನಿವಾಸಿ ದರ್ಶನ್ (41) ಕೊಲೆಯಾದ ದುರ್ದೈವಿ

ಬೆಂಗಳೂರು (ಫೆ.2): ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಯ್ಯಪ್ಪ ನಗರದ ನಿವಾಸಿ ದರ್ಶನ್ (41) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತನ ಪರಿಚಿತರಾದ ಮಧುಸೂದನ್‌, ನರೇಶ್ ಹಾಗೂ ತ್ಯಾಗರಾಜ್‌ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಹಗಲು ಕನಸಿನ ಕೆರೆ ಸಮೀಪದ ದೀಪಾ ಆಸ್ಪತ್ರೆ ಮುಂಭಾಗ ದರ್ಶನ್ ಹಾಗೂ ಆರೋಪಿಗಳ ನಡುವೆ ಜಗಳವಾಗಿದೆ. ಆಗ ಮೃತನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾತ್ ರೂಂನಲ್ಲಿ ನಗ್ನಸ್ಥಿತಿಯಲ್ಲಿ ಸಾಫ್ಟ್‌ವೇರ್ ಇಂಜಿನೀಯರ್ ಸಾವು; ಇದು ಸಾವಲ್ಲ, ಕೊಲೆ ಎಂದ ಕುಟುಂಬಸ್ಥರು!

ಕೆಲಸವಿಲ್ಲದೆ ಅಲೆಯುತ್ತಿದ್ದ ದರ್ಶನ್‌, ಬುಧವಾರ ರಾತ್ರಿ ಮದ್ಯ ಸೇವಿಸಿ ಗೆಳೆಯ ಅನಿಲ್ ಜತೆ ತೆರಳುತ್ತಿದ್ದ. ಆ ವೇಳೆ ದೀಪಾ ಆಸ್ಪತ್ರೆ ಸಮೀಪ ಅವರಿಗೆ ಮಧುಸೂದನ್ ಹಾಗೂ ಆತನ ಸ್ನೇಹಿತರು ಎದುರಾಗಿದ್ದಾರೆ. ಆಗ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ಶುರುವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ. ಈ ಹಂತದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಆಗ ಕೆರಳಿದ ಆರೋಪಿಗಳು, ದರ್ಶನ್‌ಗೆ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.