ತಾಯಿ ಜೊತೆಗೆ ಮೊಬೈಲ್ ಅಂಗಡಿಗೆ ಬಂದಿದ್ದ ಪುಟ್ಟ ಕಂದನ ಮೇಲೆ ಲಾರಿ ಹರಿದ ಪರಿಣಾಮ ಮಗುವಿನ ದೇಹ ಛಿದ್ರವಾಗಿ ದಾರುಣವಾಗಿ ಮೃತಪಟ್ಟ ಘಟನೆ ನಗರದ ರಾಮೋಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರು (ಏ.21): ತಾಯಿ ಜೊತೆಗೆ ಮೊಬೈಲ್ ಅಂಗಡಿಗೆ ಬಂದಿದ್ದ ಪುಟ್ಟ ಕಂದನ ಮೇಲೆ ಲಾರಿ ಹರಿದ ಪರಿಣಾಮ ಮಗುವಿನ ದೇಹ ಛಿದ್ರವಾಗಿ ದಾರುಣವಾಗಿ ಮೃತಪಟ್ಟ ಘಟನೆ ನಗರದ ರಾಮೋಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಜೆ 5.30ರ ಸುಮಾರಿಗೆ ನಡೆದಿರುವ ಘಟನೆ. ಅಪಘಾತದಲ್ಲಿ ಆಯುಷ್ಯ್(4) ಮೃತ ಮಗು. ಲಾರಿ ಹರಿದ ರಭಸಕ್ಕೆ ಸ್ಥಳದಲ್ಲೇ ದುರ್ಮರಣ. ಉತ್ತರ ಭಾರತದಿಂದ ರಾಮೋಹಳ್ಳಿಗೆ ಬಂದು ಪೇಂಟಿಂಗ್ ಕೆಲಸ ಮಾಡುತ್ತಿರುವ ಅಮರ್ ಹಾಗೂ ಪೂಜಾ ದಂಪತಿಗಳಿಗೆ ಸೇರಿದ ಮಗು. ದಂಪತಿಗೆ ಅವಳಿ-ಜವಳಿ ಮಕ್ಕಳು. ಇಬ್ಬರು ಮಕ್ಕಳಲ್ಲಿ ಒಂದು ಮಗು ತಾಯಿಯೊಂದಿಗೆ ಅಂಗಡಿಯಲ್ಲಿತ್ತು. ಆದರೆ ಇನ್ನೊಂದು ಮಗು ಆಯ್ಯುಷ್ ತಾಯಿ ಕೈ ಬಿಡಿಸಿಕೊಂಡು ರಸ್ತೆಗೆ ಓಡಿದ್ದಾನೆ. ಈ ವೇಳೆ ಬಸ್ ನ್ನು ಓವರ್ ಟೆಕ್ ಮಾಡಲು ಹೋಗಿ ವೇಗವಾಗಿ ಬಂದ ಟಿಪ್ಪರ್ ಲಾರಿ ಚಾಲಕ ಮಗು ಮೇಲೆ ಲಾರಿ ಹತ್ತಿಸಿದ್ದಾನೆ. ತಾಯಿ ಕಣ್ಮುಂದೆ ಮಗು ಧಾರುಣವಾಗಿ ಸಾವು. ಕಂದನ ಸಾವು ಕಂಡು ಪೋಷಕರ ಅಕ್ರಂದನ ಮುಗಿಲುಮುಟ್ಟಿದೆ.

ಇತ್ತ ರೊಚ್ಚಿಗೆದ್ದ ಸ್ಥಳೀಯರು ಟಿಪ್ಪರ್ ಲಾರಿ ಗ್ಲಾಸ್ ಪುಡಿ ಪುಡಿ ಮಾಡಿ ಲಾರಿ ಚಾಲಕನಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪೋಷಕರು.

ಬಸ್ ಡ್ಯಾಶ್‌ಬೋರ್ಡ್ ಮೇಲೆ ಡ್ರೈವರ್ ಫ್ಯಾಮಿಲಿ ಫೋಟೋ ಕಡ್ಡಾಯ, ಸಾರಿಗೆ ಇಲಾಖೆ ಹೊಸ ಪ್ಲಾನ್!