Asianet Suvarna News Asianet Suvarna News

ಆಯಾತಪ್ಪಿ ರಸ್ತೆಗೆ ಬಿದ್ದವನ ಮೇಲೆ ಹರಿದ ಬಸ್; ವಾಹನ ಸವಾರ ಸ್ಥಳದಲ್ಲೇ ಸಾವು!

ಬೈಕ್‌ನಲ್ಲಿ ಹೋಗುವಾಗ ಆಯ ತಪ್ಪಿ ರಸ್ತೆಗೆ ಬಿದ್ದಾಗ ಖಾಸಗಿ ಬಸ್ ಹರಿದು ಪೇಂಟರ್‌ವೊಬ್ಬರು ಸಾವನ್ನಪ್ಪಿರುವ ಘಟನೆ ನಾಗರಬಾವಿ ಹೊರ ವರ್ತುಲ ರಸ್ತೆಯಲ್ಲಿ ನಡೆದಿದೆ. ಹೆಗ್ಗನಹಳ್ಳಿ ನಿವಾಸಿ ಮುರಳಿ (40) ಮೃತ ದುರ್ದೈವಿ

Road accidennt  motorist died on the spot at bengaluru rav
Author
First Published Feb 25, 2024, 7:46 AM IST

ಬೆಂಗಳೂರು (ಫೆ.25): ಬೈಕ್‌ನಲ್ಲಿ ಹೋಗುವಾಗ ಆಯ ತಪ್ಪಿ ರಸ್ತೆಗೆ ಬಿದ್ದಾಗ ಖಾಸಗಿ ಬಸ್ ಹರಿದು ಪೇಂಟರ್‌ವೊಬ್ಬರು ಸಾವನ್ನಪ್ಪಿರುವ ಘಟನೆ ನಾಗರಬಾವಿ ಹೊರ ವರ್ತುಲ ರಸ್ತೆಯಲ್ಲಿ ನಡೆದಿದೆ.

ಹೆಗ್ಗನಹಳ್ಳಿ ನಿವಾಸಿ ಮುರಳಿ (40) ಮೃತ ದುರ್ದೈವಿ. ಈ ಘಟನೆಯಲ್ಲಿ ಮೃತನ ಸ್ನೇಹಿತ ರಾಜು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಸಂಬಂಧ ಖಾಸಗಿ ಬಸ್ ಚಾಲಕನನ್ನು ಜ್ಞಾನಭಾರತಿ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಗೆಳೆಯನ ಜತೆ ರಾಜರಾಜೇಶ್ವರಿ ನಗರ ಸಮೀಪದ ವೀರಭದ್ರೇಶ್ವರ ನಗರದಿಂದ ಮನೆಗೆ ಬೈಕ್‌ನಲ್ಲಿ ಮುರಳಿ ಮರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತನ್ನ ಕುಟುಂಬದ ಜತೆ ನೆಲೆಸಿದ್ದ ಮುರಳಿ, ಪೇಂಟರ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ವೀರಭದ್ರೇಶ್ವರ ನಗರದಲ್ಲಿ ಶುಕ್ರವಾರ ಸಂಜೆ ಮದ್ಯ ಸೇವಿಸಿ ನಾಗರಬಾವಿ ಹೊರವರ್ತುಲ ರಸ್ತೆ ಮೂಲಕ ಮುರಳಿ ಮನೆಗೆ ಮರಳುತ್ತಿದ್ದರು. ಆಗ ನಮ್ಮೂರು ಆಹಾರ ಹೋಟೆಲ್‌ ಸಮೀಪ ಮೇಲ್ಸೇತುವೆಯಲ್ಲಿ ಆಯತಪ್ಪಿ ಬೈಕ್‌ನಿಂದ ಮುರಳಿ ಕೆಳಕ್ಕೆ ಬಿದ್ದಿದ್ದಾರೆ. ಅದೇ ವೇಳೆ ಪ್ರವಾಸಿಗರನ್ನು ಕೆಂಪೇಗೌಡ ಅಂತಾರಾಷ್ಚ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ದುತ್ತಿದ್ದ ಬಸ್‌, ಬೈಕ್‌ನಿಂದ ಕೆಳಗೆ ಬಿದ್ದ ಮುರಳಿ ಮೇಲೆ ಹರಿದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios