ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣ ಸಂಬಂಧಿಸಿ ಸಿಬಿಐ ಸಲ್ಲಿಸಿರುವ 'ಬಿ' ರಿಪೋರ್ಟ್ ವಿರುದ್ಧ ಪರೇಶ್ ತಂದೆ ಕಮಲಾಕರ ಮೇಸ್ತಾ ಇದೀಗ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಮಲಾಕರ ಮೇಸ್ತಾ ಪರ ವಕೀಲ ನಾಗರಾಜ ನಾಯಕ್ ನ್ಯಾಯಾಲಯಕ್ಕೆ ಹಾಜರಾಗಿ 'ಬಿ' ರಿಪೋರ್ಟ್ ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲು ಮನವಿ ಮಾಡಿಕೊಂಡಿದ್ದಾರೆ. 

ಉತ್ತರಕನ್ನಡ (ನ.16) ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣ ಸಂಬಂಧಿಸಿ ಸಿಬಿಐ ಸಲ್ಲಿಸಿರುವ 'ಬಿ' ರಿಪೋರ್ಟ್ ವಿರುದ್ಧ ಪರೇಶ್ ತಂದೆ ಕಮಲಾಕರ ಮೇಸ್ತಾ ಇದೀಗ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಮಲಾಕರ ಮೇಸ್ತಾ ಪರ ವಕೀಲ ನಾಗರಾಜ ನಾಯಕ್ ನ್ಯಾಯಾಲಯಕ್ಕೆ ಹಾಜರಾಗಿ 'ಬಿ' ರಿಪೋರ್ಟ್ ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲು ಮನವಿ ಮಾಡಿಕೊಂಡಿದ್ದಾರೆ.

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದಿದ್ದ ಕೋಮು ಗಲಭೆಯ (Communal riots) ವೇಳೆ ನಾಪತ್ತೆಯಾಗಿದ್ದ ಪರೇಶ್ ಮೇಸ್ತಾ (Paresh Mesta) ಡಿ.8ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಅಂದಿನ ಸಿದ್ಧರಾಮಯ್ಯ (Siddaramaiah) ಸರಕಾರ ಪ್ರಕರಣವನ್ನು ಸಿಒಡಿಗೆ ನೀಡಬೇಕೆಂದಿದ್ದರೂ, ವಿರೋಧ ಪಕ್ಷ ಹಾಗೂ ಜನರ ಒತ್ತಾಯದ ಮೇರೆಗೆ ಸಿಬಿಐಗೆ (CBI) ಹಸ್ತಾಂತರಿಸಲಾಗಿತ್ತು. ಮೃತಪಟ್ಟಿದ್ದ ಪರೇಶ್ ಮೇಸ್ತಾನದ್ದು ಸಹಜ ಸಾವು ಎಂದು ಸಿಬಿಐ ನಾಲ್ಕು ವರ್ಷಗಳ ಬಳಿಕ ಹೊನ್ನಾವರ (Honnavara) ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ('B' Report) ಸಲ್ಲಿಸಿತ್ತು. ಆದರೆ, ಇದು ಸಹಜ ಸಾವಲ್ಲ, ಕೊಲೆ ಎಂದು ಪರೇಶ್ ಮೇಸ್ತಾ ಕುಟುಂಬ ಹಾಗೂ ಬಿಜೆಪಿಯವರು ವಾದಿಸಿದ್ದರು. ಇದಾದ ನಂತರ ಪ್ರಕರಣ ರಾಜಕೀಯವಾಗಿ ಮತ್ತೆ ತಿರುವು ಪಡೆದಿತ್ತು.

ಪರೇಶ್ ಮೇಸ್ತಾ ಕೇಸ್‌: ಸಿಬಿಐ 'ಬಿ' ರಿಪೋರ್ಟ್ ಹಾಕಿರೋದು ತಪ್ಪು, ಮುತಾಲಿಕ್ ಆಕ್ರೋಶ

ಕೊಲೆಯನ್ನು ಸಹಜ ಸಾವೆಂದು ತೋರಿಸುವ ಯತ್ನ: ಇಂದು ಹೊನ್ನಾವರದ ಜೆ.ಎಂ.ಎಫ್. ಸಿ. ನ್ಯಾಯಾಲಯಕ್ಕೆ ಹಾಜರಾದ ಕಮಲಾಕರ ಮೇಸ್ತಾ (Kamalakara mesta) ಹಾಗೂ ವಕೀಲ ನಾಗರಾಜ ನಾಯಕ್ (Lawyer Nagaraja Nayak) ಅವರು ನ್ಯಾಯಾಧೀಶರ ಮುಂದೆ ಸಿಬಿಐನ 'ಬಿ' ರಿಪೋರ್ಟ್ ವಿರುದ್ಧ ತಕರಾರು (Disputes) ಸಲ್ಲಿಸಲು ಅವಕಾಶ ನೀಡಲು ಕೋರಿದ್ದಾರೆ. ಈ ಪ್ರಕರಣವನ್ನು ಡಿ.21ಕ್ಕೆ ಮುಂದೂಡಲಾಗಿದ್ದು, ಅಂದು ಆಕ್ಷೇಪಣಾ (Objection) ಅರ್ಜಿ ಸಲ್ಲಿಸುವುದಾಗಿ ವಕೀಲ ನಾಗರಾಜ ನಾಯಕ್ ಮಾಹಿತಿ ನೀಡಿದ್ದಾರೆ. ಈ ಸಿದ್ಧರಾಮಯ್ಯ ಸರಕಾರ ಪ್ರಕರಣವನ್ನು ಸಹಜ ಸಾವು ತೋರಿಸಲು ನಾನಾ ಪ್ರಯತ್ನ ಮಾಡಿದೆ. ಈ ಪ್ರಕರಣವನ್ನು ಹಳ್ಳ ಹಿಡಿಸಲು ಎಷ್ಟು ಸಾಧ್ಯವೋ ಅಷ್ಟು ಹಳ್ಳ ಹಿಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಪ್ರಕರಣಕ್ಕೆ ಡ್ಯಾಮೇಜ್‌ ಮಾಡಲಾಗಿದೆ:

ಪರೇಶ್ ಮೇಸ್ತಾ ಪ್ರಕರಣಕ್ಕೆ "ಬಿ" ರಿಪೋರ್ಟ್ ಹಿನ್ನೆಲೆ, ಬಿಜೆಪಿ ವಿರುದ್ಧ ಫೀಲ್ಡಿಗಿಳಿದ ಕಾಂಗ್ರೆಸ್ ಮುಖಂಡರು

ಮುಂದಿನ ದಿನಗಳಲ್ಲಿ ಪ್ರಕರಣ 'ಬಿ' ರಿಪೋರ್ಟ್ ಕಾಣಬೇಕೆಂದು ಸಿಬಿಐ ವಹಿಸುವ ಮೊದಲೇ ಸಾಕಷ್ಟು ಹಾನಿಯನ್ನು (Damage) ಮಾಡಲಾಗಿದೆ ಎಂಬುದು ಪ್ರಾಥಮಿಕ ನೋಟದಿಂದ (Primary View)ಈ ವಿಚಾರಗಳು ಕಂಡು ಬಂದಿವೆ. ಪ್ರಕರಣ ಸಂಬಂಧಿಸಿ ಭವಿಷ್ಯದಲ್ಲಿ ನ್ಯಾಯ ದೊರೆಯಲಿದೆ ಎಂಬ ಭರವಸೆಯಿದೆ ಎಂದು ವಕೀಲ ನಾಗರಾಜ ನಾಯಕ್ ಹೇಳಿದ್ದಾರೆ. ಇನ್ನು ಪ್ರಕರಣ (Case) ಸಂಬಂಧಿಸಿ ಬಿಜೆಪಿ ಮುಖಂಡರು ಕೂಡಾ ಧನಿಗೂಡಿಸಿದ್ದು, ಕಮಲಾಕರ ಮೇಸ್ತಾ ಕುಟುಂಬ ಪರ ನ್ಯಾಯ ದೊರೆಯುವ ಆಶಯ ವ್ಯಕ್ತಪಡಿಸಿದ್ದಾರೆ.