ಹುಬ್ಬಳ್ಳಿ(ಅ.24): ನಿವೃತ್ತ ಪ್ರೊಫೆಸರ್‌ವೊಬ್ಬರನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂದು(ಶನಿವಾರ) ಲಿಂಗರಾಜ ನಗರದಲ್ಲಿ ನಡೆದಿದೆ. ಶಂಕ್ರಪ್ಪ ಮುಶನ್ನವರ ಎಂಬುವವರೇ ಕೊಲೆಯಾದ ದುರ್ದೈವಿಯಾಗಿದ್ದಾರೆ. 

ಕೊಲೆಯಾದ ಶಂಕ್ರಪ್ಪ ಮುಶನ್ನವರ ಅವರು ಗದಗ ನಗರದ ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ಅಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಳಿಯನೇ ಮಾವನನ್ನ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಮಂಗಳೂರು; ತಲ್ವಾರ್‌ ನಿಂದ ಕೊಚ್ಚಿ ರೌಡಿ ಶೀಟರ್ ಹತ್ಯೆ

ಶಂಕ್ರಪ್ಪ ಮುಶನ್ನವರ ಇತ್ತೀಚೆಗಷ್ಟೇ ನಿವೃತ್ತಿ ಪಡೆದು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಇಂದು ಬೆಳ್ಳಂಬೆಳಿಗ್ಗೆ ಶಂಕ್ರಪ್ಪ ಅವರ ಕೊಲೆಯಾಗಿದೆ. ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.