ರೇಪ್ಗೆ ಪ್ರತಿರೋಧ, ಇಟ್ಟಿಗೆಯಿಂದ ಹೊಡೆದು 14ರ ಬಾಲಕನಿಂದ 6 ವರ್ಷದ ಬಾಲಕಿ ಹತ್ಯೆ
14 ವರ್ಷದ ಬಾಲಕನೋರ್ವ ಅತ್ಯಾಚಾರಕ್ಕೆ ಪ್ರತಿರೋಧವೊಡ್ಡಿದ 6 ವರ್ಷದ ಬಾಲಕಿಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಗಾಜಿಯಾಬಾದ್: ದಿನೇ ದಿನೇ ಅಪ್ರಾಪ್ತರು ಅಪರಾಧ ಪ್ರಕರಣದಲ್ಲಿ ತೊಡಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಇಬ್ಬರು ಅಪ್ರಾಪ್ತರು 18 ವರ್ಷದ ತರುಣನನ್ನು ಚಾಕು ಇರಿದು ಕೊಲೆ ಮಾಡಿದ್ದರು. ಈ ಘಟನೆ ಮಾಸುವ ಮೊದಲೇ ಈಗ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಅಪ್ರಾಪ್ತನಿಂದ ಮತ್ತೊಂದು ಭೀಭತ್ಸ ಕೃತ್ಯ ನಡೆದಿದೆ. 14 ವರ್ಷದ ಬಾಲಕನೋರ್ವ ಅತ್ಯಾಚಾರಕ್ಕೆ ಪ್ರತಿರೋಧವೊಡ್ಡಿದ 6 ವರ್ಷದ ಬಾಲಕಿಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಾಲಕನ ಹಲ್ಲೆಯಿಂದ ಬಾಲಕಿಗೆ ತೀವ್ರ ರಕ್ತಸ್ರಾವವಾಗಿದ್ದು, ಈ ವೇಳೆ ಬಾಲಕ ಆಕೆಯನ್ನು ಅಲ್ಲೇ ಬಿಟ್ಟು, ಘಟನೆಯಿಂದ ತನ್ನ ಕೈಗೆ ಆದ ರಕ್ತವನ್ನು ಅಲ್ಲೇ ಸಮೀಪದ ಕೆರೆಯಲ್ಲಿ ತೊಳೆದು ಅಲ್ಲಿಂದ ಸೀದಾ ಶಾಲೆಗೆ ಹೊರಟು ಹೋಗಿದ್ದಾನೆ.
ಹೀಗೆ ಹತ್ಯೆಯಾದ ಬಾಲಕಿ ಶನಿವಾರ ಮುಂಜಾನೆ ತನ್ನ ಸ್ನೇಹಿತೆಯರ ಜೊತೆ ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದಳು(Missing). ಇದಾದ ಬಳಿಕ ಬಾಲಕಿ ಗಂಭೀರ ಗಾಯಗಳ ಜೊತೆ ಮನೆ ಹಿಂಭಾಗದ ಪೊದೆಯೊಂದರ (Bush)ಬಳಿ ಪತ್ತೆಯಾಗಿದ್ದಳು. ಗಾಜಿಯಾಬಾದ್ನ (Gaziabad) ಮೋದಿನಗರದ (Modinagar) ಬಳಿ ಈ ಘಟನೆ ನಡೆದಿದೆ. ಕೂಡಲೇ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದರಾದರೂ, ಬಾಲಕಿಯನ್ನು ಆಸ್ಪತ್ರೆಗೆ ಕರೆತರುತ್ತಲೇ ಮಾರ್ಗಮಧ್ಯೆ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ಮೊಬೈಲ್ ಕಳ್ಳತನಕ್ಕೆ ಪ್ರತಿರೋಧ: ಇಬ್ಬರು ಬಾಲಕರಿಂದ 18 ವರ್ಷದ ತರುಣನ ಹತ್ಯೆ
ಗ್ರಾಮದ ನಿವಾಸಿಯೊಬ್ಬರು ಪುಟ್ಟ ಬಾಲಕಿಯೊಬ್ಬಳು ಮನೆ ಹಿಂಭಾಗದ ಪೊದೆ ಸಮೀಪದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿಸಿದರು. ನಾವು ಅಲ್ಲಿಗೆ ತೆರಳುವ ವೇಳೆ ಆಕೆಯ ಪೋಷಕರು ಅಲ್ಲಿಗೆ ಆಗಮಿಸಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ತಲುಪುವ ಮೊದಲೇ ಆಕೆ ಗಂಭೀರ ಗಾಯಗಳಿಂದಾಗಿ ಪ್ರಾಣ ಬಿಟ್ಟಿದ್ದಾಳೆ. ಆಕೆಯ ಮುಖ ಹಾಗೂ ತಲೆಯನ್ನು ಗಟ್ಟಿಯಾದ ವಸ್ತುವಿನಿಂದ ಹೊಡೆದು ಜಜ್ಜಿಹಾಕಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ (Initial Investigation)ತಿಳಿದು ಬಂದಿದೆ. ಬಹುಶ: ಇಟ್ಟಿಗೆ ಅಥವಾ ಕಲ್ಲಿನಿಂದ ಆಕೆಯ ತಲೆಗೆ ಹೊಡೆಯಲಾಗಿದೆ ಎಂದು ಗಾಜಿಯಾಬಾದ್ ಗ್ರಾಮೀಣ ಡಿಸಿಪಿ ರವಿಕುಮಾರ್ (DCP Ravikumar) ಹೇಳಿದ್ದಾರೆ.
9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ರೇಪ್: ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ಮೇಲ್..!
ಇನ್ನು ಈಕೆಯ ಜೊತೆ ಆಟವಾಡುತ್ತಿದ್ದ ಮಕ್ಕಳನ್ನು ಪೊಲೀಸರು ಕೇಳಿದಾಗ, ಆಕೆ ಮನೆಗೆ ಹೋಗಿರಬಹುದು ಎಂದು ನಾವು ಭಾವಿಸಿದೆವು ಎಂದು ಹೇಳಿದ್ದಾರೆ. ಇದಾದ ಬಳಿಕ ಬಾಲಕಿಯ ಪೋಷಕರು ದೂರು ದಾಖಲಿಸಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ಮಾಡಲು ಪೊಲೀಸರು ಏಳು ಸಣ್ಣ ತಂಡಗಳನ್ನು ರಚನೆ ಮಾಡಿದ್ದಾರೆ. ಇದರಲ್ಲಿ ಒಂದು ತಂಡ ಸ್ಥಳದಿಂದ ಸಾಕ್ಷ್ಯ ಕಲೆ ಹಾಕಿದ್ದು, ಮತ್ತೊಂದು ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಮತ್ತೊಂದು ತಂಡ ಶಾಲೆಯ ವಿದ್ಯಾರ್ಥಿಗಳು (Student) ಹಾಗೂ ಶಿಕ್ಷಕರ (Teacher)ಬಳಿ ಘಟನೆ ಬಗ್ಗೆ ವಿಚಾರಿಸಿದೆ. ಹಾಗೆಯೇ ಮತ್ತೊಂದು ತಂಡ ಶಂಕಿತರ ಪಟ್ಟಿ ಮಾಡಿದೆ.
ಬಾಲಕಿ ಮುಂಜಾನೆ 10 ಗಂಟೆ ವೇಳೆ ಆಟವಾಡುವ ಸಲುವಾಗಿ ಹೊರಗಡೆ ಹೋಗಿದ್ದಾಳೆ. ಇದಾಗಿ ಒಂದು ಗಂಟೆಯ ನಂತರ ಮಗುವನ್ನು ಸ್ನಾನ ಮಾಡಿಸುವ ಸಲುವಾಗಿ ತಾಯಿ ಹುಡುಕಾಟ ನಡೆಸಿದಾಗ ಮಗು ನಾಪತ್ತೆಯಾಗಿರುವುದು ತಿಳಿದಿದೆ. ಈ ವೇಳೆ ಆಕೆ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರು ಮಗು ಪತ್ತೆಯಾಗಿಲ್ಲ. ಇದಾಗಿ ಸ್ವಲ್ಪ ಸಮಯದ ನಂತರ ನೆರೆಹೊರೆಯ (Neighbor)ಮನೆಯವರೊಬ್ಬರು ಬಂದು ತಮ್ಮ ಮಗಳು ಮನೆ ಹಿಂಭಾಗದಲ್ಲಿ ಬಿದ್ದಿರುವುದಾಗಿ ಹೇಳಿದರು. ನಾವು ಹೋಗಿ ನೋಡಿದಾಗ ಮಗು ರಕ್ತದ ಮಡಿಲಲ್ಲಿದ್ದಳು . ಕೂಡಲೇ ನಾವು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಆಕೆ ಬದುಕುಳಿಯಲಿಲ್ಲ ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಆದರೆ ವಿಚಾರಣೆ ವೇಳೆ ಗ್ರಾಮಸ್ಥರೊಬ್ಬರು ಬಾಲಕನೋರ್ವ ಸಮೀಪದ ಕೆರೆ ಬಳಿ ಬಾಲಕ ತನ್ನ ರಕ್ತಸಿಕ್ತಿ ಕೈಗಳನ್ನು ತೊಳೆಯುತ್ತಿರುವುದನ್ನು ನೋಡಿರುವುದಾಗಿ ಹೇಳಿದ್ದಾರೆ. ಬಾಲಕಿ ನಾಪತ್ತೆಯಾದ ಸಮಯದಲ್ಲೇ ಈ ಘಟನೆ ನಡೆದಿತ್ತು. ಹೀಗಾಗಿ ಆ ಬಾಲಕನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಹೇಳಿದ್ದಾರೆ. ಬಾಲಕಿ ಒಬ್ಬಳೇ ಇರುವುದನ್ನು ನೋಡಿದ ಬಾಲಕ ಆಕೆಯನ್ನು ಪೊದೆಯ ಬಳಿ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಪ್ರತಿರೋಧವೊಡ್ಡಿದಾಗ ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ವಿಚಾರಣೆ ವೇಳೆ ಬಾಲಕ ತನ್ನ ಈ ಕೃತ್ಯವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.