ಪತಿಯ ಖಾಸಗಿ ಅಂಗ ಸಿಗರೇಟ್‌ನಿಂದ ಸುಟ್ಟು ಕತ್ತರಿಸಲು ಹೋದ ಪತ್ನಿ ಬಂಧನ; ಹೆಂಡತಿಯ ಚಿತ್ರಹಿಂಸೆ ಸಿಸಿ ಕ್ಯಾಮೆರಾದಲ್ಲಿ ಸೆರೆ
ಪತಿಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಯುಪಿಯಲ್ಲಿ ಮಹಿಳೆ ಬಂಧನ
ಸಿಗರೇಟಿನಿಂದ ಪತಿಯ ಖಾಸಗಿ ಭಾಗಗಳನ್ನು ಸುಟ್ಟ ಆರೋಪ
ಸಿಸಿಟಿವಿ ದೃಶ್ಯಾವಳಿಗಳಲ್ಲಿ ದೈಹಿಕ ಹಲ್ಲೆ, ಕತ್ತು ಹಿಸುಕಲು ಯತ್ನ ಸೆರೆ
ಪತಿಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು 30 ವರ್ಷದ ಮೆಹರ್ ಜಹಾನ್ ಎಂಬ ಮಹಿಳೆಯನ್ನು ಬಿಜ್ನೋರ್‌ನಲ್ಲಿ ಬಂಧಿಸಿದ್ದಾರೆ.
ಪತಿ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿದ್ದು, ಅದರಲ್ಲಿ ಪತ್ನಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದು, ಕೈಕಾಲು ಕಟ್ಟಿ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿರುವುದು ಕಂಡುಬಂದಿದೆ.
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮಹಿಳೆಯೊಬ್ಬಳನ್ನು ತನ್ನ ಪತಿಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ಮತ್ತು ಆತನನ್ನು ಕಟ್ಟಿಹಾಕಿದ ನಂತರ ಆತನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಟ್ಟುಹಾಕಿದ್ದಕ್ಕಾಗಿ ಬಂಧಿಸಲಾಗಿದೆ. ಮೆಹರ್ ಜಹಾನ್ ಎಂಬ ಮಹಿಳೆಯನ್ನು ಆಕೆಯ ಪತಿ ನೀಡಿದ ದೂರಿನ ಮೇರೆಗೆ ಮೇ 5ರಂದು ಸಿಯೋಹರಾ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮೆಟ್ ಗಾಲಾ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿಗೊಂದು ಚಾನ್ಸ್ ಕೊಡಬೇಕಿತ್ತು ಅಂತಿದಾರೆ ನೆಟಿಜನ್ಸ್!
ಪತಿ ಮನನ್ ಝೈದಿ, ಮೆಹರ್ ತನಗೆ ಮಾದಕ ದ್ರವ್ಯ ಕುಡಿಸಿದ್ದಾಳೆ ಮತ್ತು ತನ್ನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಡುವ ಮೊದಲು ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.
ಪತಿ ಮನೆಯೊಳಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒದಗಿಸಿದ್ದು, ಮೆಹರ್ ಜಹಾನ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದು, ಕೈಕಾಲು ಕಟ್ಟಿ, ಎದೆಯ ಮೇಲೆ ಕುಳಿತು ಕತ್ತು ಹಿಸುಕಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.
ನಂತರ ವೀಡಿಯೊದಲ್ಲಿ, ಅವಳು ತನ್ನ ಗಂಡನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಡುವುದನ್ನು ಕಾಣಬಹುದು.
ಮನೆ ಬಿಟ್ಟು ಹೋಗಿ ತಾಯಿಯನ್ನು ನೋಯಿಸಿದೆ; ಭಾವುಕರಾದ ಪ್ರಧಾನಿ ಮೋದಿ
ಮನನ್ ಜೈದಿ ತಾನು ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿಕೊಂಡಿದ್ದು, ತನ್ನ ಪತ್ನಿ ತನ್ನನ್ನು ಅಮಲು ಪದಾರ್ಥ ನೀಡಿ, ಕೈಕಾಲು ಕಟ್ಟಿ, ನಿಂದನೆಗೆ ಗುರಿಪಡಿಸಿ ಹಿಂಸೆ ನೀಡಿದ್ದಾಳೆ ಎಂದು ಆರೋಪಿಸಿದ್ದಾನೆ.
ಪೊಲೀಸರು ಮೆಹರ್ ಜಹಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಯತ್ನ, ಹಲ್ಲೆ ಮತ್ತು ಚಿತ್ರಹಿಂಸೆ ಪ್ರಕರಣ ದಾಖಲಿಸಿ, ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ವರದಿಯನ್ನು ದಾಖಲಿಸಿಕೊಂಡು ಆಕೆಯನ್ನು ಬಂಧಿಸಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.