Asianet Suvarna News Asianet Suvarna News

ದರ್ಶನ್‌ & ಗ್ಯಾಂಗ್‌ಗೆ ಜೈಲೇ ಫಿಕ್ಸಾ? ತನಿಖೆ ವೇಳೆ ಸಿಕ್ಕಿದೆ ಸಾಲು ಸಾಲು ವೈಜ್ಞಾನಿಕ ಸಾಕ್ಷ್ಯ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಹಲವು ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಇದು ನಟ ದರ್ಶನ್ ಆತನ ಗ್ಯಾಂಗ್‌ಗೆ ಜೈಲು ಫಿಕ್ಸ್ ಮಾಡುವುದರಲ್ಲಿ ಅನುಮಾನವಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.
 

Renukaswamy Murder Case Bengaluru Police collect scientific evidence against Actor Darshan ckm
Author
First Published Jun 23, 2024, 11:51 AM IST

ಬೆಂಗಳೂರು(ಜೂ.23) ನಟ ದರ್ಶನ್ ಹಾಗೂ ಗ್ಯಾಂಗ್ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ತನಿಖೆ ವೇಳೆ ಪೊಲೀಸರು ಸಾಲು ಸಾಲು ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇತ್ತ ಎಫ್‌ಎಸ್‌ಎಲ್, ಸೋಕೋ ತಂಡಗಳು ಕೂಡ ಕೆಲ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಇದು ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಜೈಲು ಫಿಕ್ಸ್ ಮಾಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಎಫ್‌ಎಸ್‌ಎಲ್ ಪರೀಕ್ಷೆ ವೇಳೆ ದರ್ಶನ್ ಹಾಗೂ ಆತನ ಗ್ಯಾಂಗ್ ಬಟ್ಟೆ ಮೇಲೆ ಅಂಟಿಕೊಂಡಿದ್ದ ರಕ್ತದ ಕಲೆಗೂ ರೇಣುಕಾಸ್ವಾಮಿ ರಕ್ತ ಮ್ಯಾಚ್ ಆಗಿದೆ. ಹತ್ತು ಮಾದರಿಯ ರಕ್ತ ಪಡೆದು  ಎಫ್‌ಎಸ್‌ಎಲ್ ಹಾಗೂ ಸೋಕೋ ತಂಡ ಪರೀಕ್ಷೆ ನಡೆಸಿತ್ತು. ರಾಘವೇಂದ್ರ, ಕೇಶವ್ ಮೂರ್ತಿ, ನಿಖಿಲ್ ನಾಯಕ್, ಕಾರ್ತಿಕ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿದೆ.  

ಕಸ್ಟಡಿಯಲ್ಲಿ 12 ದಿನ, ಜಿಮ್ , ಊಟ, ನಿದ್ದೆಯೂ ಇಲ್ಲ, ಇಷ್ಟೊಂದು ತೂಕ ಕಳೆದುಕೊಂಡ ನಟ ದರ್ಶನ್ !

ರೇಣುಕಾಸ್ವಾಮಿ ಹತ್ಯೆಗೈದು ಮೃತದೇಹವನ್ನು ಸುಮ್ಮನಹಳ್ಳಿ ಮೋರಿಯತ್ತ ಎಸೆಯಲು ಬಳಸಿದ್ದ ವಾಹನದಲ್ಲೂ ರಕ್ತದ ಕಲೆಗಳು ಪತ್ತೆಯಾಗಿದೆ. ಈ ಕಲೆಗಳು ರೇಣುಕಾಸ್ವಾಮಿ ರಕ್ತಕ್ಕೆ ಮ್ಯಾಚ್ ಆಗಿದೆ. ಇತ್ತ ಕೊಲೆ ನಡೆದ ಸ್ಥಳದಲ್ಲಿ ಬಳಸಿದ್ದ ವಸ್ತುಗಳು, ವೆಪನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಸ್ಥಳ ಮಹಜರು ವೇಳೆ ಎಲ್ಲಾ ಕಡೆ ಸೂಕ್ಷ್ಮವಾಗಿ ಪರಿಸೀಲಿಸಿದ ಅಧಿಕಾರಿಗಳ ತಂಡ ಸಾಕ್ಷ್ಯಗಳನ್ನು ಕಲೆ ಹಾಕಿತ್ತು. ಆರೋಪಿಗಳ ಬಟ್ಟೆ, ಶೆಡ್, ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಬಳಸಿದ್ದ ವಸ್ತುಗಳು, ಮೃತದೇಹ ಸಾಗಾಟಕ್ಕೆ ಬಳಸಿದ್ದ ವಾಹನ, ಮೃತದೇಹದ ಬಿಸಾಡಿದ ಸ್ಥಳ, ಅಲ್ಲಿನ ಮಣ್ಣು, ಹೊಡೆದ ರಾಡ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಾದರಿಯಲ್ಲಿ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ.

ಶೆಡ್, ವಾಹನ, ಮೃತದೇಹ ಬಿಸಾಡಿದ ಜಾಗದಲ್ಲಿ ರೇಣುಕಾಸ್ವಾಮಿ ರಕ್ತ ಇರುವುದು ಪತ್ತೆಯಾಗಿದೆ. ಈ ಮೂಲಕ ಘಟನಾ ಸ್ಥಳದಲ್ಲಿ ಹಾಗೂ ಕೃತ್ಯದಲ್ಲಿ ಆರೋಪಿಗಳು ಭಾಗಿಯಾಗಿರುವುದು ಖಚಿತವಾಗಿದೆ.  ವಿಜ್ಞಾನಿಕ ಸಾಕ್ಷ್ಯಗಳ ಪ್ರಕಾರ ನಾಲ್ವರು ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬಹುತೇಕ ಖಚಿತವಾಗಿದೆ. ಇವು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ. ಆರೋಪ ಸಾಬೀತುಪಡಿಸಲು ಪೊಲೀಸರಿಗೆ ಈಗಾಗಲೇ ಸಾಕ್ಷ್ಯಗಳು ಲಭ್ಯವಿದೆ. ಇದರ ಜೊತೆಗೆ ವೈಜ್ಞಾನಿಕ ಸಾಕ್ಷ್ಯಗಳು ಪ್ರಮುಖವಾಗಲಿದೆ. ಹೀಗಾಗಿ ನಟ ದರ್ಶನ್ ಹಾಗೂ ಗ್ಯಾಂಗ್ ಈ ಪ್ರಕರಣದಲ್ಲಿ ಸಂಕಷ್ಟ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

ವಿಜಯಲಕ್ಷ್ಮಿ ಮೇಲೆ ದರ್ಶನ್‌ ಅಂದು ಹಲ್ಲೆ ಮಾಡಿದ್ದು ಯಾಕೆ? ಪತ್ನಿಗೆ ಬಹಿರಂಗ ಕ್ಷಮೆ ಕೇಳಿದ್ದ ನಟ!

Latest Videos
Follow Us:
Download App:
  • android
  • ios