ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ನಟ ದರ್ಶನ್‌ರನ್ನ ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಅಪರಿಚಿತರು ರಿಪೋರ್ಟರ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ರಕ್ಷಿತ್ ಗೌಡ, ಹಲ್ಲೆಗೊಳಗಾದ ರಿಪೋರ್ಟರ್,

ಬೆಂಗಳೂರು (ಜೂ.15): ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ನಟ ದರ್ಶನ್‌ರನ್ನ ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಅಪರಿಚಿತರು ರಿಪೋರ್ಟರ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ರಕ್ಷಿತ್ ಗೌಡ, ಹಲ್ಲೆಗೊಳಗಾದ ರಿಪೋರ್ಟರ್, ರಕ್ತ ಬರುವ ಹಾಗೆ ಹೊಡೆದು ಪರಾರಿಯಾಗಿರುವ ಆಗಂತುಕರು. ಇಂಡಿಯನ್ ಎಕ್ಸ್‌ಪ್ರೆಸ್ ರಿಪೋರ್ಟರ್ ಆಗಿರುವ ರಕ್ಷಿತ್ ಗೌಡ. ಇಂದು ನಟ ದರ್ಶನ್‌ರನ್ನ ಕೋರ್ಟ್‌ಗೆ ಹಾಜರುಪಡಿಸುವ ವೇಳೆ ನೃಪತುಂಗ ರಸ್ತೆಯಲ್ಲಿರೋ ಕೋರ್ಟ್ ಆವರಣಕ್ಕೆ ಹೋಗಿದ್ದರು. ಕೋರ್ಟ್ ಆವರಣದಲ್ಲಿ ಮೊಬೈಲ್ ಹಿಡಿದು ನಿಂತಿದ್ದ ವೇಳೆ ದಾಳಿ ಮಾಡಿರುವ ದುಷ್ಕರ್ಮಿಗಳು. ಯಾರೋ ನೀನು ಅಂತಾ ಕೇಳಿದ್ದಾರೆ. ಮೀಡಿಯಾದವರು ಎಂದು ಹೇಳುತ್ತಿದ್ದಂತೆ ಅವಾಚ್ಯವಾಗಿ ನಿಂದಿಸಿ ರಕ್ತ ಬರುವ ಹಾಗೆ ಹೊಡೆದು ಪರಾರಿಯಾಗಿದ್ದಾರೆ.

ಏನೇ ಕೇಳು, ಏನೇ ಹೇಳು ಕಣ್ಣೀರೇ ನನಗೀಗ, ಪೊಲೀಸ್ ಕಸ್ಟಡಿಯಲ್ಲಿ ನಟ ದರ್ಶನ್ ಜರ್ಝರಿತ

ಹಲ್ಲೆ ಘಟನೆ ಸಂಬಂಧ ದುಷ್ಕರ್ಮಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಎನ್‌ಸಿಆರ್ ದಾಖಲು ಮಾಡಿಕೊಂಡ ಪೊಲೀಸರು ಅಪರಿಚಿತರ ಪತ್ತೆಗೆ ಮುಂದಾಗಿದ್ದಾರೆ.