ಮೀರತ್(ಜ.  21)  ಮೊಬೈಲ್ ಖರೀದಿಗೆ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾನೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಪ್ರಕರಣ ನಡೆದಿದ್ದು ಹೊಸ ಮೊಬೈಲ್ ಫೋನ್ ಖರೀದಿಸಲು ಹಣ ನೀಡದ ಕಾರಣ ಮಲತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ.

ನಂತರ, ಆರೋಪಿ ಮಹಿಳೆಯ ಕೊಲೆ ಬಗ್ಗೆ ತಂದೆಗೆ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪಿಪಿಇ ಕಿಟ್ ಧರಿಸಿ ಬಂದವ ದೋಚಿದ್ದು  25 ಕೆಜಿ ಚಿನ್ನ!

ಆರೋಪಿ ತಂದೆ, ಸಾವಿಗೀಡಾದ ಮಹಿಳೆ ಪತಿ ಅಬ್ದುರ್ ರೆಹ್ಮಾನ್  ಪ್ರಕರಣ ದಾಖಲಿಸಿದ್ದಾರೆ. ಭೀಕರ ಕೊಲೆ ಪ್ರದೇಶದಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಕೊಲೆಯಾದ ರೇಷ್ಮಾ  ಅಬ್ದುರ್ ರೆಹ್ಮಾನ್ ಎರಡನೇ ಹೆಂಡತಿ. ಮೊದಲ ಹೆಂಡತಿ ಮತ್ತು ಮಕ್ಕಳು ಬೇರೆ ಕಡೆ ವಾಸ ಮಾಡುತ್ತಿದ್ದರು.

ಮಂಗಳವಾರ ಮಧ್ಯಾಹ್ನ, ರೇಷ್ಮಾ ಅವರ ಮಲಮಗ  ಖಿಜ್ರ್ ಅವರ ಬಳಿಗೆ ಬಂದು 10,000 ರೂ.ಗೆ ಬೇಡಿಕೆ ಇಟ್ಟಿದ್ದಾನೆ.  ಆದರೆ ತನ್ನ ಬಳಿ ಹಣವಿಲ್ಲ ಎಂದು ಮಹಿಳೆ ಹೇಳಿದಾಗ ಸಿಟ್ಟಿಗೆದ್ದು ಹತ್ಯೆ ಮಾಡಿದ್ದಾನೆ. ನನ್ನ ಮಗ ಕಂಪನಿಯೊಂದರಲ್ಲಿ  ಕೆಲಸ ಮಾಡುತ್ತಿದ್ದು ಅದನ್ನು ಕಳೆದುಕೊಂಡಿದ್ದ. ನಂತರ ಡ್ರಗ್ಸ್ ಅಡಿಕ್ಟ್ ಆಗಿದ್ದ ಎಂದು ತಂದೆ ಹೇಳಿಕೆ ನೀಡಿದ್ದಾರೆ.