ನವದೆಹಲಿ( 21) ಮುಸುಕು ಧರಿಸಿ, ಮಾಸ್ಕ್ ಧರಿಸಿ ಇಲ್ಲ ಮಂಕಿ ಕ್ಯಾಪ್ ಧರಿಸಿ ಕಳ್ಳತನ ಮಾಡಿ ಗುರುತು ಮರೆ ಮಾಚುತ್ತಿದ್ದುದ್ದು ಹಳೆ ಪ್ಲಾನ್.. ಈಗೇನಿದ್ದರೂ ಪಿಪಿಇ ಕಿಟ್ ಜಮಾನಾ...!

ರಾಷ್ಟ್ರ ರಾಜಧಾನಿಯಲ್ಲಿ ಖತರ್‌ ನಾಕ್ ಕಳ್ಳನೊಬ್ಬ ಪಿಪಿಕಿ  ಕಿಟ್ ಧರಿಸಿ ಕಳ್ಳತನ ಮಾಡಿದ್ದಾನೆ. ಸಿಸಿಟಿವಿಯ ದೃಶ್ಯಾವಳಿ ಎಲ್ಲ ಕತೆಯನ್ನು ಹೇಳುತ್ತಿದೆ. ಈತ ಕದ್ದಿದ್ದು ಸಾಮಾನ್ಯ ಮೊತ್ತ ಅಲ್ಲವೇ ಅಲ್ಲ..ಬಿಡಿ

ನವದೆಹಲಿಯ ಆಭರಣ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳ  13 ಕೋಟಿ ರೂ. ಮೌಲ್ಯದ  25 ಕೆಜಿ ಚಿನ್ನ ದೋಚಿದ್ದಾನೆ.   ಆದರೆ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಪಿಪಿಇ ಕಿಟ್ ಕಳಚಿ  ಕೊರೋನಾ ರೋಗಿಯೊಂದಿಗೆ ಟಾಯ್ಲೆಟ್ ನಲ್ಲೆ ಒಂದಾದ ನರ್ಸ್!

ಚಾಲಾಕಿ ಶೇಖ್ ನೂರ್ ನನ್ನು ಬಂಧಿಸಲಾಗಿದೆ.  ಹೊರಗಿನ ಕಟ್ಟಡದಿಂದ ಹಾರಿ ಬಂದು ಅಂಗಡಿ ಪ್ರವೇಶ ಮಾಡಿದ್ದ.

ಕಳ್ಳತನವಾದ ಮರುದಿನ ಬೆಳಗ್ಗೆ ಶೋ ರೂಂ ಓಪನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ರಾತ್ರಿ  9.40 ಕ್ಕೆ ಎಂಟ್ರಿ ಕೊಟ್ಟು ಬೆಳಗಿನ ಜಾವ  3.50  ರವರೆಗೆ ಒಳಗೆ ಇದ್ದಿದ್ದು ಗೊತ್ತಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಭದ್ರತಾ ಸಿಬ್ಬಂದಿ ಹೇಳಿಕೆ ಪಡೆದುಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.