ರೀಲ್ಸ್ ಮಾಡಲು ನಡು ರಸ್ತೆಯಲ್ಲಿ ಚಹಾ ಕುಡಿಯುತ್ತ ಕುಳಿತು ಹೀರೋಯಿಸಂ ತೋರಿಸಿದ್ದ ಟೆಂಪೋ ಚಾಲಕನೊಬ್ಬನನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಏ.19): ರೀಲ್ಸ್ ಮಾಡಲು ನಡು ರಸ್ತೆಯಲ್ಲಿ ಚಹಾ ಕುಡಿಯುತ್ತ ಕುಳಿತು ಹೀರೋಯಿಸಂ ತೋರಿಸಿದ್ದ ಟೆಂಪೋ ಚಾಲಕನೊಬ್ಬನನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ರಾಮಣ್ಣ ಗಾರ್ಡನ್ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಆರೋಪಿತನಾಗಿದ್ದು, ಇತ್ತೀಚಿಗೆ ಎಸ್‌.ಜಿ.ಪಾರ್ಕ್ ಬಳಿ ನಡು ರಸ್ತೆಯಲ್ಲಿ ಕುರ್ಚಿ ಹಾಕಿಕೊಂಡು ಚಹಾ ಕುಡಿಯುತ್ತ ಆತ ರೀಲ್ಸ್ ಮಾಡಿದ್ದ. ಈ ಹುಚ್ಚಾಟದಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ರಸ್ತೆಯಲ್ಲಿ ವಾಹನಗಳಿಗೆ ಅಡ್ಡಪಡಿಸಿದ ಆರೋಪದ ಮೇರೆಗೆ ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಬಿಡುಗಡೆಗೊಳಿಸಿದ್ದಾರೆ. ಈ ರೀತಿ ವರ್ತನೆ ತೋರಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಚಾಲಕನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಮೇಸ್ತ್ರಿ ಆಗಿದ್ದ ದಂಪತಿ ಮೃತದೇಹಗಳು ಪತ್ತೆ

ತನ್ನ ಕುಟುಂಬದ ಜತೆ ನೆಲೆಸಿರುವ ಪ್ರಶಾಂತ್‌, ಟೆಂಪೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾನೆ. ರೀಲ್ಸ್ ಹುಚ್ಚಿಗೆ ಈಗ ಮೈ ಮೇಲೆ ಕೇಸ್ ಹಾಕಿಸಿಕೊಂಡು ಆತ ಸಂಕಷ್ಟ ಎದುರಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರೀಲ್ಸ್ ಮಾಡಲು ನಡು ರಸ್ತೆಯಲ್ಲಿ ಚಹಾ ಕುಡಿಯುತ್ತ ಕುಳಿತು ಹೀರೋಯಿಸಂ ತೋರಿಸಿದ್ದ ಟೆಂಪೋ ಚಾಲಕನೊಬ್ಬನನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Scroll to load tweet…