Asianet Suvarna News Asianet Suvarna News

ಡ್ರಗ್ಸ್ ಕೇಸ್, ಬಾಲಿವುಡ್ ಮೆಗಾಸ್ಟಾರ್ ಪುತ್ರ ಸೇರಿ 10 ಮಂದಿ ಬಂಧನ!

* ಮುಂಬೈ ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ

* ಪಾರ್ಟಿ ಮಧ್ಯೆ ಎನ್‌ಸಿಬಿ ದಾಳಿ

 * ಹಡಗಿನಲ್ಲಿದ್ದ ಕೊಕೇನ್‌, ಹಶೀಶ್‌ ಮತ್ತು ಎಂಡಿಎಂಎ ಸೇರಿ ಅನೇಕ ಮಾದಕ ವಸ್ತುಗಳು ವಶಕ್ಕೆ

Rave Party On Cruise Ship Busted By NCB Bollywood Megastar Son Among 10 Detained pod
Author
Bangalore, First Published Oct 3, 2021, 7:31 AM IST
  • Facebook
  • Twitter
  • Whatsapp

ಮುಂಬೈ(ಅ.03): ದೇಶದ ವಾಣಿಜ್ಯ ನಗರಿ ಮುಂಬೈ(Mumbai) ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯನ್ನು(rave party) ಮಾದಕ ವಸ್ತು ನಿಯಂತ್ರಣ ದಳ(NCB) ಬಯಲು ಮಾಡಿದೆ.

ಈ ವೇಳೆ ಹಡಗಿನಲ್ಲಿದ್ದ ಕೊಕೇನ್‌, ಹಶೀಶ್‌ ಮತ್ತು ಎಂಡಿಎಂಎ ಸೇರಿದಂತೆ ಇನ್ನಿತರ ಅಕ್ರಮ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಪಾರ್ಟಿಯಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ 10 ಮಂದಿ ಪೈಕಿ ಬಾಲಿವುಡ್‌ ಸೂಪರ್‌ಸ್ಟಾರ್‌(Bollywood Superstar) ಒಬ್ಬರ ಪುತ್ರನೂ ಇದ್ದಾನೆ ಎಂದು ಮೂಲಗಳು ತಿಳಿಸಿವೆ.

"

ಈ ಹಡಗಿನಲ್ಲಿ ರೇವ್‌ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರಂತೆ ಇದೇ ಹಡಗಿನಲ್ಲಿ ಮಸ್ತಿಯಲ್ಲಿದ್ದರು. ಮುಂಬೈ ಕರಾವಳಿಯನ್ನು ದಾಟಿದ ಹಡಗು ಸಮುದ್ರದ ಮಧ್ಯ ಭಾಗಕ್ಕೆ ಬರುತ್ತಿದ್ದಂತೆ ರೇವ್‌ ಪಾರ್ಟಿ(Rave party) ಆರಂಭವಾಗಿತ್ತು.

ಈ ವೇಳೆ ಬಂಧಿತರು ಯಾವುದೇ ಭೀತಿಯಿಲ್ಲದೆ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದರು. 7 ಗಂಟೆಗಳ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾದ ಆರೋಪಿಗಳನ್ನು ಭಾನುವಾರ ಮುಂಬೈಗೆ ವಾಪಸ್‌ ಕರೆತರಲಾಗುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios