Asianet Suvarna News Asianet Suvarna News

Crime| ಮಗನ ಅಪ್ರಾಪ್ತ ವಯಸ್ಸಿನ ಪ್ರಿಯತಮೆ ಮೇಲೆ ತಂದೆಯಿಂದಲೇ ಅತ್ಯಾಚಾರ

*  ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಗ್ರಾಮದಲ್ಲಿ ನಡೆದ ಘಟನೆ
*  ಮನೆಯಲ್ಲಿ ಮಲಗಿದ್ದ ಬಾಲಕಿ ಮೇಲೆ ಅಟ್ಟಹಾಸ ಮೆರೆದ ಕಾಮುಕ
*  ಆರೋಪಿಯನ್ನ ಬಂಧಿಸಿದ ಪೊಲೀಸರು 
 
 

Rape on  Minor Girl at Balehonnur in Chikkamagaluru grg
Author
Bengaluru, First Published Nov 10, 2021, 2:48 PM IST
  • Facebook
  • Twitter
  • Whatsapp

ಚಿಕ್ಕಮಗಳೂರು(ನ.10):  ಮಗನ ಅಪ್ರಾಪ್ತ ವಯಸ್ಸಿನ ಪ್ರಿಯತಮೆಯ(Minor Girl) ಮೇಲೆ ತಂದೆಯೇ ಅತ್ಯಾಚಾರವೆಸಗಿದ ಘಟನೆ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಎನ್.ಆರ್.ಪುರ(NR Pura) ತಾಲೂಕಿನ ಬಾಳೆಹೊನ್ನೂರು(Balehonnur) ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಚಂದ್ರು ಎಂಬಾತನೇ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಯಾಗಿದ್ದಾನೆ. 

ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಬಾಲಕಿ(Victim Girl) ಪ್ರಿಯಕರನನ್ನ ಹುಡುಕಿಕೊಂಡು ಆತನ ಮನೆಗೆ ಬಂದಿದ್ದಳು. ಆ ವೇಳೆ ಪ್ರಿಯಕರ ಕೆಲಸಕ್ಕೆಂದು ಮನೆಯಿಂದ ಹೊರಗಡೆ ತೆರಳಿದ್ದ ಎಂದು ತಿಳಿದು ಬಂದಿದೆ. ಮನೆಗೆ ಬಂದಿದ್ದ ಬಾಲಕಿಯನ್ನು ಪ್ರಿಯಕರನ ತಂದೆ ಬಲವಂತವಾಗಿ ಉಳಿಸಿಕೊಂಡಿದ್ದಾನೆ. ರಾತ್ರಿ ಮಗ ಮನೆಗೆ ಬರುತ್ತಾನೆಂದು ಆರೋಪಿ ಚಂದ್ರು ಬಾಲಕಿಯನ್ನ ಉಳಿಸಿಕೊಂಡಿದ್ದನು.

ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದವರ ಮೇಲೆಯೇ ಮಹಿಳೆ ಸುಳ್ಳು ರೇಪ್‌ ಕೇಸ್!

ಮನೆಯಲ್ಲಿ ಮಲಗಿದ್ದ ಬಾಲಕಿ ಮೇಲೆ ಕಾಮುಕ ಚಂದ್ರು ಅಟ್ಟಹಾಸ ಮೆರೆದಿದ್ದಾನೆ. ಆರೋಪಿ ಚಂದ್ರು ವಿರುದ್ಧ ಬಾಲಕಿ ತಾಯಿ ಪೊಲೀಸ್‌ ಠಾಣೆಯಲ್ಲಿ(Police Station) ದೂರು(Complaint) ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ(Study) ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಬಾಳೆಹೊನ್ನೂರು ಪೊಲೀಸ್(Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಚಂದ್ರುನನ್ನ ಪೊಲೀಸರು ಬಂಧಿಸಿದ್ದಾರೆ(Arrest). 

"

ಅತ್ಯಾಚಾರ ಮಾಡಿ ಕೊಲೆ ಶಂಕೆ: ತನಿಖೆಗೆ ಆಗ್ರಹ

ಇನ್ನು ಬಳ್ಳಾರಿ(Ballari) ಜಿಲ್ಲೆಯ ಸಿರುಗುಪ್ಪ(Siruguppa) ತಾಲೂಕಿನಲ್ಲಿ ಅಲೆಮಾರಿ ಸಮುದಾಯದ ಯುವತಿಯರಿಬ್ಬರನ್ನು ಅತ್ಯಾಚಾರ ಮಾಡಿ ಕೊಲೆ(Murder) ಮಾಡಿ ನದಿಗೆ ಬಿಸಾಕಿದ್ದಾರೆ ಎಂಬ ಶಂಕೆಯಿದ್ದು, ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಲೆಮಾರಿ ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ವತಿಯಿಂದ ತಹಸೀಲ್ದಾರ್‌ ಎನ್‌.ಆರ್‌. ಮಂಜುನಾಥ ಸ್ವಾಮಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಅಲೆಮಾರಿ ಗುಡಾರ ಗುಡಿಸಿಲು ನಿವಾಸಿಗಳ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಸಣ್ಣಮಾರೆಪ್ಪ, ಜಿಲ್ಲಾ ಉಪಾಧ್ಯಕ್ಷ, ಮಾಜಿ ತಾಪಂ ಸದಸ್ಯ ವೈ. ಶಂಕ್ರಪ್ಪ, ಕಾರ್ಯಾಧ್ಯಕ್ಷ ಶಿಕಾರಿ ರಾಮು, ಸಿಂದೋಳ್‌ ಸಮಾಜದ ರಾಜ್ಯಾಧ್ಯಕ್ಷ ರಾಹುಲ್‌ ನಾಗಪ್ಪ, ಚನ್ನದಾಸ ಸಮಾಜದ ಜಿಲ್ಲಾಧ್ಯಕ್ಷ ಡಿ. ಗಿರೀಶ್‌, ಮುಖಂಡರಾದ ಮುಖಂಡರಾದ ಗಿರಿಯಪ್ಪ, ಅಶೋಕ, ಅಡಿವೆಪ್ಪ ಸೇರಿದಂತೆ ಅಲೆಮಾರಿ ಸಮುದಾಯದವರು ಇದ್ದರು.

Crime News; ಹೆತ್ತ ತಾಯಿ ಮೇಲೆ ಎರಗಿದ ಕಾಮುಕ... ಎಲ್ಲವೂ ಡ್ರಗ್ಸ್ ಘಾಟು!

ರೇಪಿಸ್ಟ್‌ಗೆ ಗಲ್ಲು ಬದಲು 30 ವರ್ಷ ಜೈಲು ಶಿಕ್ಷೆ 

ಗದಗ(Gadag) ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ 5 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ(Death Sentence) ಗುರಿಯಾಗಿದ್ದ ವ್ಯಕ್ತಿಯ ಸಜೆಯನ್ನು ಸುಪ್ರೀಂ ಕೋರ್ಟ್‌(Supreme Court) ಸೋಮವಾರ 30 ವರ್ಷದ ಜೀವಾವಧಿ ಸಜೆಯಾಗಿ(Life Sentence) ಪರಿವರ್ತಿಸಿದೆ. ‘ಮೃತಳು ಅಪ್ರಾಪ್ತೆಯಾಗಿದ್ದಳು ಎಂಬ ಒಂದೇ ಕಾರಣಕ್ಕೆ ಗಲ್ಲು ಶಿಕ್ಷೆ ನೀಡಲು ಆಗದು’ ಎಂದಿರುವ ಕೋರ್ಟು ಕಳೆದ 40 ವರ್ಷದಲ್ಲಿ ತಾನು ವಿಶ್ಲೇಷಿಸಿದ 67 ಪ್ರಕರಣಗಳನ್ನು ಉಲ್ಲೇಖಿಸಿದೆ.

ಈರಪ್ಪ ಸಿದ್ದಪ್ಪ ಮುರುಗಣ್ಣವರ ಎಂಬಾತನೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ. ಈತ 2019ರಲ್ಲಿ ನರಗುಂದ ತಾಲೂಕಿನ ಖಾನಾಪುರ ಗ್ರಾಮದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಆಕೆಯ ಶವವನ್ನು ಕತ್ತರಿಸಿ ಚೀಲದಲ್ಲಿ ಕಟ್ಟಿಸಮೀಪದ ಬೆಣ್ಣಿಹಳ್ಳಕ್ಕೆ ಎಸೆದಿದ್ದ.

ಬಳಿಕ ಈತನಿಗೆ ಗದಗ ಜಿಲ್ಲಾ ನ್ಯಾಯಾಲಯ(District Court) ಗಲ್ಲು ಶಿಕ್ಷೆ ವಿಧಿಸಿತ್ತು. ಗದಗ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾದ ನಂತರ ಆ ಕೋರ್ಟು ನೀಡಿದ್ದ ಮೊದಲ ನೇಣು ಶಿಕ್ಷೆ ನೀಡಿದ ತೀರ್ಪು ಅದಾಗಿತ್ತು. ಈ ಆದೇಶವನ್ನು 2017ರ ಮಾ.6ರಂದು ಕರ್ನಾಟಕ ಹೈಕೋರ್ಟ್‌(Karnataka High Court) ಎತ್ತಿ ಹಿಡಿದಿತ್ತು. ಇದನ್ನು ಈರಪ್ಪನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ.
 

Follow Us:
Download App:
  • android
  • ios